twitter
    For Quick Alerts
    ALLOW NOTIFICATIONS  
    For Daily Alerts

    ಹಿಂದು ಆಗಿ ಹುಟ್ಟುವುದಕ್ಕಿಂತ ಕತ್ತೆಯಾಗಿ ಹುಟ್ಟುವುದು ಲೇಸು: ಚಿರಂಜೀವಿ ಸಹೋದರ

    |

    ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಇತ್ತೀಚೆಗೆ ತುಸು ಹೆಚ್ಚೇ ಸುದ್ದಿಯಲ್ಲಿದ್ದಾರೆ. ಈ ಮೊದಲು ತೆಲುಗು ಹಿರಿಯ ನಟ ಬಾಲಕೃಷ್ಣಗೆ ಟ್ವೀಟ್‌ ಟಾಂಗ್ ಕೊಟ್ಟು ಸುದ್ದಿಯಾಗಿದ್ದ ನಾಗಬಾಬು ಈಗ ಹಿಂದುತ್ವದ ಬಗ್ಗೆ ಮಾತನಾಡಿದ್ದಾರೆ.

    ಮೆಗಾಸ್ಟಾರ್ ಚಿರಂಜೀವಿ ಮತ್ತೊಬ್ಬ ಸಹೋದರ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಬಿಜೆಪಿ ಬೆಂಬಲ ಕೊಟ್ಟ ಬಳಿಕ, ಜನಸೇನಾ ಪಕ್ಷದ ಮುಖಂಡರಲ್ಲಿ ಒಬ್ಬರಾಗಿರುವ ನಾಗಬಾಬು ಅವರಿಗೆ ಹಿಂದುತ್ವದ ಮೇಲೆ ಪ್ರೀತಿ ಹೆಚ್ಚಾಗಿದೆ.

    ದ್ವೇಷ ಮರೆತು ಬಾಲಕೃಷ್ಣಗೆ ಜನ್ಮದಿನದ ಶುಭ ಹಾರೈಸಿದ ಚಿರಂಜೀವಿದ್ವೇಷ ಮರೆತು ಬಾಲಕೃಷ್ಣಗೆ ಜನ್ಮದಿನದ ಶುಭ ಹಾರೈಸಿದ ಚಿರಂಜೀವಿ

    ಸದಾ ಒಂದಿಲ್ಲೊಂದು ಟ್ವೀಟ್ ಮಾಡುತ್ತಲೇ ಇರುವ ಆ ಮೂಲಕ ಸುದ್ದಿಯಲ್ಲಿರುವ ನಾಗಬಾಬು ಈಗ ಹಿಂದುತ್ವದ ಬಗ್ಗೆ ಟ್ವೀಟ್ ಮಾಡಿದ್ದು, 'ಹಿಂದುವಾಗಿ ಹುಟ್ಟುದಕ್ಕಿಂತಲೂ ಕತ್ತೆಯಾಗಿ ಹುಟ್ಟಬಹುದಿತ್ತು' ಎಂದಿದ್ದಾರೆ. ಆದರೆ ಅವರ ಟ್ವೀಟ್‌ ತಾತ್ಪರ್ಯ ಹಿಂದು ಧರ್ಮ ಕೀಳೆಂದಲ್ಲ. ಮುಂದೆ ಓದಿ...

    ಅಜಯ್ ಪಂಡಿತ್ ಹತ್ಯೆ ಬಗ್ಗೆ ಆಕ್ರೋಶ

    ಅಜಯ್ ಪಂಡಿತ್ ಹತ್ಯೆ ಬಗ್ಗೆ ಆಕ್ರೋಶ

    ಸೋಮವಾರ ನಡೆದ ಕಾಶ್ಮೀರ ಪಂಡಿತ್ ಅಜಯ್ ಅವರ ಹತ್ಯೆ ಪ್ರಕರಣದ ಬಗ್ಗೆ ಇಂದು ಟ್ವೀಟ್ ಮಾಡಿರುವ ನಾಗಬಾಬು, ಕಾಶ್ಮೀರ ಪಂಡಿತ್ ಆನಂದ್ ಅವರ ಹತ್ಯೆಯ ಬಗ್ಗೆ ನನಗೆ ನಿನ್ನೆ ತಿಳಿಯಿತು. ಕೊಂದಿರುವುದು ಹಿಂದು ಪಂಡಿತರನ್ನಲ್ಲವಾ ಏನು ತೊಂದರೆ ಇಲ್ಲ, ನಾವೇನು ಬೇಜಾರು ಮಾಡಿಕೊಳ್ಳುವುದು ಬೇಡ. ಘಟನೆ ನಡೆದಿರುವುದು ದೂರದ ಕಾಶ್ಮೀರದಲ್ಲಿ ತಾನೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

    'ಅಮೆರಿಕದಲ್ಲಿ ನಡೆದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾರೆ'

    'ಅಮೆರಿಕದಲ್ಲಿ ನಡೆದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾರೆ'

    ಮುಂದುವರೆದು ಅಲ್ಲೆಲ್ಲೋ ಕಪ್ಪು ವರ್ಣೀಯನನ್ನು ಕೊಂದರೆ ನಮ್ಮ ಭಾರತೀಯರಿಗೆ ಕೋಪ ಬರುತ್ತದೆ ಆದರೆ ಭಾರತೀಯನೊಬ್ಬನನ್ನು ಕೊಂದರೆ ಫೇಕ್ ಜಾತ್ಯಾತೀತವಾದಿಗಳು ಸ್ಪಂದಿಸುವುದಿಲ್ಲ. ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಸುದ್ದಿಯನ್ನು ಕವರ್ ಮಾಡುವುದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಾಲಿಗೆ ಹಿಡಿತದಲ್ಲಿಟ್ಟಿಕೊ, ಕ್ಷಮೆ ಕೇಳು: ಬಾಲಕೃಷ್ಣಗೆ ಚಿರಂಜೀವಿ ಸಹೋದರ ಎಚ್ಚರಿಕೆನಾಲಿಗೆ ಹಿಡಿತದಲ್ಲಿಟ್ಟಿಕೊ, ಕ್ಷಮೆ ಕೇಳು: ಬಾಲಕೃಷ್ಣಗೆ ಚಿರಂಜೀವಿ ಸಹೋದರ ಎಚ್ಚರಿಕೆ

    'ಹಿಂದುವಾಗಿ ಹುಟ್ಟು ಬದಲು...'

    'ಹಿಂದುವಾಗಿ ಹುಟ್ಟು ಬದಲು...'

    ಇದನ್ನೆಲ್ಲಾ ನೋಡಿದರೆ 'ಹಿಂದುವಾಗಿ ಹುಟ್ಟುವ ಬದಲು ಕತ್ತೆಯಾಗಿ ಹುಟ್ಟುಬಹುದಿತ್ತು' ಎಂದು ದೊಡ್ಡವರೊಬ್ಬರು ಹೇಳಿದ ಮಾತ ನಿಜ ಎನಿಸುತ್ತದೆ' ಎಂದು ಆಕ್ರೋಶ ಹೊರಹಾಕಿದ್ದಾರೆ ನಾಗಬಾಬು. ಮೊನ್ನೆ ಕೆಲವು ಸಾಧುಗಳನ್ನು ಕೊಲ್ಲಲಾಗಿದೆ. ಮೀಡಿಯಾಗಳು ತೋರಿಸದ ಎಷ್ಟೋ ಹಿಂದು ಕೊಲೆಗಳು ಇವೆ ಎಂದು ನಾಗಬಾಬು ಟ್ವೀಟ್‌ನಲ್ಲಿ ಹೇಳಿದ್ದಾರೆ.

    ಪ್ರಧಾನಿ ಮೋದಿಗೆ ನಾಗಬಾಬು ಮನವಿ

    ಪ್ರಧಾನಿ ಮೋದಿಗೆ ನಾಗಬಾಬು ಮನವಿ

    ಹಿಂದುತ್ವವನ್ನು, ಹಿಂದು ಸಂಸ್ಕೃತಿಯನ್ನು ಉಳಿಸೋಣ ಎಂದಿರುವ ನಾಗಬಾಬು, ಮೋದಿ ಅವರಿಗೆ ಮನವಿ ಸಹ ಮಾಡಿದ್ದು, ಎಲ್ಲಾ ಧರ್ಮಗಳಿಗೆ ಸಮಾನ ಹಕ್ಕು, ಸಮಾನ ನಿಯಮಗಳನ್ನು ರೂಪಿಸಿ, ಮತಬ್ಯಾಂಕ್ ರಾಜಕಾರಣ ಬೇಡ ಎಂದಿದ್ದಾರೆ.

    ಚಿರಂಜೀವಿಗೆ ತಿರುಗೇಟು: ಬಹುತೇಕ ಚಿತ್ರರಂಗವೇ ನನ್ನ ಬೆಂಬಲಕ್ಕೆ ಇದೆ ಎಂದ ಬಾಲಕೃಷ್ಣಚಿರಂಜೀವಿಗೆ ತಿರುಗೇಟು: ಬಹುತೇಕ ಚಿತ್ರರಂಗವೇ ನನ್ನ ಬೆಂಬಲಕ್ಕೆ ಇದೆ ಎಂದ ಬಾಲಕೃಷ್ಣ

    English summary
    Chiranjeevi's brother Nagababu tweets about Hindutva. He said let's save Hinduism and Hindutva.
    Friday, June 12, 2020, 22:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X