For Quick Alerts
  ALLOW NOTIFICATIONS  
  For Daily Alerts

  'ಸಂಕ್ರಾಂತಿ'ಯಲ್ಲಿ ನಾಲ್ವರು ಸೂಪರ್‌ಸ್ಟಾರ್‌ಗಳ ಸಿನಿಮಾ ರಿಲೀಸ್: ಟಾಲಿವುಡ್‌ನಲ್ಲಿ ಬಿಗ್ ಫೈಟ್!

  |

  ದಕ್ಷಿಣ ಭಾರತದಲ್ಲಿ ಕನ್ನಡ ಚಿತ್ರರಂಗ ಈ ವರ್ಷ ಪೀಕ್‌ನಲ್ಲಿ ಇದೆ. ಹೀಗಾಗಿ ಉಳಿದ ಇಂಡಸ್ಟ್ರೀ ಕೂಡ ಬ್ಲಾಕ್‌ಬಸ್ಟರ್ ಸಿನಿಮಾ ನೀಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ ಟಾಲಿವುಡ್‌ನಲ್ಲಿ ಸೂಪರ್‌ಸ್ಟಾರ್ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿದೆ.

  ತೆಲುಗು ಚಿತ್ರರಂಗದಲ್ಲಿ ಸೂಪರ್‌ಸ್ಟಾರ್‌ ಸಿನಿಮಾಗಳು ಕ್ಯೂನಲ್ಲಿವೆ. 2023ರ ಸಂಕ್ರಾಂತಿ ಹಬ್ಬದ ಮೇಲೆ ನಾಲ್ವರು ಸೂಪರ್‌ಸ್ಟಾರ್‌ಗಳು ಕಣ್ಣಿಟ್ಟಿದ್ದಾರೆ. ಈಗಾಗಲೇ ಅದಕ್ಕೆ ಬೇಕಾಗಿರೋ ಸಿದ್ಧತೆಗಳನ್ನು ಶುರು ಮಾಡಿದ್ದಾರೆ.

  'KGF - 2' ಕಲೆಕ್ಷನ್ ದಾಖಲೆ ಮುರಿಯಲು 'RRR'ಗೆ ಕೊನೆ ಛಾನ್ಸ್: ಜಪಾನ್‌ನಲ್ಲಿ ಹೇಗಿದೆ ಗೊತ್ತಾ ರಾಮ್‌-ಭೀಮ್ ಕ್ರೇಜ್?'KGF - 2' ಕಲೆಕ್ಷನ್ ದಾಖಲೆ ಮುರಿಯಲು 'RRR'ಗೆ ಕೊನೆ ಛಾನ್ಸ್: ಜಪಾನ್‌ನಲ್ಲಿ ಹೇಗಿದೆ ಗೊತ್ತಾ ರಾಮ್‌-ಭೀಮ್ ಕ್ರೇಜ್?

  ಟಾಲಿವುಡ್‌ನಲ್ಲಿ ಸಂಕ್ರಾಂತಿ ಹಬ್ಬಕ್ಕೆ ನಾಲ್ಕು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಕಿತ್ತಾಡೋದು ಕನ್ಫರ್ಮ್ ಎನ್ನಲಾಗುತ್ತಿದೆ. ಬಾಲಕೃಷ್ಣ, ಮೆಗಾಸ್ಟಾರ್ ಚಿರಂಜೀವಿ, ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್, ತಮಿಳಿನ ದಳಪತಿ ವಿಜಯ್ ಸಿನಿಮಾಗಳು ಸಂಕ್ರಾಂತಿಗೆ ರಿಲೀಸ್ ಆಗುತ್ತಿವೆ ಅನ್ನೋ ಚರ್ಚೆ ತೆಲುಗು ಚಿತ್ರರಂಗದಲ್ಲಿ ಶುರುವಾಗಿವೆ.

  ಬಾಲಕೃಷ್ಣ ಸಿನಿಮಾ ವೀರ ಸಿಂಹ ರೆಡ್ಡಿ

  ಬಾಲಕೃಷ್ಣ ಸಿನಿಮಾ ವೀರ ಸಿಂಹ ರೆಡ್ಡಿ

  ಟಾಲಿವುಡ್ 'ಲೆಜೆಂಡ್' ಬಾಲಕೃಷ್ಣ ಅಭಿನಯದ 107ನೇ ಸಿನಿಮಾದ ಶೂಟಿಂಗ್ ಫಾಸ್ಟ್ ಆಗಿ ನಡೆಯುತ್ತಿದೆ. ಗೋಪಿಚಂದ್ ಮಲಿನೇನಿ ನಿರ್ದೇಶಿಸುತ್ತಿರುವ ಈ ಸಿನಿಮಾ ದುನಿಯಾ ವಿಜಯ್ ಖಳನಾಯಕನಾಗಿ ನಟಿಸುತ್ತಿದ್ದಾರೆ. 'ಅಖಂಡ' ಸಿನಿಮಾದ ಗೆಲುವಿನ ಬಳಿಕ ಮತ್ತೆ ಬಾಲಕೃಷ್ಣ ಟ್ರ್ಯಾಕ್‌ಗೆ ಮರಳಿದ್ದಾರೆ. ಹೀಗಾಗಿ ಸಂಕ್ರಾಂತಿ ಹಬ್ಬಕ್ಕೆ ತಮ್ಮ 107ನೇ ಸಿನಿಮಾ 'ವೀರ ಸಿಂಹ ರೆಡ್ಡಿ'ಯನ್ನು ರಿಲೀಸ್ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗಿದೆ.

  ಮೆಗಾಸ್ಟಾರ್ 154ನೇ ಸಿನಿಮಾ

  ಮೆಗಾಸ್ಟಾರ್ 154ನೇ ಸಿನಿಮಾ

  ಮೆಗಾಸ್ಟಾರ್ ಚಿರಂಜೀವಿ ಅಭಿನಯದ 154ನೇ ಸಿನಿಮಾದ ಶೂಟಿಂಗ್ ಕೂಡ ಫುಲ್ ಸ್ವಿಂಗ್‌ನಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿರಂಜೀವಿ ಸಿನಿಮಾ ಗಾಡ್‌ಫಾದರ್ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಈಗ ಮೆಗಾ ಫ್ಯಾನ್ಸ್ ಕಣ್ಣು 'ವಾಲ್ಟರ್ ವೀರಯ್ಯ'ನ ಮೇಲೆ ಬಿದ್ದಿದೆ. ಟಾಲಿವುಡ್ ಮೂಲಗಳ ಪ್ರಕಾರ ಈ ಸಿನಿಮಾ ಕೂಡ ಸಂಕ್ರಾಂತಿ ಹಬ್ಬದಂದೇ ಬಿಡುಗಡೆಯಾಗುತ್ತಿದೆ ಎಂದು ವರದಿಯಾಗಿದೆ. ಹೀಗಾಗಿ ಈ ಸಂಕ್ರಾಂತಿಗೆ ಬಾಕ್ಸಾಫೀಸ್‌ನಲ್ಲಿ ಬಾಲಕೃಷ್ಣ ಹಾಗೂ ಮೆಗಾಸ್ಟಾರ್ ಫೈಟ್ ಆಗೋದು ಗ್ಯಾರಂಟಿ.

  ಪ್ರಭಾಸ್ ಆದಿಪುರುಷ್ ರಿಲೀಸ್

  ಪ್ರಭಾಸ್ ಆದಿಪುರುಷ್ ರಿಲೀಸ್

  ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಮೋಸ್ಟ್‌ ಎಕ್ಸ್‌ಪೆಕ್ಟೆಡ್ ಸಿನಿಮಾ 'ಆದಿಪುರುಪ್'. ಈ ಸಿನಿಮಾ ಈಗಾಗಲೇ ಸಂಕ್ರಾಂತಿಗೆ ರಿಲೀಸ್ ಅಂತ ಅನೌನ್ಸ್ ಮಾಡಿದೆ. ಜನವರಿ 12ರಂದು ಸಿನಿಮಾ ಬಿಡುಗಡೆ ಮಾಡುತ್ತಿರೋದಾಗಿ ಘೋಷಣೆ ಕೂಡ ಮಾಡಿದೆ. ಆದರೆ, 'ಆದಿಪುರುಷ್' ಟೀಸರ್ ಟ್ರೋಲ್ ಆಗುತ್ತಿರುವುದರಿಂದ ಸಿನಿಮಾ ಇದೇ ದಿನ ರಿಲೀಸ್ ಆಗುತ್ತಾ? ಅನ್ನೋ ಬಗ್ಗೆ ಪ್ರಶ್ನೆಯಂತೂ ಮೂಡಿದೆ.

  ದಳಪತಿ ವಿಜಯ್ 'ವಾರಸುಡು'

  ದಳಪತಿ ವಿಜಯ್ 'ವಾರಸುಡು'

  ದಳಪತಿ ವಿಜಯ್ ಅಭಿನಯದ ದ್ವಿಭಾಷಾ ಸಿನಿಮಾ 'ವಾರಸುಡು' ಕೂಡ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ದಿಲ್ ರಾಜು ನಿರ್ಮಿಸುತ್ತಿರುವ ಈ ಸಿನಿಮಾ ತಮಿಳು ಹಾಗೂ ತೆಲುಗು ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ಶೂಟ್ ಆಗುತ್ತಿದೆ. ಈ ಸಿನಿಮಾ ಕೂಡ ಜನವರಿ 13ಕ್ಕೆ ರಿಲೀಸ್ ಆಗುತ್ತಿದೆ ಅನ್ನೋ ಟಾಕ್ ಇದೆ. ಹೀಗಾಗಿ ನಾಲ್ಕು ಸೂಪರ್‌ಸ್ಟಾರ್ ಸಿನಿಮಾ ಏಕಕಾಲಕ್ಕೆ ರಿಲೀಸ್ ಆದರೆ ಬಾಕ್ಸಾಫೀಸ್ ಕಥೆಯೇನು? ಅನ್ನೋ ತಲೆ ನೋವು ಟಾಲಿವುಡ್ ಮಂದಿಗೆ ಶುರುವಾಗಿದೆ.

  'ದಸರಾ'ಗಾಗಿ ಹಳ್ಳಿ ಹುಡುಗಿ ಲುಕ್ ಕೊಟ್ಟ 'ಮಹಾನಟಿ' ಕೀರ್ತಿ ಸುರೇಶ್!'ದಸರಾ'ಗಾಗಿ ಹಳ್ಳಿ ಹುಡುಗಿ ಲುಕ್ ಕೊಟ್ಟ 'ಮಹಾನಟಿ' ಕೀರ್ತಿ ಸುರೇಶ್!

  English summary
  Balakrishna Chiranjeevi Prabhas Vijay Telugu Movies Clash In Sankranthi 2023, Know More.
  Saturday, October 22, 2022, 20:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X