For Quick Alerts
  ALLOW NOTIFICATIONS  
  For Daily Alerts

  ಅರಿಶಿಣ ಶಾಸ್ತ್ರದ ಸಂಭ್ರಮದಲ್ಲಿ ನಟಿ ಕಾಜಲ್ ಅಗರ್ವಾಲ್

  |

  ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಮದುವೆ ಸಂಭ್ರಮದಲ್ಲಿದ್ದಾರೆ. ಕಾಜಲ್ ಹಸೆಮಣೆ ಏರಲು ಇನ್ನೊಂದೆ ದಿನ ಬಾಕಿ ಇದೆ. ಹೌದು, ಇದೇ ತಿಂಗಳು 30ರಂದು ಕಾಜಲ್ ಬಹುಕಾಲದ ಗೆಳೆಯ ಗೌತಮ್ ಕಿಚಲು ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ಈಗಾಗಲೇ ಮದುವೆ ಶಾಸ್ತ್ರಗಳು ಅದ್ದೂರಿಯಾಗಿ ನಡೆಯುತ್ತಿದೆ.

  ನಿನ್ನೆ (ಅಕ್ಟೋಬರ್ 29) ಬುಧವಾರ ಕಾಜಲ್ ಮನೆಯಲ್ಲಿ ಮೆಹಂದಿ ಶಾಸ್ತ್ರದ ಸಂಭ್ರಮ ಜೋರಾಗಿತ್ತು. ಮದುಮಗಳು ಕಾಜಲ್ ಮದರಂಗಿ ಹಾಕಿಕೊಂಡಿರುವ ಫೋಟೋವನ್ನು ಇಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಎರಡೂ ಕೈಗೆ ಮೆಹಂದಿ ಹಾಕಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಈ ಸುಂದರ ಫೋಟೋವನ್ನು ಕಾಜಲ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

  ಮೆಹಂದಿ ಶಾಸ್ತ್ರದ ಸಂಭ್ರಮದಲ್ಲಿ ನಟಿ ಕಾಜಲ್ ಅಗರ್ವಾಲ್ಮೆಹಂದಿ ಶಾಸ್ತ್ರದ ಸಂಭ್ರಮದಲ್ಲಿ ನಟಿ ಕಾಜಲ್ ಅಗರ್ವಾಲ್

  ಇಂದು (ಅ.29) ಕಾಜಲ್ ಮನೆಯಲ್ಲಿ ಅರಿಶಿಣ ಶಾಸ್ತ್ರದ ಸಂಭ್ರಮ ಜೋರಾಗಿ ನಡೆಯುತ್ತಿದೆ. ಈಗಾಗಲೇ ಹಳದಿ ಶಾಸ್ತ್ರ ಪ್ರಾರಂಭವಾಗಿದೆ. ಕಾಜಲ್ ಮದುವೆ ಶಾಸ್ತ್ರಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹಳದಿ ಶಾಸ್ತ್ರದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಹಳದಿ ಶಾಸ್ತ್ರಕ್ಕೆ ಕಾಜಲ್ ಹಳದಿ ಬಣ್ಣದ ಉಡುಪು ಧರಿಸಿದ್ದಾರೆ. ಸಿಂಪಲ್ ಡ್ರೆಸ್ ನಲ್ಲಿ ಮಿಂಚುತ್ತಿರುವ ಕಾಜಲ್ ಸಂತಸದಿಂದ ಡ್ಯಾನ್ಸ್ ಮಾಡುತ್ತಿರುವ ಫೋಟೋ ಎಲ್ಲಾ ಕಡೆ ಹರಿದಾಡುತ್ತಿದೆ. ಕಾಜಲ್ ಭಾವಿ ಪತಿ ಗೌತಮ್ ಕಿಚಲು ಸಹ ಮದುವೆ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ಮುನಿರತ್ನ ಬೆಂಬಲಕ್ಕೆ ಅಣ್ಣ ದರ್ಶನ್ ಜೊತೆಗೆ ಬಂದ ಅಮೂಲ್ಯ | Darshan | Amulya | Munirathna

  ಅಕ್ಟೋಬರ್ 30 ನಾಳೆ ಕಾಜಲ್ ಮುಂಬೈ ಮೂಲದ ಉದ್ಯಮಿ ಗೌತಮ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತೀರಾ ಖಾಸಗಿಯಾಗಿ ನಡೆಯುವ ಮದುವೆ ಸಮಾರಂಭಕ್ಕೆ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗವಹಿಸಲಿದ್ದಾರೆ. ಕೊರೊನಾ ವೈರಸ್ ಪರಿಣಾಮ ಕಾಜಲ್ ಸರಳವಾಗಿ ಹಸೆಮಣೆ ಏರುತ್ತಿದ್ದಾರೆ.

  English summary
  Bride-To-Be Kajal Aggarwal Shares Pictures From Pre Haldi ceremony.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X