For Quick Alerts
  ALLOW NOTIFICATIONS  
  For Daily Alerts

  ನಾಗಾರ್ಜುನ ಎದುರು ವಿಲನ್ ಆಗಲಿದ್ದಾರೆ ಒಂದು ಕಾಲದ ಸೂಪರ್ ಹಿಟ್ ನಾಯಕಿ

  |

  ನಾಯಕಿಯರಿಗೆ ಸಿನಿಮಾರಂಗದಲ್ಲಿ ಆಯಸ್ಸು ಕಡಿಮೆ. ಕೆಲವು ವರ್ಷ ಬಹಳ ಬ್ಯುಸಿಯಾಗುವ ನಾಯಕ ನಟಿಯರು ಆ ನಂತರ ನಿಧಾನಕ್ಕೆ ಮೂಲೆಗುಂಪಾಗಿಬಿಡುತ್ತಾರೆ. ದಶಕಗಳಿಂದಲೂ ಇದು ಹೀಗೆಯೇ ನಡೆದು ಬಂದಿದೆ.

  ಕೆಲವು ನಾಯಕ ನಟಿಯರು ಮಾತ್ರ ನಾಯಕಿ ಪಾತ್ರದ ನಂತರ ಅಕ್ಕನ ಪಾತ್ರ, ಅಮ್ಮನ ಪಾತ್ರ ಇತರೆ ಪಾತ್ರಗಳನ್ನು ಒಪ್ಪಿಕೊಂಡು ಕೊನೆಗೆ ಧಾರಾವಾಹಿಯಲ್ಲಿ ನಟಿಸುತ್ತಾ, ನಟನೆಯ ನಂಟನ್ನು ಹಾಗೆಯೇ ಮುಂದುವರೆಸುತ್ತಾರೆ.

  2000 ದಶಕದಲ್ಲಿ ತೆಲುಗು ಸಿನಿಮಾರಂಗದ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದ ಭೂಮಿಕಾ ಈಗ ಭಿನ್ನ ಪಾತ್ರಗಳತ್ತ ಗಮನ ಹರಿಸುತ್ತಿದ್ದಾರೆ. ನಾಯಕಿ ಪಾತ್ರದ ಬಳಿಕ, ಅಕ್ಕ-ಅತ್ತಿಗೆ ಮಾದರಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಭೂಮಿಕ ಈಗ ಖಳನಾಯಕಿ ಆಗುತ್ತಿದ್ದಾರೆ.

  ಹೌದು ನಟಿ ಭೂಮಿಕಾ ಚಾವ್ಲಾ ಅವರು, ವಯಸ್ಸಿನಲ್ಲಿ ಅವರಿಂತಲೂ ದೊಡ್ಡವರಾದ ನಟ ನಾಗಾರ್ಜುನ ನಾಯಕನಾಗಿ ನಟಿಸುತ್ತಿರುವ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ.

  'ವೈಲ್ಡ್‌ ಗಾಡ್' ಸಿನಿಮಾದ ಚಿತ್ರೀಕರಣ ಮುಗಿಸಿರುವ ನಾಗಾರ್ಜುನ ತಮ್ಮ ಮುಂದಿನ ಸಿನಿಮಾವನ್ನು ನಿರ್ದೇಶಕ ಕಲ್ಯಾಣ್ ಕೃಷ್ಣ ಅವರೊಟ್ಟಿಗೆ ಮಾಡುತ್ತಿದ್ದು. ಈ ಸಿನಿಮಾದಲ್ಲಿ ಖಳನಾಯಕಿ ಪಾತ್ರದಲ್ಲಿ ಭೂಮಿಕಾ ಚಾವ್ಲಾ ಕಾಣಿಸಿಕೊಳ್ಳಲಿದ್ದಾರೆ.

  'ಬಂಗಾರುರಾಜು' ಎಂದು ಸಿನಿಮಾಕ್ಕೆ ಹೆಸರಿಟ್ಟಿದ್ದು, ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಕತೆ ಇದಾಗಿರಲಿದೆ. ಕೆಲವು ವರ್ಷಗಳ ಹಿಂದೆಯೇ ಈ ಸಿನಿಮಾವನ್ನು ಘೋಷಿಸಲಾಗಿತ್ತು. ಅಂತಿಮವಾಗಿ ಈಗ ಸಿನಿಮಾ ಪ್ರಾರಂಭವಾಗುತ್ತಿದೆ. ಊರಿನ ಪ್ರಮುಖಳ ಪಾತ್ರದಲ್ಲಿ ಭೂಮಿಕಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ವರ್ಷದ ಸಂಕ್ರಾಂತಿ ವೇಳೆಗೆ ಈ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.

  ಕಥೆಗೆ ಟೈಟಲ್ ಹೇಗೆ ಸೆಲೆಕ್ಟ್ ಆಯ್ತು ಅಂತಾ ಹೇಳಿದ್ರು ಡೈರೆಕ್ಟರ್ ಹೇಮಂತ್ | Filmibeat Kannada

  ಭೂಮಿಕಾ ಚಾವ್ಲಾ ಹಾಗೂ ನಾಗಾರ್ಜುನ 20 ವರ್ಷಗಳ ಹಿಂದೆ 'ಸ್ನೇಹಮಂಟೆ ಇದೇರಾ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. 2000 ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಭೂಮಿಕಾ ವಾವ್ಲಾ, ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್ ಜೊತೆಗೆ ಹಿಂದಿ ಸಿನಿಮಾಗಳಲ್ಲಿ ಸಹ ನಟಿಸಿದ್ದರು. ತೆಲುಗಿನಲ್ಲಿ ಚಿರಂಜೀವಿ, ವೆಂಕಟೇಶ್, ಮಹೇಶ್ ಬಾಬು, ನಾಗಾರ್ಜುನ, ಚಿರಂಜೀವಿ, ಜೂ.ಎನ್‌ಟಿಆರ್ ಎಲ್ಲ ಸ್ಟಾರ್ ನಟರೊಂದಿಗೂ ನಟಿಸಿದ್ದರು.

  English summary
  Actress Bhumika Chawla will act as villain in Nagarjuna's upcoming movie Bangar Raju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X