For Quick Alerts
  ALLOW NOTIFICATIONS  
  For Daily Alerts

  'ನಾನು ಒಬ್ಬರನ್ನ ತುಂಬಾ ಪ್ರೀತಿಸುತ್ತಿದ್ದೆ': ಪ್ರೀತಿ ವಿಚಾರ ಬಹಿರಂಗ ಪಡಿಸಿದ ಅನುಷ್ಕಾ

  |

  ನಟಿ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಇತ್ತೀಚಿಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅನುಷ್ಕಾ ತೆಲುಗಿನ ಖ್ಯಾತ ನಿರ್ದೇಶಕರನ್ನು ಮದುವೆ ಆಗುತ್ತಿದ್ದಾರೆ, ಕ್ರಿಕೆಟರ್ ಅನ್ನು ಮದುವೆ ಆಗುತ್ತಾರೆ ಹೀಗೆ ಸ್ವೀಟಿಯ ಮದುವೆ ವಿಚಾರ ಇತ್ತೀಚಿಗೆ ಸಖತ್ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೆ ಈಗ ನಟಿ ಅನುಷ್ಕಾ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

  ಮನೆಯಲ್ಲಿ ಏನ್ ಮಾಡ್ತಿದ್ದಾರೆ ಸ್ಯಾಂಡಲ್ ವುಡ್ ಸ್ಟಾರ್ಸ್? | Rishab Shetty | Work from home

  ಅನುಷ್ಕಾ ಸದ್ಯ ನಿಶಬ್ದಂ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿ ಇರುವ ಅನುಷ್ಕಾ, ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡುವಾಗ "ನಾನು ಒಬ್ಬರನ್ನು ತುಂಬಾ ಪ್ರೀತಿಸುತ್ತಿದ್ದೆ" ಎಂದು ಹೇಳುತ್ತ ಲವ್ ಲೈಫ್ ಜೀವನವನ್ನು ತೆರೆದಿಟ್ಟಿದ್ದಾರೆ. ಮುಂದೆ ಓದಿ..

  ನಿರ್ದೇಶಕರ ಜೊತೆ ಅನುಷ್ಕಾ ಮದುವೆ: ಸ್ವೀಟಿ ಹೇಳಿದ್ದೇನು?ನಿರ್ದೇಶಕರ ಜೊತೆ ಅನುಷ್ಕಾ ಮದುವೆ: ಸ್ವೀಟಿ ಹೇಳಿದ್ದೇನು?

  'ನಾನು ಒಬ್ಬರನ್ನ ತುಂಬ ಪ್ರೀತಿಸುತ್ತಿದ್ದೆ'

  'ನಾನು ಒಬ್ಬರನ್ನ ತುಂಬ ಪ್ರೀತಿಸುತ್ತಿದ್ದೆ'

  ನಟಿ ಅನುಷ್ಕಾ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. "ನಾನು ಕೂಡ ಒಬ್ಬರನ್ನು ಪ್ರೀತಿಸುತ್ತಿದ್ದೆ. ಆದರೆ 2008ರಲ್ಲಿಯೆ ಇಬ್ಬರು ಬೇರೆ ಬೇರೆ ಆದೆವು. ನಮ್ಮಿಬ್ಬರ ಪ್ರೀತಿಯ ಜೀವನ ತುಂಬ ಸುಂದರವಾಗಿತ್ತು. ಆದರೆ 2008ರಲ್ಲಿ ಬ್ರೇಕ್ ಅಪ್ ಆಯಿತು. ಮಾತುಕತೆಯ ಮೂಲಕ ಇಬ್ಬರು ಪ್ರೀತಿಯ ಸಂಬಂಧವನ್ನು ಕಡಿದುಕೊಂಡೆವು. ಆದರೆ ಆ ವ್ಯಕ್ತಿ ಯಾರು ಎಂದು ಹೇಳಲು ಇಷ್ಟಪಡುವುದಿಲ್ಲ" ಎಂದು ಹೇಳಿದ್ದಾರೆ.

  ಈಗಲು ಇಬ್ಬರು ಉತ್ತಮ ಸ್ನೇಹಿತರಾಗಿದ್ದೀವಿ

  ಈಗಲು ಇಬ್ಬರು ಉತ್ತಮ ಸ್ನೇಹಿತರಾಗಿದ್ದೀವಿ

  "ನಾವಿಬ್ಬರು ಬೇರೆ ಬೇರೆ ಆದರೂ, ಇಬ್ಬರ ಸ್ನೇಹ ಚೆನ್ನಾಗಿಯೆ ಇದೆ. ಇಬ್ಬರ ನಡುವೆ ಸಣ್ಣ ಭಿನ್ನಾಭಿಪ್ರಾಯಗಳಿದ್ದವು ಹಾಗಾಗಿ ಬೇರೆ ಬೇರೆ ಆದೆವು. ಈಗ ಅವರ ಹೆಸರನ್ನು ಹೇಳಿದರೆ ಆ ವ್ಯಕ್ತಿಯ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಹೆಸರನ್ನು ಹೇಳಲು ಇಷ್ಟಪಡುವುದಿಲ್ಲ. ನನ್ನ ಮತ್ತು ಅವರ ಸಂಬಂಧ ತೀರ ವೈಯಕ್ತಿಕವಾದದ್ದು" ಎಂದು ಹೇಳಿದ್ದಾರೆ.

  ಮೆಗಾ ಸ್ಟಾರ್ ಚಿರಂಜೀವಿ ಜೊತೆ ನಟಿ ಅನುಷ್ಕಾ ರೋಮ್ಯಾನ್ಸ್?ಮೆಗಾ ಸ್ಟಾರ್ ಚಿರಂಜೀವಿ ಜೊತೆ ನಟಿ ಅನುಷ್ಕಾ ರೋಮ್ಯಾನ್ಸ್?

  ಮದುವೆ ಬಗ್ಗೆ ಅನುಷ್ಕಾ ಹೇಳಿದ್ದೇನು?

  ಮದುವೆ ಬಗ್ಗೆ ಅನುಷ್ಕಾ ಹೇಳಿದ್ದೇನು?

  ಇತ್ತೀಚಿಗೆ ಅನುಷ್ಕಾ ಮದುವೆ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಸಮಾರಂಭವೊಂದರಲ್ಲಿ ನಟಿ ಮತ್ತು ನಿರ್ಮಾಪಕಿ ಚಾರ್ಮಿ, ಅನುಷ್ಕಾ ಶೆಟ್ಟಿ ಬಳಿ ಮದುವೆ ಯಾವಾಗ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅನುಷ್ಕಾ "ನನಗೂ ಇದೆ ಪ್ರಶ್ನೆ ಕಾಡುತ್ತಿದೆ. ಯಾವಾಗ ಮದುವೆ? ನನಗೂ ಕೂಡ ಗೊತ್ತಿಲ್ಲ" ಎಂದು ಒಂದೇ ಮಾತಿನಲ್ಲಿ ಉತ್ತರ ನೀಡಿದ್ದಾರೆ. ಇನ್ನು ನಿರ್ದೇಶಕರ ಜೊತೆ ಮದುವೆ ಸುದ್ದಿಯನ್ನು ತಳ್ಳಿಹಾಕಿದ್ದಾರೆ.

  ಪ್ರಭಾಸ್ ಜತೆಗಿನ ಸಂಬಂಧದ ಬಗ್ಗೆ ಕೊನೆಗೂ ಬಾಯ್ಬಿಟ್ಟ ಅನುಷ್ಕಾ ಶೆಟ್ಟಿ ಹೇಳಿದ್ದೇನು?ಪ್ರಭಾಸ್ ಜತೆಗಿನ ಸಂಬಂಧದ ಬಗ್ಗೆ ಕೊನೆಗೂ ಬಾಯ್ಬಿಟ್ಟ ಅನುಷ್ಕಾ ಶೆಟ್ಟಿ ಹೇಳಿದ್ದೇನು?

  ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ಅನುಷ್ಕಾ

  ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ಅನುಷ್ಕಾ

  ನಟಿ ಅನುಷ್ಕಾ ಶೆಟ್ಟಿ ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. 2005ರಲ್ಲಿ ಬಣ್ಣದ ಲೋಕದ ಪಯಣ ಆರಂಭಿಸಿದ ಅನುಷ್ಕಾ ಈಗಲೂ ಬಹುಬೇಡಿಯ ನಟಿಯಾಗಿ ಮೆರೆಯುತ್ತಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರೀಯರಾಗಿರುವ ಅನುಷ್ಕಾ ಸದ್ಯ ನಿಶಬ್ದಂ ಸಿನಿಮಾ ರಿಲೀಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಚಿತ್ರಕ್ಕೆ ಅನುಷ್ಕಾ ನಾಯಕಿ ಎಂದು ಹೇಳಲಾಗುತ್ತಿದೆ.

  English summary
  Actress Anushka Shetty revealed about her love relationship.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X