For Quick Alerts
  ALLOW NOTIFICATIONS  
  For Daily Alerts

  ಚಿರು ಕುಟುಂಬದಲ್ಲಿ ಮತ್ತೊಂದು ಮದ್ವೆ: ಸಾಯಿ ಧರಮ್ ತೇಜ ಕಲ್ಯಾಣಕ್ಕೆ ಸಿದ್ಧತೆ!

  |

  ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಮತ್ತೊಂದು ಮದುವೆ ಸಂಭ್ರಮದ ಸುಳಿವು ಸಿಕ್ಕಿದೆ. ಇತ್ತೀಚಿಗಷ್ಟೆ ನಾಗಬಾಬು ಅವರ ಪುತ್ರಿ ನಿಹಾರಿಕ ವಿವಾಹ ಜರುಗಿತ್ತು. ಡಿಸೆಂಬರ್ 9 ರಂದು ಉದಯ್‌ಪುರ್‌ನಲ್ಲಿ ನಡೆದ ನಿಹಾರಿಕ-ಚೈತನ್ಯ ಕಲ್ಯಾಣದ ಸಮಾರಂಭದಲ್ಲಿ ಇಡೀ ಕುಟುಂಬ ಭಾಗಿಯಾಗಿತ್ತು.

  ಈ ಮದುವೆ ನೆರವೇರಿದ ಕೆಲವೇ ದಿನಗಳಲ್ಲಿ ಚಿರು ಕುಟುಂಬದ ಮತ್ತೊಬ್ಬ ನಟನ ಮದುವೆ ಸುದ್ದಿ ಚರ್ಚೆಯಲ್ಲಿದೆ. ಹೌದು, ಚಿರಂಜೀವಿ ಸೋದರಳಿಯ ಸಾಯಿ ಧರಮ್ ತೇಜ ಅವರ ಮದುವೆಗೆ ತಯಾರಿ ನಡೆಯುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ.

  ಫೋಟೋಗಳು; ಚೈತನ್ಯ ಜೊತೆ ಹಸೆಮಣೆ ಏರಿದ ಮೆಗಾಸ್ಟಾರ್ ಕುಟುಂಬದ ಏಕೈಕ ನಟಿ ನಿಹಾರಿಕಾ

  ಈ ಕುರಿತು ಮಾಧ್ಯಮದ ಜೊತೆ ಮಾತನಾಡಿರುವ ಸಾಯಿ ಧರಮ್ ತೇಜ ''ನಿಹಾರಿಕ ಮದುವೆ ಬಳಿಕ ನನ್ನ ಮದುವೆಗೆ ಮನೆಯಲ್ಲಿ ಒತ್ತಡ ಹೆಚ್ಚಿದೆ. ಮದುವೆ ಮಾಡಿಕೋ ಎಂದು ಕುಟುಂಬದ ಸದಸ್ಯರು ಆಗ್ರಹಿಸುತ್ತಿದ್ದಾರೆ'' ಎಂದು ತಿಳಿಸಿದ್ದಾರೆ.

  ''ಸದ್ಯಕ್ಕೆ ನಾನು ಸಿಂಗಲ್, ನನ್ನ ಮುಂದಿನ ಸಿನಿಮಾ 'ಸೋಲೋ ಬ್ರಾತುಕೆ ಸೋ ಬೆಟರ್' ಕುರಿತು ಯೋಚಿಸುತ್ತಿದ್ದೇನೆ. ಆದ್ರೆ, ನನ್ನ ಫ್ಯಾಮಿಲಿ ನನ್ನ ಮದುವೆಗೆ ಸಿದ್ಧತೆ ಮಾಡ್ತಿದ್ದಾರೆ'' ಎಂದು ಹೇಳಿಕೊಂಡಿದ್ದಾರೆ.

  ಸಾಯಿ ಧರಮ್ ತೇಜ ಅವರ ಈ ಮಾತು ಗಮನಿಸಿದರೆ ಬಹುಶಃ ಅವರ ಕುಟುಂಬದಲ್ಲಿ ಮದುವೆಗೆ ಸಿದ್ಧತೆ ಮಾಡುತ್ತಿದ್ದಾರೆ, ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಸಹ ಮಾಡಿದರು ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.

  ಈ ಹಿಂದೆ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದ ಸಾಯಿ ಧರಮ್ ತೇಜ, ''ಇನ್ನು ಒಂದು ಅಥವಾ ಎರಡು ವರ್ಷದ ನಂತರ ಮದುವೆ ಮಾಡಿಕೊಳ್ಳಬಹುದು. ಸದ್ಯಕ್ಕೆ ಯಾವುದೇ ಪ್ಲಾನ್ ಇಲ್ಲ'' ಎಂದು ಹೇಳಿಕೊಂಡಿದ್ದರು. ಆದ್ರೆ, ನಿಹಾರಿಕ ಮದುವೆ ಮುಗಿಯುತ್ತಿದ್ದಂತೆ ಸಾಯಿ ಧರಮ್ ತೇಜ ಮದುವೆಯೂ ಸುದ್ದಿಯಾಗುತ್ತಿದೆ.

  Arjun Sarja ಎಂಗೇಜ್ಮೆಂಟ್ ನಲ್ಲಿ Chiru ಹೇಗಿದ್ರು ನೋಡಿ | Filmibeat Kannada

  ಸೋಲೋ ಬ್ರಾತುಕೆ ಸೋ ಬೆಟರ್ ಚಿತ್ರದಲ್ಲಿ ನಭಾ ನಟೇಶ್ ನಾಯಕಿಯಾಗಿ ನಟಿಸಿದ್ದಾರೆ. ಸುಬ್ಬು ಆಕ್ಷನ್ ಕಟ್ ಹೇಳಿದ್ದು ಇದು ಚೊಚ್ಚಲ ಚಿತ್ರ. ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಬ್ಯಾನರ್ ಅಡಿಯಲ್ಲಿ ಬಿವಿಎಸ್ಎನ್ ಪ್ರಸಾದ್ ನಿರ್ಮಿಸಿದ್ದಾರೆ. ಡಿಸೆಂಬರ್ 25, 2020 ರಂದು (ಕ್ರಿಸ್‌ಮಸ್) ಈ ಸಿನಿಮಾ ತೆರೆಕಾಣಬಹುದು.

  English summary
  Telugu actor Chiranjeevi nephew sai dharam tej Will Getting Married Soon?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X