For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ಅನುಷ್ಕಾ: ಅಭಿಮಾನಿಗಳಿಗೆ ಭಾವುಕ ಪತ್ರ

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. 2005ರಲ್ಲಿ ಬಣ್ಣದ ಲೋಕದ ಪಯಣ ಆರಂಭಿಸಿದ ಅನುಷ್ಕಾ ಈಗಲೂ ಬಹಬೇಡಿಯ ನಟಿಯಾಗಿ ಮೆರೆಯುತ್ತಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರೀಯರಾಗಿರುವ ಅನುಷ್ಕಾ ಸದ್ಯ ನಿಶಬ್ದಂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  ಇತ್ತೀಚಿಗೆ ಅನುಷ್ಕಾ 15 ವರ್ಷ ಪೂರೈಸಿದ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಎಸ್.ಎಸ್ ರಾಜಮೌಳಿ, ಪುರಿ ಜಗನ್ನಾಥ್, ಸುರೇಶ್ ಬಾಬು, ನಟಿ ಮತ್ತು ನಿರ್ಮಾಪಕಿ ಚಾರ್ಮಿ ಕೌರ್ ಸೇರಿದಂತೆ ಸಾಕಷ್ಟು ಗಣ್ಯರು ಭಾಗಿಯಾಗಿದ್ದರು.

  ನಿರ್ದೇಶಕರ ಜೊತೆ ಅನುಷ್ಕಾ ಮದುವೆ: ಸ್ವೀಟಿ ಹೇಳಿದ್ದೇನು?ನಿರ್ದೇಶಕರ ಜೊತೆ ಅನುಷ್ಕಾ ಮದುವೆ: ಸ್ವೀಟಿ ಹೇಳಿದ್ದೇನು?

  ಈ ಸಮಾರಂಭದಲ್ಲಿ ಅನುಷ್ಕಾ ಸಂತಸ ವ್ಯಕ್ತಪಡಿಸಿ, ಇಷ್ಟು ವರ್ಷಗಳಿಂದ ಅಭಿಮಾನಿಗಳಿಂದ ಪಡೆದ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ ತಿಳಿಸಿದರು. "ನನ್ನ 15 ವರ್ಷಗಳ ಈ ಕಠಿಣ ಶ್ರಮ ಉದ್ಯಮದ ಉಳಿದ ಜರಿಗೆ ಹೋಲಿಸಿದರೆ ಏನು ಅಲ್ಲ ಎಂದು ಭಾವಿಸುತ್ತೇನೆ. ನಾನು ಅಭಿನಯಿಸಿರುವ ಪ್ರತಿಯೊಂದು ಸಿನಿಮಾವೂ, ನಿಶಬ್ದಂವರೆಗೂ ಸಿನಿಮಾವರೆಗೂ ನಾನು ಅನುಭವಿಸಿದ ಎಲ್ಲಾ ಅನುಭವಗಳು ನನ್ನನ್ನು ಇಲ್ಲಿಗೆ ಕರೆತಂದು ನಿಲ್ಲಿಸಿದೆ" ಎಂದು ಹೇಳಿದ್ದಾರೆ.

  ಇನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅನುಷ್ಕಾ "ASF ಟೀಂ (ಅನುಷ್ಕಾ ಶೆಟ್ಟಿ ಅಭಿಮಾನಿ ಬಳಗ) ಜೊತೆ ಆಚರಣೆಗಳು, ನೀವು ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ ತುಂಬಾ ಧನ್ಯವಾದಗಳು"ಎಂದು ಬರೆದುಕೊಂಡಿದ್ದಾರೆ.

  ಅನುಷ್ಕಾ ಶೆಟ್ಟಿ ಸದ್ಯ ನಿಶಬ್ದಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಹೇಮಂತ್ ಮಧುಕರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದೆ. ಈಗಾಗಲೆ ಟೀಸರ್ ಮತ್ತು ಪೋಸ್ಟರ್ ಗಳ ಮೂಲಕ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾ ಸಧ್ಯದಲ್ಲೇ ನಿಮ್ಮ ಮುಂದೆ ಬರಲಿದೆ.

  English summary
  Telugu Actress Anushka Shetty completed 15 years in film industry. She wrote a emotional letter for her fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X