For Quick Alerts
  ALLOW NOTIFICATIONS  
  For Daily Alerts

  ನನ್ನ ವಿಡಿಯೋಗಳೆಲ್ಲಾ ಹಾಳಾದವು: ಬಿಗ್‌ಬಾಸ್ ಮಾಜಿ ಸ್ಪರ್ಧಿಯ ಅಳಲು

  |

  ತೆಲುಗು ಬಿಗ್‌ಬಾಸ್ 4 ನ ಸ್ಪರ್ಧಿಯಾಗಿದ್ದ ಲಾಸ್ಯ ಸಾಕಷ್ಟು ಜನರ ಮನ ಗೆದ್ದಿದ್ದರು. ಆದರೆ ಫೈನಲ್ ವರೆಗೆ ಬರಲು ಅವರಿಗೆ ಸಾಧ್ಯವಾಗಿರಲಿಲ್ಲ. ಇದ್ದಷ್ಟೂ ದಿನ ಸಾಕಷ್ಟು ಮನರೊಂಜನೆ ನೀಡಿದರು.

  ಬಿಗ್‌ಬಾಸ್‌ ನಿಂದ ಹೊರಗೆ ಬಂದ ಬಳಿಕ ಯುಟ್ಯೂಬ್ ಚಾನೆಲ್‌ನಲ್ಲಿ ಸಕ್ರಿಯರಾಗಿದ್ದ ಲಾಸ್ಯ, ಹಲವು ಭಿನ್ನ-ಭಿನ್ನ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಪ್ರಕಟಿಸಿದ್ದರು. ಆದರೆ ಈಗ ಆ ವಿಡಿಯೋಗಳೆಲ್ಲಾ ಮಾಯವಾಗಿವೆ.

  ನಟಿ ಲಾಸ್ಯಾ ರ ಯೂಟ್ಯೂಬ್ ವಿಡಿಯೋ ಹ್ಯಾಕ್ ಆಗಿದೆ. ನಟಿ ಮಾಡಿದ್ದ ಎಲ್ಲ ವಿಡಿಯೋಗಳೂ ಡಿಲೀಟ್ ಆಗಿದೆ. ಯೂಟ್ಯೂಬ್ ಖಾತೆ ಸಹ ಈಗ ಲಾಸ್ಯಾ ಕೈಗೆ ಸಿಗುತ್ತಿಲ್ಲವಂತೆ.

  ನಿನ್ನೆ ಫೇಸ್‌ಬುಕ್‌ನಲ್ಲಿ ಲೈವ್‌ ಬಂದು ಯೂಟ್ಯೂಬ್ ವಿಡಿಯೋಗಳು ನಷ್ಟವಾಗಿರುವ ಬಗ್ಗೆ, ತಮ್ಮ ಯೂಟ್ಯೂಬ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಬಹುವಾಗಿ ಬೇಸರ ವ್ಯಕ್ತಪಡಿಸಿದ್ದಾರೆ ಲಾಸ್ಯಾ. ಅವರ ಅಭಿಮಾನಿಗಳು ಸಹ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

  'ನನ್ನ ಯೂಟ್ಯೂಬ್ ಖಾತೆ ಹ್ಯಾಕ್ ಆಗಿದೆ. ನನ್ನ ಯೂಟ್ಯೂಬ್ ಖಾತೆಯಿಂದ ಯಾರೊ ಲೈವ್ ಹೋಗುತ್ತಿದ್ದಾರೆ. ಏನೇನೋ ವಿಡಿಯೋ ಅಪ್‌ಲೋಡ್ ಮಾಡುತ್ತಿದ್ದಾರೆ ಎಂದು ಹಲವು ಮೆಸೇಜ್ ಮಾಡಿದ್ದಾರೆ. ನನಗೆ ನನ್ನ ಯೂಟ್ಯೂಬ್ ಖಾತೆ ಸಿಗುತ್ತಿಲ್ಲ ಅದರ ಯೂಸರ್ ಐಡಿ, ಪಾಸ್‌ವರ್ಡ್ ಬದಲಾಯಿಸಿದ್ದಾರೆ' ಎಂದಿದ್ದಾರೆ ಲಾಸ್ಯ.

  'ನಾನು ಯೂಟ್ಯೂಬ್‌ ಗೆ ಈ ಬಗ್ಗೆ ದೂರು ನೀಡಿದ್ದೇನೆ. ನನ್ನ ಯೂಟ್ಯೂಬ್ ಖಾತೆ ನನಗೆ ಸಿಗುವ ವಿಶ್ವಾಸವಿದೆ. ಆದರೆ ತುಸು ತಡವಾಗಬಹುದು. ನಾನು ಬಹಳ ಕಷ್ಟಪಟ್ಟು ಯೂಟ್ಯೂಬ್ ವಿಡಿಯೋಗಳನ್ನು ಮಾಡಿದ್ದೆ. ಎಲ್ಲವೂ ಹೊರಟುಹೋಗಿವೆ' ಎಂದಿದ್ದಾರೆ ಲಾಸ್ಯಾ.

  English summary
  Bigg Boss Telugu former contestant Lasya's YouTube video hacked. She express her anger on Facebook live.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X