For Quick Alerts
  ALLOW NOTIFICATIONS  
  For Daily Alerts

  ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡಿಗ ಅಭಿಮಾನಿಗೆ ನೆರವಾದ ಚಿರಂಜೀವಿ

  By ಫಿಲ್ಮ್ ಡೆಸ್ಕ್
  |

  ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿರುವ ನಟ. ಕೇವಲ ತೆಲುಗು ಮಾತ್ರವಲ್ಲ, ಗಡಿಗೂ ಮೀರಿ ಅಭಿಮಾನಿಗಳನ್ನು ಸಂಪಾದಿಸಿರುವ ಚಿರಂಜೀವಿ ಕಷ್ಟ ಎಂದಾಗ ಅವರ ನೆರವಿಗೂ ಧಾವಿಸುತ್ತಾರೆ. ಇದೀಗ ಮೆಗಾಸ್ಟಾರ್ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡಿಗ ಅಭಿಮಾನಿಯೊಬ್ಬರಿಗೆ ಚಿಕಿತ್ಸೆ ಕೊಡಿಸುವ ಮಾನವೀಯತೆ ಮೆರೆದಿದ್ದಾರೆ.

  ರಾಯಚೂರಿನ ವೆಂಕಟೇಶ್ ಎನ್ನುವವರು ಚಿರಂಜೀವಿ ಅವರ ಅಪ್ಪಟ ಅಭಿಮಾನಿ. ಅಲ್ಲದೆ ರಾಯಚೂರಿನ ಅಖಿಲ ಕರ್ನಾಟಕ ಚಿರಂಜೀವಿ ಯುವಕರ ಸಂಘದ ಅಧ್ಯಕ್ಷರು ಸಹ ಆಗಿದ್ದಾರೆ. ಇದೀಗ ಇವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನು ತಿಳಿದ ಚಿರಂಜೀವಿ ಅಭಿಮಾನಿ ವೆಂಕಟೇಶ್ ಗೆ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.

  ಮತ್ತೊಂದು ರೀಮೇಕ್ ಚಿತ್ರದಲ್ಲಿ ಚಿರಂಜೀವಿ: ಮೋಹನ್ ರಾಜ್ ನಿರ್ದೇಶನ

  ರಾಯಚೂರಿನ ಆಸ್ಪತ್ರೆಯಲ್ಲಿ ವೆಂಕಟೇಶ್ ಚಿಕ್ತೆಸ ಪಡೆಯುತ್ತಿದ್ದಾರೆ. ವೆಂಕಟೇಶ್ ಅವರ ಪತ್ನಿಗೆ ಕರೆಮಾಡಿರುವ ಚಿರಂಜೀವಿ,ಹೈದರಾಬಾದ್ ಗೆ ಕರೆದುಕೊಂಡು ಬರುವುವಂತೆ ಹೇಳಿದ್ದಾರಂತೆ. ಚಿರಂಜೀವಿ ಸೂಚನೆಯಂತೆ ವೆಂಕಟೇಶ್ ಅವರನ್ನು ಹೈದರಾಬಾದ್ ಗೆ ಕರೆದುಕೊಂಡು ಹೋಗಲಾಗುತ್ತಿದೆ.

  ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಚಿರಂಜೀವಿ ಅವರೇ ಭರಿಸುತ್ತಿದ್ದಾರೆ. ಅಂದಹಾಗೆ ಚಿರಂಜೀವಿ ಅವರಿಗೆ ಅಭಿಮಾನಿ ವೆಂಕಟೇಶ್ ಸುಮಾರು 25 ವರ್ಷಗಳಿಂದ ಪರಿಚಯವಂತೆ. ಇದೀಗ ಅಭಿಮಾನಿ ವೆಂಕಟೇಶ್ ಕಷ್ಟದಲ್ಲಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಸಹಾಯಕ್ಕೆ ಮುಂದಾಗಿರುವುದು ಚಿರಂಜೀವಿ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

  English summary
  Telugu Actor Chiranjeevi helps a Kannada fan who suffering from a kidney problem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X