For Quick Alerts
  ALLOW NOTIFICATIONS  
  For Daily Alerts

  ಕೊಲೆ ಮಾಡಲು ಯತ್ನ: 'ಅರ್ಜುನ್ ರೆಡ್ಡಿ' ನಟಿಯಿಂದ ದೂರು ದಾಖಲು

  |

  ತೆಲುಗಿನ ಸೂಪರ್ ಹಿಟ್ 'ಅರ್ಜುನ್ ರೆಡ್ಡಿ' ಸಿನಿಮಾದಲ್ಲಿ ನಟಿಸಿದ್ದ ನಟಿಗೆ ಅಪಘಾತವಾಗಿದೆ. ಆದರೆ ಇದು ಅಪಘಾತವಲ್ಲ ನನ್ನನ್ನು ಕೊಲ್ಲಲು ಮಾಡಿದ ಯತ್ನ ಎಂದು ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

  'ಅರ್ಜುನ್ ರೆಡ್ಡಿ' ಸಿನಿಮಾದ ಆರಂಭದ ದೃಶ್ಯದಲ್ಲಿ ನಟ ವಿಜಯ್ ದೇವರಕೊಂಡ ಒಬ್ಬ ಯುವತಿಯ ಮನೆಗೆ ಹೋಗಿ ಆಕೆಗೆ ಕತ್ತಿ ತೋರಿಸಿ ಬೆದರಿಸಿ ನಂತರ ಯುವತಿಯ ಬಾಯ್‌ಫ್ರೆಂಡ್ ಬಂದನೆಂದು ಬರಿಮೈಯಲ್ಲಿ ಹೊರಗೆ ಬರುವ ದೃಶ್ಯವೊಂದಿದೆ. ಆ ದೃಶ್ಯದಲ್ಲಿ ನಟಿಸಿರುವ ಯುವತಿ ಸಾಯಿ ಸುಧಾ ರೆಡ್ಡಿ ಕಾರು ವಿಜಯವಾಡದಲ್ಲಿ ಅಪಘಾತಕ್ಕೆ ಈಡಾಗಿದೆ.

  ಸಾಯಿ ಸುಧಾ ರೆಡ್ಡಿ ಕಾರು ವಿಜಯವಾಡದ ಫ್ಲೈಓವರ್ ಬಳಿ ಅಪಘಾತಕ್ಕೆ ಈಡಾಗಿದ್ದು, ನಟಿಗೆ ಯಾವುದೇ ತೊಂದರೆ ಆಗಿಲ್ಲ. ಆದರೆ ಈ ಘಟನೆ ಅಪಘಾತವಲ್ಲ, ನನ್ನನ್ನು ಕೊಲ್ಲಲು ಮಾಡಿರುವ ಯತ್ನ ಎಂದು ಆ ನಟಿಯು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

  'ನಟಿ ಸಾಯಿ ಸುಧಾ ರೆಡ್ಡಿ ಹಾಗೂ ಕ್ಯಾಮೆರಾಮನ್ ಶ್ಯಾಮ್ ಕೆ ನಾಯ್ಡು ನಡುವೆ ಕೆಲವು ವರ್ಷಗಳಿಂದ ವಿವಾದ ನಡೆಯುತ್ತಲೇ ಇದೆ. ಶ್ಯಾಮ್ ಕೆ ನಾಯ್ಡು, ನನ್ನನ್ನು ಮದುವೆ ಆಗುತ್ತೀನೆಂದು ಹೇಳಿ ಮೋಸ ಮಾಡಿದ್ದಾನೆ ಎಂದು ನಟಿ ಸುಧಾ ರೆಡ್ಡಿ ದೂರು ದಾಖಲಿಸಿದ್ದರು. ಈಗ ಅದೇ ಶ್ಯಾಮ್ ನಾಯ್ಡು, ನನ್ನನ್ನು ಕೊಲ್ಲಲು ಯತ್ನಿಸಿದ್ದಾನೆ' ಎಂದು ಆರೋಪಿಸಿದ್ದಾರೆ ಸುಧಾ ರೆಡ್ಡಿ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

  ಒಳ್ಳೆ ಹೆಸರು ಹಾಳಾಗಿದ್ದನ್ನ ನೋಡಿದ್ದೀನಿ | Kichcha Sudeep | BiggBoss Season 8

  2014 ರಿಂದಲೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸುಧಾ ರೆಡ್ಡಿಗೆ ಈ ವರೆಗೆ ಸೂಕ್ತ ಹಿಟ್ ದೊರೆತಿಲ್ಲ. ಸಾಕಷ್ಟು ಕಿರು ಚಿತ್ರ, ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಸುಧಾ ರೆಡ್ಡಿ, ಅರ್ಜುನ್ ರೆಡ್ಡಿ, ಅಆ, ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.

  English summary
  Arjun Reddy movie actress Sai Sudha Reddy met with an accident. But she alleged that this is intentional.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X