For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ಮುಂದಿನ ಸಿನಿಮಾಗೆ ನಾಯಕಿಯಾದ ಕನ್ನಡತಿ?

  |

  ಟಾಲಿವುಡ್ ಸ್ಟಾರ್ ನಟ ಪವನ್ ಕಲ್ಯಾಣ್ ವರ್ಷದ ಬಳಿಕ ವಕೀಲ್ ಸಾಬ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ರಾಜಕೀಯದ ಮೇಲಿನ ಕಡುಮೋಹದಿಂದ ಸಿನಿಮಾಗೆ ಬ್ರೇಕ್ ನೀಡಿದ್ದ ಪವನ್ ಗೆ, ಸಿನಿಮಾ ಸೆಳೆತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ರಾಜಕೀಯ ಒತ್ತಡದ ನಡುವೆಯೂ ಪವನ್ ಕಲ್ಯಾಣ್ ಎರಡು ವರ್ಷಗಳ ಬಳಿಕ ವಕೀಲ್ ಸಾಬ್ ಸಿನಿಮಾ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  ತಮ್ಮ ಕನಸಿನ ಚಿತ್ರಕ್ಕೆ ರಶ್ಮಿಕಾ ಬೇಕು ಅಂದ್ರು ಚಿರಂಜೀವಿ | Chiranjeevi | Rashmika mandanna

  ವಕೀಲ್ ಸಾಬ್ ಚಿತ್ರೀಕರಣ ಮುಕ್ತಾಯವಾಗುವುದರೊಳಗೆ ಪವನ್ ಕಲ್ಯಾಣ್ ಮುಂದಿನ ಹಿಸ್ಟಾರಿಕಲ್ ಸಿನಿಮಾ ಸದ್ದು ಮಾಡುತ್ತಿದೆ. ಹೌದು, ಪವನ್ ಕಲ್ಯಾಣ್ ಮೊಗಲ್ ಸಾಮ್ರಾಜ್ಯದ ಹಿನ್ನಲೆಯ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೀಗ ನಾಯಕಿ ಫಿಕ್ಸ್ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಮುಂದೆ ಓದಿ...

  ಮೊದಲ ಬಾರಿಗೆ ಚಿಕ್ಕಪ್ಪನ ಸಿನಿಮಾದಲ್ಲಿ ರಾಮ್ ಚರಣ್: ಪಾತ್ರ ಯಾವುದು?ಮೊದಲ ಬಾರಿಗೆ ಚಿಕ್ಕಪ್ಪನ ಸಿನಿಮಾದಲ್ಲಿ ರಾಮ್ ಚರಣ್: ಪಾತ್ರ ಯಾವುದು?

  ಕ್ರಿಶ್ ನಿರ್ದೇಶನದಲ್ಲಿ ಬರ್ತಿದೆ ಹಿಸ್ಟಾರಿಕಲ್ ಸಿನಿಮಾ

  ಕ್ರಿಶ್ ನಿರ್ದೇಶನದಲ್ಲಿ ಬರ್ತಿದೆ ಹಿಸ್ಟಾರಿಕಲ್ ಸಿನಿಮಾ

  ಖ್ಯಾತ ನಿರ್ದೇಶಕ ಕ್ರಿಶ್ ಪವನ್ ಕಲ್ಯಾಣ್ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. 'ಕಥಾನಾಯಕುಡು' ಮತ್ತು ಹಿಂದಿಯಲ್ಲಿ 'ಮಣಿಕರ್ಣಿಕಾ' ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಕ್ರಿಶ್ ಈಗ ಪವರ್ ಸ್ಟಾರ್ ಪವನ್ ಕಲ್ಯಾಣ್ ಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಸದ್ಯ ಕ್ರಿಶ್, ಚಿತ್ರದ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಮುಗಿಯುತ್ತಿದ್ದಂತೆ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

  'ಈ' ಕಾರಣಕ್ಕಾಗಿ ಪವನ್ ಕಲ್ಯಾಣ್ ಗೆ ನಿರ್ದೇಶನ ಮಾಡುವುದಿಲ್ಲವಂತೆ ರಾಜಮೌಳಿ'ಈ' ಕಾರಣಕ್ಕಾಗಿ ಪವನ್ ಕಲ್ಯಾಣ್ ಗೆ ನಿರ್ದೇಶನ ಮಾಡುವುದಿಲ್ಲವಂತೆ ರಾಜಮೌಳಿ

  ಮೊಗಲ್ ಸಾಮ್ರಾಜ್ಯದ ಕಥೆ

  ಮೊಗಲ್ ಸಾಮ್ರಾಜ್ಯದ ಕಥೆ

  ಪವನ್ ಕಲ್ಯಾಣ್ ಅಭಿನಯಿಸುವ ಹಿಸ್ಟಾರಿಕಲ್ ಸಿನಿಮಾ ಮೊಘಲ್ ಸಾಮ್ರಾಜ್ಯದ ಕಥೆಯಂತೆ. ಮತ್ತು ಕೊಹಿನೂರು ವಜ್ರವನ್ನು ಕದಿಯಲು ಸಂಚು ರೂಪಿಸುವ ಕಳ್ಳರ ಕಥೆಯ ಸುತ್ತ ಸುತ್ತುವ ಸಿನಿಮಾ ಎಂದು ಹೇಳಲಾಗುತ್ತಿದೆ.

  ಪವನ್ ಕಲ್ಯಾಣ್ ಗೆ ಅನುಷ್ಕಾ ನಾಯಕಿ

  ಪವನ್ ಕಲ್ಯಾಣ್ ಗೆ ಅನುಷ್ಕಾ ನಾಯಕಿ

  ಐತಿಹಾಸಿಕ ಸಿನಿಮಾಗಳಿಗೆ ಖ್ಯಾತಿಗಳಿಸಿರುವ ನಟಿ ಅನುಷ್ಕಾ ಪವನ್ ಕಲ್ಯಾಣ್ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಹುಬಲಿಯಲ್ಲಿ ದೇವಸೇನ ಆಗಿ ಅಭಿಮಾನಿಗಳ ಮಗೆದ್ದಿದ್ದ ಅನುಷ್ಕಾ, ಮತ್ತೊಂದು ಬಿಗ್ ಬಜೆಟ್ ಸಿನಿಮಾದ ಮೂಲಕ ಪವನ್ ಕಲ್ಯಾಣ್ ಗೆ ನಾಯಕಿಯಾಗಿ ಬಣ್ಣಹಚ್ಚಲು ಸಿದ್ಧರಾಗಿದ್ದಾರಂತೆ. ಈಗಾಗಲೆ ಅನುಷ್ಕಾ ಜೊತೆ ಮಾತುಕತೆ ನಡೆಸಿದ್ದು, ಸ್ವೀಟಿ ಅಭಿನಯಿಸುವುದು ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

  ಅಣ್ಣ ಚಿರಂಜೀವಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಪವನ್ ಕಲ್ಯಾಣ್ ಭರ್ಜರಿ ಗಿಫ್ಟ್ಅಣ್ಣ ಚಿರಂಜೀವಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಪವನ್ ಕಲ್ಯಾಣ್ ಭರ್ಜರಿ ಗಿಫ್ಟ್

  ಮೊದಲ ಬಾರಿಗೆ ಪವನ್ ಗೆ ಅನುಷ್ಕಾ ನಾಯಕಿ

  ಮೊದಲ ಬಾರಿಗೆ ಪವನ್ ಗೆ ಅನುಷ್ಕಾ ನಾಯಕಿ

  ನಟಿ ಅನುಷ್ಕ ಶೆಟ್ಟಿ ಟಾಲಿವುಡ್ ನ ಬಹುತೇಕ ಸ್ಟಾರ್ ನಟರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಪವನ್ ಕಲ್ಯಾಣ್ ಜೊತೆ ತೆರೆಹಂಚಿಕೊಂಡಿಲ್ಲ. ಪವನ್ ಮತ್ತು ಅನುಷ್ಕಾ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಒಂದು ವೇಳೆ ಅನುಷ್ಕಾ ಕ್ರಿಶ್ ನಿರ್ದೇಶನದ ಸಿನಿಮಾದಲ್ಲಿ ಪವನ್ ಕಲ್ಯಾಣ್ ಗೆ ನಾಯಕಿಯಾಗಿ ಕಾಣಿಸಿಕೊಂಡರೆ ಅಭಿಮಾನಿಗಳಿಗೆ ದೊಡ್ಡ ಹಬ್ಬವಾಗಲಿದೆ.

  ಚಿಕ್ಕಪ್ಪನ ಸಿನಿಮಾದಲ್ಲಿ ರಾಮ್ ಚರಣ್

  ಚಿಕ್ಕಪ್ಪನ ಸಿನಿಮಾದಲ್ಲಿ ರಾಮ್ ಚರಣ್

  ಈ ಚಿತ್ರದಲ್ಲಿ ನಟ ರಾಮ್ ಚರಣ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅತಿಥಿ ಪಾತ್ರದ ಮೂಲಕ ರಾಮ್ ಚರಣ್, ಪವನ್ ಜೊತೆ ಮೊದಲ ಬಾರಿಗೆ ತೆರೆಹಂಚಿಕೊಳ್ಳಲಿದ್ದಾರೆ. ಕಥಾನಾಯಕನ ಹಿನ್ನಲೆಯನ್ನು ವಿವರಿಸುವ ಪಾತ್ರಧಾರಿಯಾಗಿ ರಾಮ್ ಚರಣ್ ಬಣ್ಣಹಚ್ಚಲಿದ್ದಾರಂತೆ. ಆದರೆ ಈ ಬಗ್ಗೆ ಇನ್ನೂ ಚಿತ್ರತಂಡ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ.

  English summary
  Actress Anushka Shetty Female Lead Opposite Actor Pawan Kalyan Next.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X