For Quick Alerts
  ALLOW NOTIFICATIONS  
  For Daily Alerts

  'ರೋಜಾ ಅಂದವನ್ನು ಬಾಲಕೃಷ್ಣ ಹಾಳು ಮಾಡ್ತಿದ್ದಾರೆ': ವರ್ಮ ವಿರುದ್ಧ ಫ್ಯಾನ್ಸ್ ಆಕ್ರೋಶ

  |

  ನಿರ್ದೇಶಕ ರಾಮ್ ಗೋಪಾಲ್ ವರ್ಮರಿಗೆ ವಿವಾದ ಮಾಡಿಕೊಳ್ಳುವುದು ನೀರು ಕುಡಿದಷ್ಟು ಸುಲಭ. ಸೋಷಿಯಲ್ ಮೀಡಿಯಾದಲ್ಲಿ ಯಾರೇ ಸಿಕ್ಕರೂ ಏನೋ ಒಂದು ಕಾಮೆಂಟ್ ಹಾಕಿ ಎಲ್ಲರ ಗಮನ ಸೆಳೆಯುತ್ತಾರೆ.

  ಆಗಾಗ ಟಾಲಿವುಡ್ ಸ್ಟಾರ್ ನಟರಿಗೂ ಕಾಲು ಎಳೆಯುವ ವರ್ಮ, ಇದೀಗ ಬಾಲಕೃಷ್ಣ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ನಟ ಬಾಲಕೃಷ್ಣರೊಂದಿಗೆ ನಟಿ ರೋಜಾ ಫೋಟೋ ತೆಗೆದುಕೊಂಡಿದ್ದಾರೆ. ಈ ಫೋಟೋವನ್ನು ರಾಮ್ ಗೋಪಾಲ್ ವರ್ಮ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ತಮ್ಮ ಸ್ಟೈಲ್ ನಲ್ಲಿ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.

  ಮುಂಬೈ ಭೂಗತ ಜಗತ್ತಿಗೆ ರಾಮ್ ಗೋಪಾಲ್ ವರ್ಮಾ ಮತ್ತೊಮ್ಮೆ ಎಂಟ್ರಿ

  ಬಾಲಕೃಷ್ಣರನ್ನು ದೃಷ್ಟಿ ಗೊಂಬೆ ಎಂದು ರಾಮ್ ಗೋಪಾಲ್ ವರ್ಮ ಕರೆದಿದ್ದಾರೆ. ಹೀಗಾಗಿ ಬಾಲಯ್ಯ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

  ರೋಜಾ ಅಂದವನ್ನು ಹಾಳು ಮಾಡಿದ್ದಾರೆ

  ರೋಜಾ ಅಂದವನ್ನು ಹಾಳು ಮಾಡಿದ್ದಾರೆ

  ಬಾಲಕೃಷ್ಣ ಹಾಗೂ ರೋಜಾ ಫೋಟೋ ಬಗ್ಗೆ ವರ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ನಟಿ ರೋಜಾರನ್ನು ಹೀರೋ ಎಂದು ಕರೆದಿರುವ ವರ್ಮ, ಬಾಲಕೃಷ್ಣ ಆಕೆಯ ಪಕ್ಕದಲ್ಲಿ ಕೂತು ಅಂದವನ್ನು ಹಾಳು ಮಾಡಿದ್ದಾರೆ ಎಂದಿದ್ದಾರೆ. ಅಲ್ಲದೆ ವರ್ಮರನ್ನು ದೃಷ್ಟಿ ಗೊಂಬೆಗೆ ಹೋಲಿಕೆ ಮಾಡಿದ್ದಾರೆ.

  ವರ್ಮ ಟ್ವೀಟ್ ಮಾಡಿದ್ದು ಹೀಗೆ

  ವರ್ಮ ಟ್ವೀಟ್ ಮಾಡಿದ್ದು ಹೀಗೆ

  ''ವಾವ್ ರೋಜಾ ಗಾರು ನೀವು ಹೀರೋ ರೀತಿ ಕಾಣುತ್ತಿದ್ದೀರಿ. ನಿಮ್ಮ ಪಕ್ಕದಲ್ಲಿ ಇರುವ ನನಗೆ ತಿಳಿಯದಿರುವ ವ್ಯಕ್ತಿ ನೋಡಲು ಜಿಗುಪ್ಸೆ ಬರುವ ಹಾಗೆ ಇದ್ದಾರೆ. ಆತ ಫೋಟೋವನ್ನು ಹಾಳು ಮಾಡುವ ಮೂಲಕ ರೋಜಾ ಅಂದವನ್ನು ಹಾಳು ಮಾಡುತ್ತಿದ್ದಾನೆ. ಅಥವಾ ಆತ ಆಕೆಯ ದೃಷ್ಟಿ ಗೊಂಬೆ ಇರಬಹುದು.'' ಎಂದು ವರ್ಮ ಬರೆದಿದ್ದಾರೆ.

  'ಪಾಪ್ ಕಾರ್ನ್ ಮಂಕಿ ಟೈಗರ್' ಟೀಸರ್ ನೋಡಿ ರಾಮ್ ಗೋಪಾಲ್ ವರ್ಮಾ ಏನಂದ್ರು?

  ಬಾಲಯ್ಯ ಅಭಿಮಾನಿಗಳ ಆಕ್ರೋಶ

  ಬಾಲಯ್ಯ ಅಭಿಮಾನಿಗಳ ಆಕ್ರೋಶ

  ಬಾಲಕೃಷ್ಣರನ್ನು ದೃಷ್ಟಿ ಗೊಂಬೆ ಎಂದು ಕರೆದ ರಾಮ್ ಗೋಪಾಲ್ ವರ್ಮ ವಿರುದ್ಧ ಬಾಲಯ್ಯ ಫ್ಯಾನ್ಸ್ ಕಿಡಿಕಾರಿದ್ದಾರೆ. ಟ್ವಿಟ್ಟರ್ ನಲ್ಲಿ ನೂರಾರೂ ಅಭಿಮಾನಿಗಳು ಫೋಟೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಕೃಷ್ಣ ಜೊತೆಗೆ ಆರ್ ಜಿ ವಿ ಇರುವ ಫೋಟೋ ಹಾಕಿ ಇಲ್ಲಿ ನೀನು ದೃಷ್ಟಿ ಗೊಂಬೆ ಎಂದಿದ್ದಾರೆ.

  ಆರ್ ಜಿ ವಿ V/S ಬಾಲಯ್ಯ

  ಆರ್ ಜಿ ವಿ V/S ಬಾಲಯ್ಯ

  ಈ ಹಿಂದೆ ತಮ್ಮ ತಂದೆ ಎನ್ ಟಿ ರಾಮರಾವ್ ಬಯೋಪಿಕ್ ಸಿನಿಮಾದ ಬಗ್ಗೆ ಆರ್ ಜಿ ವಿ ಹಾಗೂ ಬಾಲಕೃಷ್ಣ ನಡುವೆ ಮನಸ್ತಾಪ ಬಂದಿತ್ತು. ಒಂದು ಕಡೆ ಬಾಲಕೃಷ್ಣ 'ಎನ್ ಟಿ ಆರ್' ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದರೆ, ಇತ್ತ ರಾಮ್ ಗೋಪಾಲ್ ವರ್ಮ 'ಲಕ್ಷ್ಮಿಸ್ ಎನ್ ಟಿ ಆರ್' ಚಿತ್ರ ಮಾಡುತ್ತಿದ್ದರು. ಈ ವೇಳೆ ಚಿತ್ರದ ವಿಷಯಗಳ ಬಗ್ಗೆ ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದ್ದರು.

  English summary
  Balakrishna fans unhappy on Ram Gopal Varma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X