For Quick Alerts
  ALLOW NOTIFICATIONS  
  For Daily Alerts

  ವಿಜಯ್ ದೇವರಕೊಂಡ ಸಿನಿಮಾ ಶೂಟಿಂಗ್‌ ಸೆಟ್‌ಗೆ ಧಿಡೀರ್ ಭೇಟಿಕೊಟ್ಟ ಸ್ಟಾರ್ ನಟ

  |

  ತೆಲುಗು ಚಿತ್ರರಂಗದಲ್ಲಿ ನಟರ ನಡುವೆ ಸ್ಪರ್ಧೆ ತುಸು ಹೆಚ್ಚು, ಸ್ಟಾರ್ ನಟರ ಅಭಿಮಾನಿಗಳು ಪರಸ್ಪರ ಕಚ್ಚಾಡುವುದು ಮಾಮೂಲು. ಹಿರಿಯ ನಟರಂತೂ ಹಲವು ಬಾರಿ ವೃತ್ತಿ ವೈಷಮ್ಯವನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಿದೆ. ಅದರಲ್ಲಿ ನಟ ನಂದಮೂರಿ ಬಾಲಕೃಷ್ಣ ಪ್ರಮುಖರು.

  ಆದರೆ ಇಂದು ಅಚಾನಕ್ಕಾಗಿ ನಟ ನಂದಮೂರಿ ಬಾಲಕೃಷ್ಣ ಯುವನಟನೊಬ್ಬನ ಚಿತ್ರೀಕರಣ ಸೆಟ್‌ಗೆ ಭೇಟಿ ನೀಡಿ ಆಶ್ಚರ್ಯ ಮೂಡಿಸಿದ್ದಾರೆ.

  ನಟ ವಿಜಯ್ ದೇವರಕೊಂಡ 'ಲೈಗರ್' ಸಿನಿಮಾದ ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದೆ. ಇಂದು ಹಠಾತ್ತನೆ ಸಿನಿಮಾದ ಸೆಟ್‌ಗೆ ಬಾಲಕೃಷ್ಣ ಭೇಟಿ ನೀಡಿದ್ದಾರೆ. ಬೇರೆ ಕೆಲಸಕ್ಕಾಗಿ ಗೋವಾಗೆ ಹೋಗಿದ್ದ ಬಾಲಕೃಷ್ಣ ಅಲ್ಲಿಯೇ ಚಿತ್ರೀಕರಣ ನಡೆಯುತ್ತಿರುವ ಮಾಹಿತಿ ಪಡೆದು ಸೆಟ್‌ಗೆ ಭೇಟಿ ನೀಡಿ ಕೆಲ ಕಾಲ ಚಿತ್ರೀಕರಣ ವೀಕ್ಷಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

  ಸಿನಿಮಾಕ್ಕಾಗಿ ವಿಜಯ್ ದೇವರಕೊಂಡ ಲುಕ್‌ ಬದಲಾಯಿಸಿಕೊಂಡಿದ್ದು, ದೇವರಕೊಂಡ ಲುಕ್‌ ಅನ್ನು ಬಹುವಾಗಿ ಮೆಚ್ಚಿಕೊಂಡರಂತೆ ಬಾಲಕೃಷ್ಣ. ಜೊತೆಗೆ ಚಿತ್ರತಂಡದ ಎಲ್ಲರಿಗೂ ಅಭಿನಂದನೆ ತಿಳಿಸಿ, ಸಿನಿಮಾ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.

  'ಲೈಗರ್' ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದಾರೆ. ಪುರಿ ಜಗನ್ನಾಥ್ ಈ ಹಿಂದೆ ಬಾಲಕೃಷ್ಣ ನಟನೆಯ 'ಪೈಸಾ ವಸೂಲ್' ಸಿನಿಮಾದಲ್ಲಿ ನಟಿಸಿದ್ದಾರೆ. ಪುರಿ ಜಗನ್ನಾಥ್ ಹಾಗೂ ಬಾಲಕೃಷ್ಣ ನಡುವೆ ಒಳ್ಳೆಯ ಬಾಂಧವ್ಯವಿದೆ. ಅಲ್ಲದೆ, 'ಲೈಗರ್' ಸಿನಿಮಾದ ನಿರ್ಮಾಪಕಿ ಬಾಲಕೃಷ್ಣ ಜೊತೆಗೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಗೋವಾದಲ್ಲಿ ಚಿತ್ರೀಕರಣ

  ಗೋವಾದಲ್ಲಿ ಚಿತ್ರೀಕರಣ

  'ಲೈಗರ್' ಸಿನಿಮಾದ ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದೆ. ಅಲ್ಲಿ ಕೆಲವು ಆಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ವಿದೇಶಿ ತಂತ್ರಜ್ಞರು ಮತ್ತು ಫೈಟರ್‌ಗಳು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಫೈಟ್ ದೃಶ್ಯದ ಚಿತ್ರೀಕರಣವು ಹೊರಾಂಗಣದಲ್ಲಿ ನಡೆಯುತ್ತಿದೆ. ಆಕ್ಷನ್ ಹೊರತಾಗಿ ಕೆಲವು ಸನ್ನಿವೇಶಗಳ ಚಿತ್ರೀಕರಣವೂ ಗೋವಾದಲ್ಲಿ ನಡೆಯಲಿದೆ.

  ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ನಾಯಕಿ

  ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ನಾಯಕಿ

  'ಲೈಗರ್' ಸಿನಿಮಾದಲ್ಲಿ ವಿಜಯ್ ದೇವರಕೊಂಡ ಎದುರು ನಾಯಕಿಯಾಗಿ ಬಾಲಿವುಡ್‌ನ ಯುವನಟಿ ಅನನ್ಯಾ ಪಾಂಡೆ ನಟಿಸುತ್ತಿದ್ದಾರೆ. ಸಿನಿಮಾವು ಆಕ್ಷನ್‌ ಕತೆಯನ್ನು ಹೊಂದಿದ್ದು, ಸಿನಿಮಾಕ್ಕಾಗಿ ದೇಹಾಕಾರ, ಹೇರ್‌ಸ್ಟೈಲ್ ಬದಲಾಯಿಸಿಕೊಂಡಿರುವ ವಿಜಯ್ ದೇವರಕೊಂಡ, ಮಾರ್ಷಲ್ ಆರ್ಟ್ಸ್ ಸಹ ಕಲಿತಿದ್ದಾರೆ. 'ಲೈಗರ್' ಸಿನಿಮಾವು ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ಸಂಗೀತವನ್ನು ಮಣಿಶರ್ಮಾ ಮತ್ತು ತನಿಷ್ಕ್ ಬಗ್ಚಿ ನೀಡಿದ್ದಾರೆ. ಸಿನಿಮಾವನ್ನು ನಟಿ ಚಾರ್ಮಿ ನಿರ್ಮಾಣ ಮಾಡುತ್ತಿದದ್ದಾರೆ. ಸಿನಿಮಾದ ಚಿತ್ರೀಕರಣ ಅಂತಿಮ ಹಂತದಲ್ಲಿದೆ.

  ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಆರಂಭಿಸಿರುವ ವಿಜಯ್

  ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಆರಂಭಿಸಿರುವ ವಿಜಯ್

  ಕೆಲವು ದಿನಗಳ ಹಿಂದಷ್ಟೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿದ್ದ ವಿಜಯ್ ದೇವರಕೊಂಡ, ತಾವು ಹೊಸದಾಗಿ ಮಲ್ಟಿಪ್ಲೆಕ್ಸ್ ಆರಂಭಿಸಿದ್ದಾಗಿ ಮಾಹಿತಿ ನೀಡಿದ್ದರು. ಮೆಹಬೂಬ್‌ನಗರದಲ್ಲಿ ಎವಿಡಿ (ಏಷಿಯನ್ ವಿಜಯ್ ದೇವರಕೊಂಡ) ಹೆಸರಿನ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಆರಂಭ ಮಾಡಿದ್ದು, ಅತ್ಯುತ್ತಮ ತಂತ್ರಜ್ಞಾನ ಹೊಂದಿರುವ ಈ ಮಲ್ಟಿಫ್ಲೆಕ್ಸ್‌ ಗ್ರಾಹಕರಿಗೆ ಅತ್ಯುತ್ತಮ ಸಿನಿಮಾ ವೀಕ್ಷಣೆಯ ಅನುಭವ ನೀಡಲಿದೆ ಎಂದಿದ್ದರು. ಸೆಪ್ಟೆಂಬರ್ 24 ರಂದು ನಾಗ ಚೈತನ್ಯ, ಸಾಯಿ ಪಲ್ಲವಿ ನಟನೆಯ 'ಲವ್ ಸ್ಟೋರಿ' ಸಿನಿಮಾದ ಮೊದಲ ಸಿನಿಮಾ ಆಗಿ ಎವಿಡಿ ಮಲ್ಟಿಫ್ಲೆಕ್ಸ್‌ನಲ್ಲಿ ಬಿಡುಗಡೆ ಆಗಲಿದೆ.

  ಹಲವು ಸಿನಿಮಾಗಳಲ್ಲಿ ವಿಜಯ್ ದೇವರಕೊಂಡ ಬ್ಯುಸಿ

  ಹಲವು ಸಿನಿಮಾಗಳಲ್ಲಿ ವಿಜಯ್ ದೇವರಕೊಂಡ ಬ್ಯುಸಿ

  'ಲೈಗರ್' ಸಿನಿಮಾದ ಬಳಿಕ ಹಿಟ್ ನಿರ್ದೇಶಕ ಸುಕುಮಾರ್ ನಿರ್ದೇಶನದ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಟಿಸಲಿದ್ದಾರೆ. ಈ ಸಿನಿಮಾಕ್ಕೆ ಅಲ್ಲು ಅರ್ಜುನ್ ಬಂಡವಾಳ ಹೂಡಲಿದ್ದಾರೆ. ಅದರ ಬಳಿಕ ನಟ ಚಿರಂಜೀವಿ ನಟಿಸುತ್ತಿರುವ ಗಾಡ್ ಫಾದರ್ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವು ಮಲಯಾಳಂನ 'ಲೂಸಿಫರ್' ಸಿನಿಮಾದ ರೀಮೇಕ್ ಆಗಿದೆ. ನಂತರ ಶಿವ ನಿರ್ವಾನ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಬಾಲಿವುಡ್‌ಗೂ ವಿಜಯ್ ದೇವರಕೊಂಡ ಎಂಟ್ರಿ ನೀಡಲಿದ್ದು, ಕರಣ್ ಜೋಹರ್ ನಿರ್ಮಾಣದ ಸಿನಿಮಾದಲ್ಲಿ ನಟಿಸಲಿದ್ದಾರೆ. ಜೊತೆಗೆ ಆನಂದ್ ಅನ್ನಮಲೈ ನಿರ್ದೇಶನದ 'ಹೀರೊ' ಸಿನಿಮಾದಲ್ಲಿಯೂ ವಿಜಯ್ ನಟಿಸಲಿದ್ದಾರೆ.

  English summary
  Senior actor Nandamuri Balakrishna visited Vijay Devarakonda's Liger movie set in Goa. He praised Vijay Devarakonda's efforts for the movie and his look for the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X