ಶ್ರೀರಾಮನ ಕುರಿತ 'ಆದಿಪುರುಷ್' ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಂಗೀತ

ಪ್ರಭಾಸ್ ನಟಸಲಿರುವ ಭಾರಿ ಬಜೆಟ್ ನ, ಶ್ರೀರಾಮನ ಕುರಿತಾದ ಸಿನಿಮಾ 'ಆದಿಪುರುಷ್' ಗೆ ಸಂಗೀತ ನಿರ್ದೇಶನವನ್ನು ಆಸ್ಕರ್ ವಿಜೇತ ಎ.ಆರ್.ರೆಹಮಾನ್ ಮಾಡಲಿದ್ದಾರೆ ಎನ್ನಲಾಗಿದೆ.

'ಆದಿಪುರುಷ್' ಸಿನಿಮಾ ಶ್ರೀರಾಮನ ಕುರಿತಾದ ಸಿನಿಮಾ ಆಗಿದ್ದು, ಭಾರಿ ದೊಡ್ಡ ಬಜೆಟ್‌ನ ಸಿನಿಮಾ ಇದಾಗಿರಲಿದೆ. ಸಿನಿಮಾವನ್ನು ಬಾಲಿವುಡ್‌ನ ಓಮ್ ರಾವತ್ ನಿರ್ದೇಶಿಸಲಿದ್ದಾರೆ.

400 ಕೋಟಿಗೂ ಹೆಚ್ಚಿನ ಬಜೆಟ್ ನ ಈ ಸಿನಿಮಾವನ್ನು ಭೂಷಣ್ ಕುಮಾರ್ ನಿರ್ಮಿಸಲಿದ್ದಾರೆ. ಸಿನಿಮಾದಲ್ಲಿ ವಿಲನ್ ಆಗಿ ಸೈಫ್ ಅಲಿ ಖಾನ್ ನಟಿಸಲಿದ್ದಾರೆ. ಸೀತಾ ಪಾತ್ರಕ್ಕೆ ನಾಯಕಿಯ ಆಯ್ಕೆ ಚಾಲ್ತಿಯಲ್ಲಿದೆ. ಇನ್ನೂ ಅಂತಿಮವಾಗಿಲ್ಲ.

ರೆಹಮಾನ್ ಆಯ್ಕೆ ಅಂತಿಮವಾಗಿಲ್ಲ

ರೆಹಮಾನ್ ಆಯ್ಕೆ ಅಂತಿಮವಾಗಿಲ್ಲ

ಆಸ್ಕರ್ ವಿಜೇತ ಎ.ಆರ್.ರೆಹಮಾನ್ ಅವರು ಸಿನಿಮಾಕ್ಕೆ ಸಂಗೀತ ನೀಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಎ.ಆರ್.ರೆಹಮಾನ್ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಇನ್ನೊಬ್ಬ ಪ್ರತಿಭಾವಂತ ಸಂಗೀತ ನಿರ್ದೇಶಕರು ರೆಹಮಾನ್‌ಗೆ ಸ್ಪರ್ಧೆ ಒಡ್ಡುತ್ತಿದ್ದಾರೆ.

ಎಂ.ಎಂ.ಕೀರವಾಣಿ ಸಂಗೀತ ನಿರ್ದೇಶನ?

ಎಂ.ಎಂ.ಕೀರವಾಣಿ ಸಂಗೀತ ನಿರ್ದೇಶನ?

ದಕ್ಷಿಣದ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಯಿಂದ ಹಿನ್ನೆಲೆ ಸಂಗೀತ ಕೊಡಿಸಬೇಕು ಎಂಬ ಅಭಿಲಾಷೆಯನ್ನು ಚಿತ್ರತಂಡದ ಕೆಲವು ಪ್ರಮುಖರು ವ್ಯಕ್ತಪಡಿಸಿದ್ದಾರೆ. ಕೀರವಾಣಿ ಈಗಾಗಲೇ ಐತಿಹಾಸಿಕ, ಪೌರಾಣಿಕ ಸಿನಿಮಾಗಳಿಗೆ ಸಂಗೀತ ನೀಡಿ ಅನುಭವವುಳ್ಳವರು. ಹಾಗಾಗಿ ಇವರ ಆಯ್ಕೆಯ ಬಗ್ಗೆ ಚರ್ಚಿಸಲಾಗುತ್ತಿದೆ.

ಸಿನಿಮಾದಲ್ಲಿ ಲಂಕೇಶನಾಗಿ ಸೈಫ್ ಅಲಿ ಖಾನ್

ಸಿನಿಮಾದಲ್ಲಿ ಲಂಕೇಶನಾಗಿ ಸೈಫ್ ಅಲಿ ಖಾನ್

ಸಿನಿಮಾದಲ್ಲಿ ಲಂಕೇಶನಾಗಿ ಸೈಫ್ ಅಲಿ ಖಾನ್ ಅನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಆದರೆ ಅಭಿಮಾನಿಗಳು ಸೈಫ್ ಅಲಿ ಖಾನ್ ಅನ್ನು ಬದಲಾಯಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ಒಂದು ವೇಳೆ ಎ.ಆರ್.ರೆಹಮಾನ್ ಆಯ್ಕೆ ಆದರೂ ಇದೇ ಬೇಡಿಕೆ ಬರುವ ಸಾಧ್ಯತೆ ಇದೆ.

ನಾಯಕಿ ಆಯ್ಕೆ ಕಠಿಣವಾಗುತ್ತಿದೆ

ನಾಯಕಿ ಆಯ್ಕೆ ಕಠಿಣವಾಗುತ್ತಿದೆ

ಸೀತಾ ಮಾತೆ ಪಾತ್ರಕ್ಕೆ ನಾಯಕಿಯ ಆಯ್ಕೆ ಚಿತ್ರತಂಡಕ್ಕೆ ಬಹುಕಠಿಣವಾಗಿದ್ದು, ದಕ್ಷಿಣದ ಕೀರ್ತಿ ಸುರೇಶ್ ಹಾಗೂ ಕಿಯಾರಾ ಅಡ್ವಾಣಿ ಮಧ್ಯೆ ಸ್ಪರ್ಧೆ ಇದೆ. ಅನುಷ್ಕಾ ಶರ್ಮಾ ಅನ್ನು ಸಹ ಪರಿಗಣಿಸಲಾಗಿತ್ತಾದರೂ ಆಕೆ ಈಗ ತಾಯಿಯಾಗುತ್ತಿರುವ ಕಾರಣ ಆಕೆಯನ್ನು ಪಟ್ಟಿಯಿಂದ ಕೈಬಿಡಲಾಗಿದೆ.

More from Filmibeat

English summary
Adipurush movie team considering AR Rahman as music director of the movie. MM Keeravani also in the list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X