For Quick Alerts
  ALLOW NOTIFICATIONS  
  For Daily Alerts

  ವೇದಿಕೆ ಮೇಲೆ ಕಣ್ಣೀರು ಹಾಕಿದ ನಟಿ ಚಾಂದಿನಿ

  |

  'ಕಲರ್ ಫೊಟೊ' ಎಂಬ ಹೊಸ ಹುಡುಗರ ತೆಲುಗು ಸಿನಿಮಾ ಭರ್ಜರಿ ಹೆಸರು ಮಾಡಿದೆ. ಸಿನಿಮಾ ನೋಡಿದವರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ನಟ ಸುಹಾಸ್ ಹಾಗೂ ನಟಿ ಚಾಂದಿನಿ ಚತುರ್ವೇದಿ ನಟನೆ ಬಗ್ಗೆ ವಿಶೇಷ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

  ಕಲರ್ ಫೋಟೊ ಬಳಿಕ ಹಲವು ಅವಕಾಶಗಳು ನಟಿ ಚಾಂದಿನಿಯನ್ನು ಅರಸಿ ಬರುತ್ತಿವೆ. ಇದೀಗ ಚಾಂದಿನಿ ನಟನೆಯ ಹೊಸ ಸಿನಿಮಾ 'ಲಾಸ್ಟ್ ಓವರ್' ಬಿಡುಗಡೆಗೆ ತಯಾರಾಗಿದ್ದು. ಸಿನಿಮಾಕ್ಕೆ ಸಂಬಂಧಿಸಿದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆಯೇ ಕಣ್ಣೀರು ಹಾಕಿದ್ದಾರೆ ನಟಿ ಚಾಂದಿನಿ.

  ಮೈಕ್ ಹಿಡಿದು ಮಾತನಾಡುತ್ತಾ ಹಠಾತ್ತನೆ ಭಾವುಕರಾದ ನಟಿ ಚಾಂದಿನಿ ಚೌಧರಿ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ನಟಿ ಚಾಂದಿನಿಯನ್ನು ಸಹ ನಟ ನವೀನ್ ಚಂದ್ರ ಸಮಾಧಾನಪಡಿಸಿದ್ದಾರೆ. ಹಾಗಾದರೆ ಈ ಪ್ರತಿಭಾವಂತ ನಟಿ ಅತ್ತಿದ್ದು ಏಕೆ? ಇಲ್ಲಿದೆ ಮಾಹಿತಿ...

  ಅಪಘಾತದಲ್ಲಿ ಮೃತನಾದ ಪ್ರವೀಣ್ ವರ್ಮಾ

  ಅಪಘಾತದಲ್ಲಿ ಮೃತನಾದ ಪ್ರವೀಣ್ ವರ್ಮಾ

  ಚಾಂದಿನಿ ಚೌದರಿ ನಟಿಸಿ, ಬಿಡುಗಡೆಗೆ ತಯಾರಿರುವ 'ಲಾಸ್ಟ್ ಓವರ್' ಸಿನಿಮಾವನ್ನು ಮೊದಲಿಗೆ ನಿರ್ದೇಶಿಸಬೇಕಿದ್ದಿದ್ದು ಪ್ರವೀಣ್ ವರ್ಮಾ ಸಿನಿಮಾ ಚಿತ್ರೀಕರಣ ನಡೆಯುತ್ತಿರಬೇಕಾದರೆ ಪ್ರವೀಣ್ ವರ್ಮಾ ಅಪಘಾತವೊಂದರಲ್ಲಿ ನಿಧನ ಹೊಂದಿದರು.

  ಸಿನಿಮಾ ಪೂರ್ತಿಗೊಳಿಸಿದ ಚಿತ್ರತಂಡ

  ಸಿನಿಮಾ ಪೂರ್ತಿಗೊಳಿಸಿದ ಚಿತ್ರತಂಡ

  ಚಾಂದಿನಿ ಚೌಧರಿ ಹಾಗೂ ಚಿತ್ರತಂಡದೊಂದಿಗೆ ಆಪ್ತ ಗೆಳೆತನ ಹೊಂದಿದ್ದ ಪ್ರವೀಣ್ ವರ್ಮಾ ರ ಅಕಾಲಿಕ ನಿಧನ ಇಡೀಯ ಚಿತ್ರತಂಡವನ್ನು ತೀವ್ರ ಆಘಾತಕ್ಕೆ ನೂಕಿತ್ತು. ಹೇಗೋ ಸಂಭಾಳಿಸಿಕೊಂಡು ಸಿನಿಮಾವನ್ನು ಪೂರ್ತಿ ಮಾಡಿತು ಚಿತ್ರತಂಡ.

  ನಿರ್ದೇಶಕನನ್ನು ನೆನೆದು ಕಣ್ಣೀರು ಹಾಕಿದ ಚಿತ್ರತಂಡ

  ನಿರ್ದೇಶಕನನ್ನು ನೆನೆದು ಕಣ್ಣೀರು ಹಾಕಿದ ಚಿತ್ರತಂಡ

  ನಾಳೆ (ಜನವರಿ 22) ರಂದು ಸಿನಿಮಾವು 'ಆಹಾ' ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಈ ನಡುವೆ ಪ್ರಚಾರ ಕಾರ್ಯದಲ್ಲಿ ನಟಿ ಚಾಂದಿನಿ ಚೌಧರಿ ಅಗಲಿದ ಗೆಳೆಯನನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಚಾಂದಿನಿ ಮಾತ್ರವೇ ಅಲ್ಲದೆ ಚಿತ್ರತಂಡವೆಲ್ಲ ಪ್ರವೀಣ್ ಅವರನ್ನು ನೆನೆದು ಭಾವುಕರಾದರು.

  ಬೆಟ್ಟಿಂಗ್ ಕುರಿತಾದ ಸಿನಿಮಾ 'ಲಾಸ್ಟ್ ಓವರ್'

  ಬೆಟ್ಟಿಂಗ್ ಕುರಿತಾದ ಸಿನಿಮಾ 'ಲಾಸ್ಟ್ ಓವರ್'

  'ಲಾಸ್ಟ್ ಓವರ್' ಸಿನಿಮಾವು ಕ್ರಿಕೆಟ್ ಬೆಟ್ಟಿಂಗ್ ಕುರಿತಾದ ಕತೆ ಹೊಂದಿದ್ದು. ಸಿನಿಮಾದ ಟ್ರೇಲರ್ ಬಿಡುಗಡೆ ಆಗಿ ಸಖತ್ ಸದ್ದು ಮಾಡುತ್ತಿದೆ. ಆಹಾದಲ್ಲಿಯೇ ಬಿಡುಗಡೆ ಆಗಿದ್ದ ಚಾಂದಿನಿ ಚೌಧರಿ, ಸುಹಾಸ್, ಸುನಿಲ್ ನಟನೆಯ 'ಕಲರ್ ಫೊಟೊ' ಸಿನಿಮಾ ಸಖತ್ ಹಿಟ್ ಆಗಿತ್ತು.

  English summary
  Actress Chandini Chowdary became emotional on stage of 'Last Over' movie promotion program.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X