Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹಲವು ಅವಕಾಶ ಸಿಕ್ಕರೂ ಬಿಗ್‌ಬಾಸ್‌ಗೆ ಹೋಗಲಿಲ್ಲ ಈ ಸ್ಟಾರ್ ನಟಿ: ಕಾರಣ?
ಹಿಂದಿ ಬಿಗ್‌ಬಾಸ್ ಸೀಸನ್ 14 ಇದೇ ವರ್ಷದ ಫೆಬ್ರವರಿ ಮುಗಿದಿದೆ. ಮಾಮೂಲಿನಂತೆ ಸಲ್ಮಾನ್ ಖಾನ್ ನಿರೂಪಕರಾಗಿದ್ದ ಈ ಶೋನಲ್ಲಿ ಈ ಬಾರಿ ರಾಹುಲ್ ವೈದ್ಯ ವಿನ್ನರ್ ಆಗಿದ್ದಾರೆ.
ಇತರೆ ಭಾಷೆಯ ಬಿಗ್‌ಬಾಸ್ ಶೋಗೆ ಹೋಲಿಸಿದರೆ ಹಿಂದಿ ಬಿಗ್‌ಬಾಸ್ ಬಹಳ ಭಿನ್ನ ರೀತಿಯ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತದೆ. ಅದರಲ್ಲಿ ಟಿಕ್‌ಟಾಕ್ ಸ್ಟಾರ್‌ಗಳಿಗಿಂತಲೂ ಹೆಚ್ಚಾಗಿ ಸಿನಿಮಾ, ಧಾರಾವಾಹಿ, ಗಾಯಕರು, ಇಂಥಹವರು ಹೆಚ್ಚು. ಸಲಿಂಗಿಗಳು, ಎಲ್‌ಜಿಬಿಟಿ ಸಮುದಾಯದವರನ್ನು ಸಹ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ.
ಹಲವಾರು ಮಂದಿ ಸೆಲೆಬ್ರಿಟಿಗಳು ಹಿಂದಿ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಗಳಾಗಿದ್ದಾರೆ. ಹಾಲಿವುಡ್ ನಟಿಯರನ್ನೂ ಕರೆದುಕೊಂಡು ಬರಲಾಗಿತ್ತು. ಸನ್ನಿ ಲಿಯೋನ್ ಸಹ ಭಾಗವಹಿಸಿದ್ದರು. ಇದೀಗ ಬಿಗ್‌ಬಾಸ್ 15ಕ್ಕೆ ಈಗಿನಿಂಗಲೂ ಸ್ಪರ್ಧಿಗಳ ಆಯ್ಕೆ ಆರಂಭವಾಗಿದ್ದು, ದಕ್ಷಿಣ ಭಾರತದ ಪ್ರಖ್ಯಾತ ನಟಿಯೊಬ್ಬರು ಈ ಬಾರಿ ಹಿಂದಿ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಬಿಗ್‌ಬಾಸ್ ಬರುತ್ತಾರಾ ಭೂಮಿಕಾ ಚಾವ್ಲಾ?
ಹಲವಾರು ತೆಲುಗು, ಹಿಂದಿ ಸಿನಿಮಾಗಳಲ್ಲಿಯೂ ನಟಿಸಿರುವ ಭೂಮಿಕಾ ಚಾವ್ಲಾ ಹಿಂದಿ ಬಿಗ್‌ಬಾಸ್ 15ನೇ ಸೀಸನ್‌ನಲ್ಲಿ ಸ್ಪರ್ಧಿ ಆಗಲಿದ್ದಾರೆ ಎನ್ನಲಾಗಿತ್ತು. ಗಾಳಿ ಸುದ್ದಿ ತುಸು ಜೋರಾಗಿಯೇ ಹರಿದಾಡಿತ್ತು. ಆದರೆ ಈ ಬಗ್ಗೆ ಸ್ವತಃ ನಟಿ ಭೂಮಿಕಾ ಚಾವ್ಲಾ ಅವರೇ ಸ್ಪಷ್ಟನೆ ನೀಡಿದ್ದಾರೆ.

ನನ್ನನ್ನು ಹಲವು ಬಾರಿ ಕರೆಯಲಾಗಿತ್ತು: ಭೂಮಿಕಾ
ಬಿಗ್‌ಬಾಸ್ ಸೀಸನ್ 1,2,3 ಕ್ಕಾಗಿ ನನ್ನನ್ನು ಕೇಳಲಾಗಿತ್ತು. ಆ ನಂತರದ ಕೆಲವು ಸೀಸನ್‌ಗಳಿಗೂ ನನ್ನನ್ನು ಆಹ್ವಾನಿಸಲಾಯಿತು ಆದರೆ ನಾನು ಹೋಗಲಿಲ್ಲ. ಈ ಬಾರಿಯೂ ನನ್ನನ್ನು ಬಿಗ್‌ಬಾಸ್‌ಗೆ ಕರೆದಿಲ್ಲ. ಒಂದೊಮ್ಮೆ ಅವರು ಕರೆದರೂ ನಾನು ಹೋಗುವುದಿಲ್ಲ ಎಂದಿದ್ದಾರೆ ಭೂಮಿಕಾ ಚಾವ್ಲಾ.

ನನ್ನ ಸುತ್ತ ಕ್ಯಾಮೆರಾ ಇರುವುದು ನನಗೆ ಇಷ್ಟವಿಲ್ಲ: ಭೂಮಿಕಾ
'ನಾನೊಬ್ಬ ಸಾರ್ವಜನಿಕ ವ್ಯಕ್ತಿ (ಸೆಲೆಬ್ರಿಟಿ) ಆದರೆ ನನಗೆ ನನ್ನದೇ ಆದ ಜೀವನ, ವ್ಯಕ್ತಿತ್ವವಿದೆ. ನಾನು ಖಾಸಗಿ ಆಗಿರಲು ಇಷ್ಟಪಡುತ್ತೇನೆಯೇ ವಿನಃ ನನ್ನ ಸುತ್ತ ಸದಾಕಾಲ ಕ್ಯಾಮೆರಾಗಳು ಇರುವುದನ್ನು ಇಷ್ಟಪಡುವುದಿಲ್ಲ' ಎಂದಿದ್ದಾರೆ. ತಮ್ಮ ಪೋಸ್ಟ್ ಮೂಲಕ ಬಿಗ್‌ಬಾಸ್ ಗಾಳಿಸುದ್ದಿಗೆ ಸೂಜಿ ಚುಚ್ಚಿದ್ದಾರೆ ಭೂಮಿಕಾ.
Recommended Video

ಹಲವು ಸೂಪರ್ ಹಿಟ್ ಸಿನಿಮಾ ನೀಡಿರುವ ಭೂಮಿಕಾ
ನಟಿ ಭೂಮಿಕಾ ಚಾವ್ಲಾ ತೆಲುಗಿನಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಇಂದ್ರ', 'ಸಿಂಹಾದ್ರಿ', 'ಜೈ ಚಿರಂಜೀವ', 'ವಾಸು', 'ಒಕ್ಕಡು', 'ಖುಷಿ' ಹೀಗೆ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸಲ್ಮಾನ್ ಖಾನ್ ವೃತ್ತಿ ಬದುಕಿನಲ್ಲಿ ಮರುಜೀವ ನೀಡಿದ 'ತೇರೆನಾಮ್' ಸಿನಿಮಾದಲ್ಲಿಯೂ ಭೂಮಿಕಾ ನಾಯಕಿ. ಅಭಿಷೇಕ್ ಬಚ್ಚನ್ ಜೊತೆ 'ರನ್' ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಉಪೇಂದ್ರ ನಟನೆಯ 'ಗಾಡ್‌ಫಾದರ್', 'ಲವ್ ಯೂ ಆಲಿಯಾ' ಸಿನಿಮಾಗಳಲ್ಲಿ ನಟಿಸಿದ್ದಾರೆ.