Don't Miss!
- Education
Sports Authority Of India Recruitment 2021: 320 ಕೋಚ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್: ಚೆನ್ನೈ vs ರಾಜಸ್ಥಾನ್ ಮುಖಾಮುಖಿಯ ಕುತೂಹಲಕಾರಿ ಅಂಕಿ-ಅಂಶಗಳು
- Finance
ಏಪ್ರಿಲ್ 19ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- News
Breaking: ದೆಹಲಿಯಲ್ಲಿ 6 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್: ಕೇಜ್ರಿವಾಲ್
- Automobiles
ದೇಶಿಯ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ಕಾರುಗಳು ಅನಾವರಣಗೊಂಡಿದ್ದ ಅಪರೂಪದ ಕ್ಷಣಗಳಿವು
- Lifestyle
ಸೊಳ್ಳೆ ಕಡಿತದಿಂದ ಉಂಟಾಗುವ ಕೆಂಪು ಗುಳ್ಳೆಗಳನ್ನು ತೆಗೆದುಹಾಕುವ ಮನೆಮದ್ದುಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿರ್ದೇಶಕನ ನಿಜ ರೂಪ ವಿಡಿಯೋ ಮಾಡಿ ಪ್ರಪಂಚಕ್ಕೆ ತೋರಿಸಿದ ಸಹ ನಿರ್ದೇಶಕ!
ಸಿನಿಮಾಕ್ಕಾಗಿ ತೆರೆಯ ಹಿಂದೆ ಕೆಲಸ ಮಾಡುವ ಸಾವಿರಾರು ಮಂದಿ ಇರುತ್ತಾರೆ. ತೆರೆಯ ಹಿಂದೆ ಕೆಲಸ ಮಾಡುವ ನಿರ್ದೇಶಕ, ಸಂಗೀತ ನಿರ್ದೇಶಕ, ಕ್ಯಾಮೆರಾ ಮ್ಯಾನ್ ಇನ್ನು ಕೆಲವೇ ತಂತ್ರಜ್ಞರನ್ನು ಬಿಟ್ಟು ಉಳಿದವರ್ಯಾರೂ ಜನರ ಗಮನಕ್ಕೆ ಬರುವುದಿಲ್ಲ.
ಕತೆಯೊಂದು ಸಿನಿಮಾ ಆಗಲು ಬಹಳ ಮುಖ್ಯವಾದವರು ಸಹ ನಿರ್ದೇಶಕರು. ಆದರೆ ಇವರನ್ನು ಬಹಳ ನಿಕೃಷ್ಟವಾಗಿ ಕೆಲವು ನಿರ್ದೇಶಕರು ನಡೆಸಿಕೊಳ್ಳುತ್ತಾರೆ. ಸಹ ನಿರ್ದೇಶಕರನ್ನು ಸೆಟ್‌ನಲ್ಲಿಯೇ ಹೊಡೆಯುವುದು, ಕೆಟ್ಟದಾಗಿ ಬೈಯ್ಯುವುದು, ಅವರ ಐಡಿಯಾ ಕದಿಯುವುದು ಹಲವಾರು ಉದಾಹರಣೆಗಳು ಇವೆ.
ಆದರೆ ಹೊಸದಾಗಿ, ನಿರ್ದೇಶಕನ ವರ್ತನೆಯಿಂದ ರೋಸಿಹೋದ ಸಹ ನಿರ್ದೇಶಕನೊಬ್ಬ, ತಾನು ಕೆಲಸ ಮಾಡವ ನಿರ್ದೇಶಕನ ನಿಜ ರೂಪವನ್ನು ಜಗತ್ತಿಗೆ ತೋರಿಸಿದ್ದಾನೆ. ಇದು ನಡೆದಿರುವುದು ತೆಲುಗು ಸಿನಿಮಾರಂಗದಲ್ಲಿ.
ತೆಲುಗಿನಲ್ಲಿ ಅವಸರಾಲ ಶ್ರೀನಿವಾಸ್ ಹೆಸರಿನ ನಟ ಕಮ್ ಸಿನಿಮಾ ನಿರ್ದೇಶಕ ಒಬ್ಬರಿದ್ದಾರೆ. ಅವರ ಬಳಿ ಕೆಲಸ ಮಾಡುತ್ತಿರುವ ಸಹ ನಿರ್ದೇಶಕ ಮಹೇಶ್ ಎಂಬಾತ ಇಂದು ವಿಡಿಯೋ ಒಂದನ್ನು ಪ್ರಕಟಿಸಿದ್ದಾನೆ. ಆ ವಿಡಿಯೋ ಈಗ ಭಾರಿ ವೈರಲ್ ಆಗಿದೆ.

ನನ್ನನ್ನು ಕೆಲಸದಿಂದ ತೆಗೆದುಹಾಕಿದ್ದಾನೆ ಶ್ರೀನಿವಾಸ್: ಸಹ ನಿರ್ದೇಶಕ ಆಕ್ರೋಶ
ಮೂರು ವರ್ಷದಿಂದ ಮಹೇಶ್, ಅವಸರಾಲ ಶ್ರೀನಿವಾಸ್ ಬಳಿ ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದರಂತೆ. ಆದರೆ ಇಂದು ಬೆಳಿಗ್ಗೆ ವಿನಾಕಾರಣ ಅವಸರಾಲ ಶ್ರೀನಿವಾಸ್, ಮಹೇಶ್ ಅನ್ನು ತೆಗಳಿ ಕಚೇರಿಯಿಂದ ಹೊರಗೆ ಅಟ್ಟಿದ್ದಾರಂತೆ. ಇದಕ್ಕೆ ಸಿಟ್ಟಾದ ಮಹೇಶ್, ಶ್ರೀನಿವಾಸ್‌ನ ನಿಜ ರೂಪವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ನಿರ್ದೇಶಕನ ಬೊಕ್ಕ ತಲೆಯನ್ನು ತೋರಿಸಿದ ಸಹ ನಿರ್ದೇಶಕ
ಕ್ಯಾಮೆರಾ ಹಿಡಿದು ಸಿಟ್ಟಿನಲ್ಲಿ ಹೋದ ಸಹ ನಿರ್ದೇಶಕ ಮಹೇಶ್, ಫೊಟೊ ಶೂಟ್ ಮಾಡಿಸಿಕೊಳ್ಳುತ್ತಿದ್ದ ಅವಸರಾಲ ಶ್ರೀನಿವಾಸ್ ಬಳಿ ಹೋಗಿದ್ದಾರೆ. ಮಹೇಶ್ ಅನ್ನು ನೋಡಿದ ಶ್ರೀನಿವಾಸ್ ಬೈಯ್ಯಲು ಆರಂಭಿಸಿದ್ದಾರೆ. ಕೂಡಲೇ ಸಹ ನಿರ್ದೇಶಕ ಮಹೇಶ್, ಅವಸರಾಲ ಶ್ರೀನಿವಾಸ್ ತಲೆಗೆ ಧರಿಸಿದ್ದ ಟೋಪಿ ತೆಗೆದಿದ್ದಾರೆ. ನೋಡಿದರೆ ಅವಸರಾಲ ಶ್ರೀನಿವಾಸ್‌ರದ್ದು ಬೊಕ್ಕ ತಲೆ!

ಇದೇ ನೋಡಿ ಅವಸರಾಲ ಶ್ರೀನಿವಾಸ್‌ನ ನಿಜ ರೂಪ: ಮಹೇಶ್
ಟೋಪಿ ಕಿತ್ತುಕೊಳ್ಳುತ್ತಿದ್ದಂತೆ ಅವಸರಾಲ ಶ್ರೀನಿವಾಸ್ ಗಾಬರಿಯಾಗಿದ್ದಾರೆ, ಈ ವಿಡಿಯೋ ಹೊರಗೆ ಹೋಗಬಾರದು ಎಂದು ಕಿರುಚಿದ್ದಾರೆ. ಆದರೆ ಸಹ ನಿರ್ದೇಶಕ ಮಹೇಶ್, 'ಇದೇ ನೋಡಿ ನಟ, ನಿರ್ದೇಶಕ ಅವಸರಾಲ ಮಹೇಶ್ ನಿಜ ರೂಪ, ಈ ವಿಡಿಯೋ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತದೆ' ಎಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಪ್ರಚಾರಕ್ಕಾಗಿ ಮಾಡಿದ ವಿಡಿಯೋ ಎಂದ ನೆಟ್ಟಿಗರು
ಆದರೆ ಈ ವಿಡಿಯೋ ನೋಡಿದ ಹಲವರು ಇದೊಂದು ಪಬ್ಲಿಸಿಟಿ ಸ್ಟಂಟ್. ಅವಸರಾಲ ಶ್ರೀನಿವಾಸ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾದ ಪ್ರಚಾರಕ್ಕಾಗಿ ಈ ಸುಳ್ಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದಿದ್ದಾರೆ.