twitter
    For Quick Alerts
    ALLOW NOTIFICATIONS  
    For Daily Alerts

    ಚಿರಂಜೀವಿ ಹುಟ್ಟಹಬ್ಬ: ನಟನ ಬಗ್ಗೆ ಕೆಲವು ಆಸಕ್ತಿಕರ ಮಾಹಿತಿ

    |

    ಮೆಗಾಸ್ಟಾರ್ ಚಿರಂಜೀವಿಯ ಹುಟ್ಟುಹಬ್ಬ ಇಂದು. 66 ವರ್ಷಗಳಾದರೂ ತೆಲುಗಿನ ಟಾಪ್‌ ನಟರಾಗಿ ಇಂದಿಗೂ ಗುರುತಿಸಿಕೊಳ್ಳುತ್ತಾರೆ ಚಿರಂಜೀವಿ.

    ತೆಲುಗು ಸೇರಿದಂತೆ ಒಟ್ಟಾರೆ ಭಾರತೀಯ ಚಿತ್ರರಂಗವೇ ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಹಲವು ಹೊಸ ನಟರು ಬಂದಿದ್ದಾರೆ. ಸಿನಿಮಾದ ಭಾಷೆ ಬದಲಾಗಿದೆ. ಚಿರಂಜೀವಿ ಎಲ್ಲ ಬದಲಾವಣೆಗಳಿಗೂ ಒಗ್ಗಿಗೊಂಡು ಪ್ರೇಕ್ಷಕರನ್ನು ರಂಜಿಸುತ್ತಲೇ ಬಂದಿದ್ದಾರೆ.

    ವಯಸ್ಸೆಂಬುದು ಕೇವಲ ಸಂಖ್ಯೆಯಷ್ಟೆ ಎಂಬುದು ಚಿರಂಜೀವಿ ವಿಷಯದಲ್ಲಿ ಅಕ್ಷರಶಃ ನಿಜ ಎನಿಸುತ್ತದೆ. ಈಗಲೂ ಸಾಲು-ಸಾಲು ಸಿನಿಮಾಗಳಲ್ಲಿ ನಾಯಕನಟನಾಗಿ ನಟಿಸುತ್ತಿರುವ ಚಿರು, ತೆಲುಗು ಚಿತ್ರರಂಗದ ನಾಯಕನಾಗಿ ಚಿತ್ರರಂಗದ ಏಳಿಗೆಗೆ ಶ್ರಮಿಸುತ್ತಲೂ ಇದ್ದಾರೆ. ವಿರಾಮಕ್ಕೆ ಹಾತೊರೆಯುವ ವಯಸ್ಸಿನಲ್ಲಿ ಇನ್ನಷ್ಟು ಜವಾಬ್ದಾರಿಗಳನ್ನು ಹೆಗಲ ಮೇಲೆ ತೆಗೆದುಕೊಂಡು ಮುನ್ನಡೆಯುತ್ತಿದ್ದಾರೆ ಚಿರು. ಈ ಅದ್ಭುತ ನಟನ ಬಗ್ಗೆ ಕೆಲವರಿಗಷ್ಟೆ ಗೊತ್ತಿರುವ ಕೆಲವು ಅಪರೂಪದ ಮಾಹಿತಿಗಳು ಇಲ್ಲಿವೆ.

    ನಟ ಚಿರಂಜೀವಿಯ ಮೊದಲ ಸಿನಿಮಾ 'ಪ್ರಾಣಂ ಖರೀದು' ಎನ್ನಲಾಗುತ್ತದೆ. ಆದರೆ ನಿಜವಾಗಿಯೂ ಚಿರಂಜೀವಿ ಮೊದಲು ನಟಿಸಿದ ಸಿನಿಮಾ 'ಮನ ಊರಿ ಪಾಂಡವಲು' ಆದರೆ 'ಪ್ರಾಣಂ ಖರೀದು' ಸಿನಿಮಾ ಮೊದಲು ಬಿಡುಗಡೆ ಆಗಿ. ಅದುವೇ ಚಿರಂಜೀವಿ ನಟಿಸಿದ ಮೊದಲ ಸಿನಿಮಾ ಆಯಿತು. ಎರಡೂ ಸಿನಿಮಾಗಳು 1978ರಲ್ಲಿ ಬಿಡುಗಡೆ ಆಗಿದ್ದವು. ಅಂದಹಾಗೆ ಚಿರಂಜೀವಿಯ ಮೂಲ ಹೆಸರು ಕೋನಿಡೇಲ ಶಿವಶಂಕರ ವರ ಪ್ರಸಾದ್.

    ರಷ್ಯಾ ಭಾಷೆಗೆ ಡಬ್ ಆಗಿದ್ದ ಸಿನಿಮಾ

    ರಷ್ಯಾ ಭಾಷೆಗೆ ಡಬ್ ಆಗಿದ್ದ ಸಿನಿಮಾ

    1990ರಲ್ಲಿ ಚಿರಂಜೀವಿ ನಟಿಸಿದ್ದ 'ಕೊಡಮ ಸಿಂಹಂ' ಸಿನಿಮಾ ಮೊದಲ ಬಾರಿಗೆ ಇಂಗ್ಲೀಷ್‌ಗೆ ಡಬ್‌ ಆದ ದಕ್ಷಿಣ ಭಾರತ ಸಿನಿಮಾ ಎಂಬ ಖ್ಯಾತಿಗಳಿಸಿದೆ. ಇಂಗ್ಲೀಷ್‌ನಲ್ಲಿ 'ಹಂಟರ್ಸ್ ಆಫ್ ಇಂಡಿಯನ್ ಟ್ರೆಷರ್‌' ಹೆಸರಿನಲ್ಲಿ ಈ ಸಿನಿಮಾ ಬಿಡುಗಡೆ ಆಗಿತ್ತು. ಚಿರಂಜೀವಿ ನಟಿಸಿದ್ದ 'ಪಸಿವಾಡಿ ಪ್ರಾಣಂ' ಮತ್ತು 'ಸ್ವಯಂ ಕೃಷಿ' ಸಿನಿಮಾ ರಷ್ಯನ್ ಭಾಷೆಗೆ ಡಬ್ ಆಯಿತು. 'ಸ್ವಯಂಕೃಷಿ' ಸಿನಿಮಾ ಮಾಸ್ಕೊ ಅಂತರಾಷ್ಟ್ರೀಯ ಸಿನಿಮಾದಲ್ಲಿ ಪ್ರದರ್ಶನಗೊಂಡಿತ್ತು.

    ಹಾಲಿವುಡ್ ಸಿನಿಮಾಕ್ಕೆ ಸಹಿ ಹಾಕಿದ್ದ ಚಿರಂಜೀವಿ

    ಹಾಲಿವುಡ್ ಸಿನಿಮಾಕ್ಕೆ ಸಹಿ ಹಾಕಿದ್ದ ಚಿರಂಜೀವಿ

    1999 ರಲ್ಲಿ ನಟ ಚಿರಂಜೀವಿ ಹಾಲಿವುಡ್ ಸಿನಿಮಾ ಒಂದರಲ್ಲಿ ನಟಿಸಲು ಸಹಿ ಮಾಡಿದ್ದರು. ಜನಪ್ರಿಯ ಸಿನಿಮಾ 'ತೀಫ್ ಆಫ್ ಬಾಗ್ದಾದ್'ನ ಮುಂದುವರೆದ ಭಾಗ 'ರಿಟರ್ನ್ ಆಫ್ ಬಾಗ್ದಾದ್ ತೀಫ್' ಸಿನಿಮಾದಲ್ಲಿ ನಟಿಸಲು ಚಿರಂಜೀವಿ ಆಯ್ಕೆ ಆಗಿದ್ದರು. ಸಿನಿಮಾಕ್ಕೆ ಸಹಿ ಹಾಕಿದ್ದರು ಸಹ ಆದರೆ ಕಾರಣಾಂತರದಿಂದ ಸಿನಿಮಾವು ಸೆಟ್ಟೇರಲಿಲ್ಲ.

    ಅಮಿತಾಬ್ ಬಚ್ಚನ್‌ಗಿಂತಲೂ ಹೆಚ್ಚು ಸಂಭಾವನೆ

    ಅಮಿತಾಬ್ ಬಚ್ಚನ್‌ಗಿಂತಲೂ ಹೆಚ್ಚು ಸಂಭಾವನೆ

    ನಟ ಅಮಿತಾಬ್ ಬಚ್ಚನ್ ಬಾಲಿವುಡ್ ಕಿಂಗ್ ಆಗಿದ್ದ ಸಮಯದಲ್ಲಿ ಬಚ್ಚನ್ ಅನ್ನೇ ಮೀರಿಸಿದ ನಟನಾಗಿ ಚಿರಂಜೀವಿ ಸದ್ದು ಮಾಡಿದ್ದರು. ಅಮಿತಾಬ್ ಬಚ್ಚನ್‌ಗಿಂತಲೂ ಹೆಚ್ಚು ಸಂಭಾವನೆಯನ್ನು 80-90ರ ದಶಕದಲ್ಲಿ ನಟ ಚಿರಂಜೀವಿ ಪಡೆಯುತ್ತಿದ್ದರು. ಚಿರಂಜೀವಿಯ 'ಘರಾನಾ ಮೊಗುಡು' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದಾಗ ಇಂಡಿಯಾ ಟುಡೆಯು 'ಬಿಗ್ಗರ್ ದ್ಯಾನ್ ಬಚ್ಚನ್' ಹೆಸರಿನ ಹೆಡ್‌ಲೈನ್ ಮುದ್ರಿಸಿತ್ತು. 1992ರಲ್ಲಿ ಚಿರಂಜೀವಿ ನಟಿಸಿದ್ದ 'ಆಪದ್ಭಾಂಧವ' ಸಿನಿಮಾಕ್ಕೆ 1.20 ಕೋಟಿ ಸಂಭಾವನೆ ಪಡೆದಿದ್ದರು. ಆ ಕಾಲಕ್ಕೆ ಅಷ್ಟು ದೊಡ್ಡ ಸಂಭಾವನೆಯನ್ನು ಯಾರೂ ಪಡೆದಿರಲಿಲ್ಲ.

    ಆಸ್ಕರ್‌ಗೆ ಆಹ್ವಾನ ಸಿಕ್ಕ ಏಕೈಕ ದಕ್ಷಿಣ ಭಾರತ ನಟ!

    ಆಸ್ಕರ್‌ಗೆ ಆಹ್ವಾನ ಸಿಕ್ಕ ಏಕೈಕ ದಕ್ಷಿಣ ಭಾರತ ನಟ!

    1987ರಲ್ಲಿ ಚಿರಂಜೀವಿಯನ್ನು ಆಸ್ಕರ್ ಸಮಾರಂಭಕ್ಕೆ ಅತಿಥಿಯಾಗಿ ಕರೆಸಲಾಗಿತ್ತು. ಆಸ್ಕರ್ ಆಯೋಜಿಸುವ ಎಎಂಪಿಎಸ್ ಸಂಸ್ಥೆಯು ಚಿರಂಜೀವಿಯನ್ನು ಅತಿಥಿಯಾಗಿ ಕರೆದಿದ್ದರು. ಹೀಗೆ ಆಸ್ಕರ್‌ಗೆ ಕರೆಯಲ್ಪಟ್ಟ ಮೊದಲ ದಕ್ಷಿಣ ಭಾರತದ ಸಿನಿಮಾ ನಟನೆಂಬ ಖ್ಯಾತಿ ಚಿರಂಜೀವಿಯದ್ದು.

    ಕನ್ನಡದಲ್ಲಿಯೂ ನಟಿಸಿರುವ ಚಿರಂಜೀವಿ

    ಕನ್ನಡದಲ್ಲಿಯೂ ನಟಿಸಿರುವ ಚಿರಂಜೀವಿ

    ಚಿರಂಜೀವಿ ಕೇವಲ ತೆಲುಗು ಸಿನಿಮಾಗಳಲ್ಲಿ ಮಾತ್ರವೇ ನಟಿಸಿಲ್ಲ. ತಮಿಳು, ಹಿಂದಿ, ಕನ್ನಡದ 'ಸಿಪಾಯಿ, 'ಶ್ರೀ ಮಂಜುನಾಥ' ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ತೆಲುಗಿನಲ್ಲಿ ಚಿರಂಜೀವಿ ನಟಿಸಿದ ಸಿನಿಮಾಗಳು ಬಹುದೊಡ್ಡ ಹಿಟ್‌ಗಳಾಗಿವೆ. 80-90ರ ದಶಕದಲ್ಲಿ ಚಿರಂಜೀವಿ ಸಿನಿಮಾಗಳಷ್ಟು ಇನ್ಯಾರ ಸಿನಿಮಾಗಳು ಸಹ ಗಳಿಸಿರಲಿಲ್ಲ.

    ಚಿರಂಜೀವಿ ಹೆಸರಲ್ಲಿ ಹಲವು ಅಭಿಮಾನಿ ಸಂಘ

    ಚಿರಂಜೀವಿ ಹೆಸರಲ್ಲಿ ಹಲವು ಅಭಿಮಾನಿ ಸಂಘ

    ಸಮಾಜ ಸೇವೆಗೆ ಅತಿ ಹೆಚ್ಚು ಹಣ ವ್ಯಯಿಸಿದ ನಟರೂ ಸಹ ಚಿರಂಜೀವಿಯೇ ಆಗಿದ್ದಾರೆ. ಚಿರಂಜೀವಿ ಬ್ಲಡ್ ಬ್ಯಾಂಕ್, ಚಿರಂಜೀವಿ ಐ ಬ್ಯಾಂಕ್ ಹೀಗೆ ಹಲವು ಸಮಾಜ ಸೇವೆ ಕಾರ್ಯಗಳನ್ನು ಚಿರಂಜೀವಿ ಮಾಡಿದ್ದಾರೆ. ಸಮಾಜ ಸೇವೆ ಮೂಲಕ ದೊಡ್ಡ ಜನಪ್ರಿಯ ಗಳಿಸಿದ್ದರು ಚಿರಂಜೀವಿ. ಚಿರಂಜೀವಿಗೆ ಇರುವಷ್ಟು ಅಭಿಮಾನಿ ಸಂಘಗಳು ಇನ್ನಾವ ನಟರಿಗೂ ಇರಲಿಲ್ಲವೆಂಬುಸು ಸಹ ದಾಖಲೆಯೇ.

    English summary
    Here is some interesting information about actor Megastar Chiranjeevi. Today is Chiranjeevi's birthday.
    Monday, August 23, 2021, 7:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X