For Quick Alerts
  ALLOW NOTIFICATIONS  
  For Daily Alerts

  ಕೊರೊನಾ ವಿರುದ್ಧ ಹೋರಾಡಿ ಗೆದ್ದ ರಾಜಮೌಳಿ ಕುಟುಂಬ ಹೇಳಿದ್ದೇನು?

  |

  ತೆಲುಗಿನ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಕುಟುಂಬ ಕೊರೊನಾ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ಕೊರೊನಾದಿಂದ ಸಂಪೂರ್ಣ ಗಣಮುಖರಾಗಿರುವುದಾಗಿ ರಾಜಮೌಳಿ ಕುಟುಂಬ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದೆ. ಆದರೆ ಕೊರೊನಾ ಗೆದ್ದರೂ ಪ್ಲಾಸ್ಮ ದಾನಕ್ಕೆ ಇನ್ನೂ ಮೂರು ವಾರಗಳು ಕಾಯಬೇಕೆಂದು ರಾಜಮೌಳಿ ತಿಳಿಸಿದ್ದಾರೆ.

  Kanaka , Duniya Vijay ತೆರೆ ಹಿಂದಿನ ಶ್ರಮ | Filmibeat Kannada

  ಈ ಬಗ್ಗೆ ಟ್ವೀಟ್ ಮಾಡಿರುವ ಬಾಹುಬಲಿ ನಿರ್ದೇಶಕ "2 ವಾರಗಳ ಕ್ವಾರಂಟೈನ್ ಅವಧಿ ಮುಗಿದಿದೆ. ಯಾವುದೆ ರೋಗ ಲಕ್ಷಣಗಳು ಇಲ್ಲ. ಆದರೂ ಮತ್ತೆ ಪರೀಕ್ಷೆ ಮಾಡಿಸಿದೆವು. ಎಲ್ಲರ ವರದಿ ನೆಗೆಟಿವ್ ಬಂದಿದೆ. ಆದರೆ ಪ್ಲಾಸ್ಮ ದಾನಮಾಡಲು ಇನ್ನೂ 3 ವಾರಗಳು ಕಾಯಬೇಕು ಎಂದು ವೈದ್ಯರು ಹೇಳಿದ್ದಾರೆ." ಎಂದು ರಾಜಮೌಳಿ ಬರೆದುಕೊಂಡಿದ್ದಾರೆ.

  ಚಿತ್ರರಂಗದಲ್ಲಿ ಮುಂದೆ ಇದೆ ಭಾರಿ ಬದಲಾವಣೆ: ರಾಜಮೌಳಿ ಕೊಟ್ಟ ಸುಳಿವು

  ಬಾಹುಬಲಿ ನಿರ್ದೇಶಕ, ಪತ್ನಿ ರಮಾ ರಾಜಮೌಳಿ, ಪುತ್ರ ಎಸ್ ಎಸ್ ಕಾರ್ತಿಕೇಯ ಎಲ್ಲರೂ ಮನೆಯಲ್ಲಿಯೆ ಪ್ರತ್ಯೇಕವಾಗಿ ಇದ್ದಾರೆ. ಎಲ್ಲರಿಗೂ ನೆಗಟಿವ್ ಬಂದಿರುವ ಸುದ್ದಿ ಕೇಳಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

  ಜುಲೈ 29ರಂದು ರಾಜಮೌಳಿ ಮತ್ತು ಅವರ ಕುಟುಂಬದವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಬಗ್ಗೆ ರಾಜಮೌಳಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. " ನನಗೂ ನನ್ನ ಕುಟುಂಬದ ಸದಸ್ಯರಿಗೆ ಕೊರೊನಾ ಪಾಸಿಟಿವ್ ಬಂದಿದೆ. ವೈದ್ಯರ ಸೂಚನೆ ಮೇರೆಗೆ ನಮ್ಮ ಕುಟುಂಬದವರೆಲ್ಲರೂ ಹೋಮ್ ಕ್ವಾರಂಟೈನ್ ಆಗಿದ್ದೇವೆ. ಯಾವುದೆ ರೋಗ ಲಕ್ಷಣಗಳಿಲ್ಲ. ಎಲ್ಲರೂ ಆರಾಮಾಗಿದ್ದೇವೆ. ಮುನ್ನೆಚ್ಚರಿಕೆಗಳನ್ನು ಅನುಸರಿಸುತ್ತಿದ್ದೇವೆ" ಎಂದು ಹೇಳಿದ್ದರು.

  ರಾಜಮೌಳಿ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೂ. ಎನ್ ಟಿ ಆರ್ ಮತ್ತು ರಾಮ್ ಚರಣ್ ಇಬ್ಬರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಆರ್ ಆರ್ ಆರ್ ಸಿನಿಮಾದ ನಿರ್ಮಾಪಕ ಡಿವಿವಿ ದಾನಯ್ಯ ಅವರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಹೋಮ್ ಕ್ವಾರಂಟೈನ್ ನಲ್ಲಿದ್ದು, ವೈದ್ಯರ ಸೂಚನೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

  English summary
  Baahubali Director S S Rajamouli family test Negative for corona. His Family completes 2 weeks of quarantine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X