For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ನ ಈ ಸಿನಿಮಾ ನೋಡಲು ಕಾತರರಾಗಿದ್ದಾರೆ ಅನುಷ್ಕಾ ಶೆಟ್ಟಿ

  |

  ಪ್ರಭಾಸ್-ಅನುಷ್ಕಾ ಶೆಟ್ಟಿ ಬಗ್ಗೆ ಹರಿದಾಡಿದಷ್ಟು ಗಾಳಿ ಸುದ್ದಿಗಳು ದಕ್ಷಿಣ ಭಾರತದ ಇನ್ನಾವ ಸ್ಟಾರ್ ನಟ-ನಟಿಯರ ಬಗ್ಗೆಯೂ ಹರಿದಾಡಿದಂತಿಲ್ಲ.

  KGF Garuda ಖ್ಯಾತಿಯ RamChandra , Chapter 2 ಬಗ್ಗೆ ಹೇಳೋದೇನು - Part 1 | Filmibeat Kannada

  ಪ್ರಭಾಸ್-ಅನುಷ್ಕಾ ಮದುವೆ ಆಗುತ್ತಿದ್ದಾರೆ, ಮದುವೆ ಆಗಿಬಿಟ್ಟಿದ್ದಾರೆ, ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ, ಗೆಳೆತನ ಕಟ್ ಮಾಡಿಕೊಂಡಿದ್ದಾರೆ ಹೀಗೆ ಹತ್ತು ಹಲವು ಸುದ್ದಿಗಳು ಈ ಜೋಡಿಯ ಬಗ್ಗೆ ಹರಿದಾಡುತ್ತಲೇ ಇರುತ್ತವೆ.

  ವೆಬ್ ಸೀರಿಸ್ ಆಫರ್ ರಿಜೆಕ್ಟ್ ಮಾಡಿದ್ದೇಕೆ ನಟಿ ಅನುಷ್ಕಾ ಶೆಟ್ಟಿ?

  ಪ್ರಭಾಸ್ ಹಾಗೂ ಅನುಷ್ಕಾ ಯಾವಾಗಲೇ ಮಾಧ್ಯಮಗಳ ಮುಂದೆ ಎದುರಾದರೂ ಇಬ್ಬರನ್ನೂ ಈ ಕೆಲವು ಸಾಮಾನ್ಯ ಪ್ರಶ್ನೆಗಳನ್ನು ಕೇಳಿಯೇ ತೀರುತ್ತವೆ ಮಾಧ್ಯಮಗಳು. ಆದರೆ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮಾತ್ರ ನಗುತ್ತಲೇ ತಮ್ಮ ಬಗ್ಗೆಯ ಸುಳ್ಳು ಸುದ್ದಿಗೆ ಸ್ಪಷ್ಟನೆ ನೀಡುತ್ತಾರೆ.

  ಪ್ರಭಾಸ್ ಸಿನಿಮಾ ನೋಡಲು ಕಾತರ

  ಪ್ರಭಾಸ್ ಸಿನಿಮಾ ನೋಡಲು ಕಾತರ

  ಸಾಮಾಜಿಕ ಜಾಲತಾಣದಿಂದ ದೂರವಿದ್ದ ಅನುಷ್ಕಾ ಶೆಟ್ಟಿ, ಇನ್‌ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಸಕ್ರಿಯರಾಗಿದ್ದು, ಪ್ರಭಾಸ್ ಅವರ ಸಿನಿಮಾವೊಂದನ್ನು ನೋಡಲು ತಾವು ಕಾತರದಿಂದ ಕಾಯುತ್ತಿರುವುದಾಗಿ ಪೋಸ್ಟ್ ಮಾಡಿದ್ದಾರೆ.

  ರಾಧೆ-ಶ್ಯಾಮ್ ಪೋಸ್ಟರ್ ಹಂಚಿಕೊಂಡಿರುವ ಅನುಷ್ಕಾ

  ರಾಧೆ-ಶ್ಯಾಮ್ ಪೋಸ್ಟರ್ ಹಂಚಿಕೊಂಡಿರುವ ಅನುಷ್ಕಾ

  ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ 'ರಾಧೆ-ಶ್ಯಾಮ್' ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ಅನುಷ್ಕಾ ಶೆಟ್ಟಿ. ಪ್ರಭಾಸ್, ಪೂಜಾ ಹೆಗ್ಡೆ, ನಿರ್ದೇಶಕ, ನಿರ್ಮಾಪಕರಿಗೆ ಶುಭಾಶಯ ತಿಳಿಸಿದ್ದು, ಈ ಸಿನಿಮಾ ನೋಡಲು ಕಾತರಳಾಗಿದ್ದೇನೆ ಎಂದಿದ್ದಾರೆ.

  ಚಿತ್ರರಂಗಕ್ಕೆ ಗುಡ್ ಬೈ ಹೇಳಲಿದ್ದಾರಾ 'ಸ್ವೀಟಿ' ಅನುಷ್ಕಾ ಶೆಟ್ಟಿ?

  ನಿಶ್ಯಬ್ಧಂ ಬಿಡುಗಡೆ ಆಗಬೇಕಿತ್ತು

  ನಿಶ್ಯಬ್ಧಂ ಬಿಡುಗಡೆ ಆಗಬೇಕಿತ್ತು

  ಅನುಷ್ಕಾ ಶೆಟ್ಟಿ ಅಭಿನಯದ ನಿಶ್ಯಬ್ಧಂ ಸಿನಿಮಾ ತೆರೆಗೆ ಬರಬೇಕಿದೆ. ಈ ಸಿನಿಮಾ ಮೂರು ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಆಗಲಿದೆ. ಆಗಸ್ಟ್‌ನಲ್ಲಿ ಈ ಸಿನಿಮಾ ಬಿಡುಗಡೆ ಆಗಬೇಕಿತ್ತು ಆದರೆ ಕೊರೊನಾ ಕಾರಣದಿಂದ ಮುಂದಕ್ಕೆ ಹೋಗಿದೆ.

  ಅನುಷ್ಕಾ ಶೆಟ್ಟಿ ಡೇಟಿಂಗ್ ರೂಮರ್: ಕರಣ್ ಜೋಹರ್ ವಿರುದ್ಧ ಕಿಡಿಕಾರಿದ್ದ ಪ್ರಭಾಸ್

  ದೀಪಿಕಾ ಪಡುಕೋಣೆ ಜೊತೆ ಸಿನಿಮಾ

  ದೀಪಿಕಾ ಪಡುಕೋಣೆ ಜೊತೆ ಸಿನಿಮಾ

  ಇನ್ನು ಪ್ರಭಾಸ್ ಪ್ರಸ್ತುತ ಎರಡು ಪ್ರಮುಖ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪೂಜಾ ಹೆಗ್ಡೆ ನಾಯಕಿಯಾಗಿರುವ 'ರಾಧೆ-ಶ್ಯಾಮ್' ಒಂದಾದರೆ, ಇನ್ನೂ ಹೆಸರಿಡದ ಸಿನಿಮಾಕ್ಕೆ ದೀಪಿಕಾ ಪಡುಕೋಣೆಯೊಂದಿಗೆ ನಟಿಸುತ್ತಿದ್ದಾರೆ.

  English summary
  Actcress Anushka Shetty waiting to watch Prabhas's next movie Radhe-Shyam. She shared poster.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X