For Quick Alerts
  ALLOW NOTIFICATIONS  
  For Daily Alerts

  ತೆಲಂಗಾಣ ಸಿಎಂಗೆ ಧನ್ಯವಾದ ಹೇಳಿದ ತೆಲುಗು ಚಿತ್ರರಂಗ: ಕಾರಣವೇನು?

  |

  ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ, ರಾಮ್ ಚರಣ್ ತೇಜ, ಸಾಯಿಧರ್ಮ ತೇಜ್ ಹಾಗೂ ಇನ್ನೂ ಹಲವರು ಧನ್ಯವಾದಗಳನ್ನು ತಿಳಿಸಿದ್ದಾರೆ.

  ಕೊರೊನಾ ವೈರಸ್‌ಗೆ ತುತ್ತಾಗಿ ಭಾರಿ ನಷ್ಟ ಅನುಭವಿಸಿರುವ ತೆಲುಗು ಚಿತ್ರರಂಗದ ಪುನಶ್ಚೇತನಕ್ಕೆ ಅಗತ್ಯ ನೆರವನ್ನು ಸರ್ಕಾರ ನೀಡುತ್ತದೆ ಎಂದು ತೆಲಂಗಾಣ ಸಿಎಂ ಕೆಸಿಆರ್ ಭರವಸೆ ನೀಡಿದ್ದಾರೆ. ಹಾಗಾಗಿ ತೆಲುಗು ಸಿನಿಮಾ ಪ್ರಮುಖರು ಕೆಸಿಆರ್‌ಗೆ ಧನ್ಯವಾದ ಹೇಳಿದ್ದಾರೆ.

  'ತೆಲುಗು ಚಿತ್ರರಂಗದ ಪುನಶ್ಚೇತನಕ್ಕೆ ಅಗತ್ಯ ನೆರವು, ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಕ್ಕೆ ಕೆಸಿಆರ್‌ಗೆ ಧನ್ಯವಾದಗಳು. ಚಿತ್ರರಂಗದ ಪುನಶ್ಚೇತನಕ್ಕೆ ಈ ನೆರವು ಬಹಳ ಸಹಕಾರಿ ಆಗುವ ನಿರೀಕ್ಷೆ ಇದೆ' ಎಂದಿದ್ದಾರೆ.

  'ಸಿಎಂ ಕೆಸಿಆರ್‌ ಅವರಿಗೆ ಕೃತಜ್ಞತೆಗಳು ಮತ್ತು ಧನ್ಯವಾದಗಳು. ಅಗತ್ಯ ಸಂದರ್ಭದಲ್ಲಿ ತೆಲಂಗಾಣ ಸಿನಿಮಾ ಉದ್ಯಮಕ್ಕೆ ಬೇಕಾದ ನೆರವು, ಪರಿಹಾರ ಒದಗಿಸುತ್ತಿದ್ದೀರಿ' ಎಂದಿದ್ದಾರೆ ಅಕ್ಕಿನೇನಿ ನಾಗಾರ್ಜುನ.

  ನನ್ನ ಅಭಿಮಾನಿಗಳು ಎಷ್ಟು ಸುಂದರ ಅಲ್ವಾ ಎಂದ ರಶ್ಮಿಕಾ | Filmibeat Kannada

  ರಾಮ್ ಚರಣ್ ತೇಜ ಸಹ ಟ್ವೀಟ್ ಮಾಡಿದ್ದು, 'ತೆಲಂಗಾಣ ಸರ್ಕಾರಕ್ಕೆ ನಾನು ಹೃದಯಪೂರ್ವಕ ಆಭಾರಿಯಾಗಿದ್ದೇನೆ. ತೆಲುಗು ಸಿನಿಮಾ ಉದ್ಯಮದ ಪುನಶ್ಚೇತನವನ್ನು ಜೊತೆ-ಜೊತೆಯಾಗಿ ಮಾಡೋಣ' ಎಂದಿದ್ದಾರೆ.

  English summary
  Telugu star Chiranjeevi, Nagarjuna, Ram Charan Teja and many others thanked CM KCR for giving relief measures to Telugu movie industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X