For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಸಿನಿಮಾಕ್ಕೆ ರೆಹಮಾನ್ ಸಂಗೀತ: ಭಾರಿ ಸಂಭಾವನೆ ಬೇಡಿಕೆ

  |

  ಪ್ರಭಾಸ್ ಖ್ಯಾತಿ ಟಾಲಿವುಡ್ ಅನ್ನು ಮೀರಿ ಬಾಲಿವುಡ್ ಆಚೆಗೂ ಪಸರಿಸಿದೆ. ಬಾಹುಬಲಿ ನಂತರ ಪ್ರಭಾಸ್ ರೇಂಜ್ ಬಹಳಷ್ಟು ಏರಿಕೆಯಾಗಿದೆ.

  ಪ್ರಭಾಸ್ ಅವರ ಮುಂದಿನ ಸಿನಿಮಾಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ನಾಯಕಿ. ಪ್ರಭಾಸ್ ಎದುರು ನಾಯಕಿಯಾಗಲು ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆದಿದ್ದಾರೆ ದೀಪಿಕಾ.

  ಇದೀಗ ಪ್ರಭಾಸ್ ಅವರ ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾಕ್ಕೆ ರೆಹಮಾನ್ ಸಹ ದೊಡ್ಡ ಮೊತ್ತದ ಸಂಭಾವನೆ ಬೇಡಿದ್ದಾರೆ. ವಿಶೇಷವೆಂದರೆ ನಿರ್ಮಾಪಕರು ತುಟಿ ಪಿಟಕ್ ಎನ್ನದೆ ದುಬಾರಿ ಸಂಭಾವನೆ ನೀಡಲು ಒಪ್ಪಿಕೊಂಡಿದ್ದಾರೆ.

  ಪ್ರಭಾಸ್‌ಗೆ ಇದೆ ಅಂತರರಾಷ್ಟ್ರೀಯ ಮಾರುಕಟ್ಟೆ

  ಪ್ರಭಾಸ್‌ಗೆ ಇದೆ ಅಂತರರಾಷ್ಟ್ರೀಯ ಮಾರುಕಟ್ಟೆ

  ಬಾಹುಬಲಿ ನಂತರ ಪ್ರಭಾಸ್‌ಗೆ ಅಂತರರಾಷ್ಟ್ರಿಯ ಮಟ್ಟದಲ್ಲಿ ಮಾರುಕಟ್ಟೆ ಸೃಷ್ಟಿಯಾಗಿದ್ದು. ಪ್ರಭಾಸ್ ಜೊತೆ ಸಿನಿಮಾ ಮಾಡಿದರೆ ದೊಡ್ಡ ಮೊತ್ತದ ರಿಟರ್ನ್ಸ್ ಗ್ಯಾರೆಂಟಿ ಎಂಬ ನಂಬಿಕೆ ನಿರ್ಮಾಪಕರಿಗೆ ಸಹ ಬಂದಿದೆ. ಹಾಗಾಗಿ ದೊಡ್ಡ ಮೊತ್ತದ ಸಂಭಾವನೆಗಳನ್ನು ನೀಡಲು ಹಿಂಜರಿಯುತ್ತಿಲ್ಲ ನಿರ್ಮಾಪಕರು.

  ಪ್ರಭಾಸ್ ಸಿನಿಮಾಕ್ಕೆ ರೆಹಮಾನ್ ಸಂಗೀತ

  ಪ್ರಭಾಸ್ ಸಿನಿಮಾಕ್ಕೆ ರೆಹಮಾನ್ ಸಂಗೀತ

  ಪ್ರಭಾಸ್ ನಟಿಸುತ್ತಿರುವ 20 ನೇ ಚಿತ್ರಕ್ಕೆ ರಾಧೆ-ಶ್ಯಾಂ ಎಂದು ಹೆಸರಿಡಲಾಗಿದ್ದು, ಪ್ರಭಾಸ್ ಎದುರು ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಪ್ರೇಮಕತೆಯ ಈ ಸಿನಿಮಾಕ್ಕೆ ಎ.ಆರ್.ರೆಹಮಾನ್ ಇಂದ ಸಂಗೀತ ನಿರ್ದೇಶನ ಮಾಡಿಸುವ ಉಮೇದು ನಿರ್ದೇಶಕರದ್ದು.

  ದೊಡ್ಡ ಮೊತ್ತದ ಸಂಭಾವನೆ ಕೇಳಿದ ರೆಹಮಾನ್

  ದೊಡ್ಡ ಮೊತ್ತದ ಸಂಭಾವನೆ ಕೇಳಿದ ರೆಹಮಾನ್

  ಸಂಗೀತ ನಿರ್ದೇಶನಕ್ಕಾಗಿ ಎ.ಆರ್.ರೆಹಮಾನ್ ಅವರನ್ನು ಸಂಪರ್ಕ ಮಾಡಲಾಗಿದೆಯಾದರೂ ಅವರು ಕೇಳಿರುವ ಸಂಭಾವನೆ ಭಾರಿ ದುಬಾರಿ ಎನ್ನಲಾಗುತ್ತಿದೆ. ರೆಹಮಾನ್ ಅವರು 4.50 ಕೋಟಿ ಸಂಭಾವನೆ ಕೇಳಿದ್ದಾರಂತೆ. ಅದೇ ತೆಲುಗಿನ ದೇವಿಶ್ರೀಪ್ರಸಾದ್ ಸಿನಿಮಾ ಒಂದಕ್ಕೆ 1.5 ರಿಂದ 2 ಕೋಟಿಯಷ್ಟೆ ಸಂಭಾವನೆ ಕೇಳುತ್ತಾರೆ ಎನ್ನಲಾಗಿದೆ.

  ದೀಪಿಕಾ ಪಡುಕೋಣೆ ಸಹ ದೊಡ್ಡ ಸಂಭಾವನೆ ಕೇಳಿದ್ದಾರೆ

  ದೀಪಿಕಾ ಪಡುಕೋಣೆ ಸಹ ದೊಡ್ಡ ಸಂಭಾವನೆ ಕೇಳಿದ್ದಾರೆ

  ಪ್ರಭಾಸ್ ಅವರ 21 ನೇ ಸಿನಿಮಾಕ್ಕೆ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದು ಅವರೂ ಸಹ ದುಬಾರಿ ಮೊತ್ತದ ಸಂಭಾವನೆಯನ್ನೇ ಕೇಳಿದ್ದಾರೆ. ಪ್ರಭಾಸ್ ಗಿರುವ ಪ್ಯಾನ್ ಇಂಡಿಯಾ ಮಾರುಕಟ್ಟೆ ಪ್ರಕಾರ ದೊಡ್ಡ ಮೊತ್ತದ ಸಂಭಾವನೆ ನೀಡಲು ನಿರ್ಮಾಪಕರು ಹಿಂದೆ-ಮುಂದೆ ನೋಡುತ್ತಿಲ್ಲವಂತೆ.

  English summary
  AR Rehman demand high remuneration for Prabhas's Rahe Sham movie. Producer agree to give.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X