twitter
    For Quick Alerts
    ALLOW NOTIFICATIONS  
    For Daily Alerts

    ಜೀವ ಉಳಿಸುವ ಮಹತ್‌ ಕಾರ್ಯಕ್ಕೆ ಮುಂದಾದ ಚಿರಂಜೀವಿ-ರಾಮ್ ಚರಣ್

    |

    ಮೆಗಾಸ್ಟಾರ್ ಚಿರಂಜೀವಿ ಬಹು ವರ್ಷಗಳಿಂದಲೂ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬ್ಲಡ್ ಬ್ಯಾಂಕ್, ಕಣ್ಣು ಬ್ಯಾಂಕ್, ಕಷ್ಟದಲ್ಲಿರುವ ನಟ-ನಟಿಯರಿಗೆ ಆರ್ಥಿಕ ಸಹಾಯ ಹೀಗೆ ಹಲವಾರು ಕಾರ್ಯಗಳನ್ನು ದಶಕಗಳಿಂದಲೂ ಮಾಡಿಕೊಂಡು ಬಂದಿದ್ದಾರೆ ಚಿರಂಜೀವಿ.

    ಕೊರೊನಾ ಸಮಯದಲ್ಲಿಯೂ ಚಿರಂಜೀವಿ ವೈಯಕ್ತಿಕವಾಗಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಆದರೆ ಈಗ ದೊಡ್ಡ ಸಂಖ್ಯೆಯ ಜನರಿಗೆ ಸಹಾಯವಾಗುವಂತೆ ಮಹತ್ ಕಾರ್ಯಕ್ಕೆ ಕೈಹಾಕಿದ್ದಾರೆ. ಚಿರಂಜೀವಿ ಮಾಡುತ್ತಿರುವ ಕೋವಿಡ್ ರೋಗಿಗಳ ಜೀವ ಉಳಿಸುವ ಕಾರ್ಯಕ್ಕೆ ಚಿರಂಜೀವಿ ಪುತ್ರ, ನಟ ರಾಮ್ ಚರಣ್ ತೇಜ ಸಹ ಕೈಜೋಡಿಸಿದ್ದಾರೆ.

    ಆಂಧ್ರ ಪ್ರದೇಶದ ಹಲವು ಜಿಲ್ಲೆಗಳಿಗೆ ಆಮ್ಲಜನಕ ಸಿಲಿಂಡರ್‌ಗಳನ್ನು ಉಚಿತವಾಗಿ ಸರಬರಾಜು ಮಾಡುವ ಕಾರ್ಯವನ್ನು ನಟ ಚಿರಂಜೀವಿ ಹಾಗೂ ರಾಮ್ ಚರಣ್ ತೇಜ ಜಂಟಿಯಾಗಿ ಮಾಡುತ್ತಿದ್ದಾರೆ. ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಮ್ಲಜನಕ ಬ್ಯಾಂಕ್ ಸ್ಥಾಪಿಸಿದ್ದು ಈ ಆಮ್ಲಜನಕ ಬ್ಯಾಂಕ್‌ಗಳು ಇಂದಿನಿಂದ (ಮೇ 26) ಕಾರ್ಯಾರಂಭ ಮಾಡಿವೆ.

    ನೂರಾರು ಆಕ್ಸಿಜನ್ ಸಿಲಿಂಡರ್ ಹಾಗೂ ಸಾಂದ್ರಕ

    ನೂರಾರು ಆಕ್ಸಿಜನ್ ಸಿಲಿಂಡರ್ ಹಾಗೂ ಸಾಂದ್ರಕ

    ನೂರಾರು ಆಮ್ಲಜನಕ ಸಿಲಿಂಡರ್‌ಗಳು ಹಾಗೂ ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ಖರೀದಿಸಿರುವ ಚಿರಂಜೀವಿ ಮತ್ತು ರಾಮ್‌ ಚರಣ್ ಮೊದಲ ಬ್ಯಾಚ್‌ ಅನ್ನು ಅನಂತಪುರ ಜಿಲ್ಲೆ ಹಾಗೂ ಗುಂಟೂರಿಗೆ ಕಳುಹಿಸಿದ್ದಾರೆ. ಈ ಕುರಿತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಚಿರಂಜೀವಿ.

    ಅನಂತಪುರ, ಗುಂಟೂರಿಗೆ ಆಮ್ಲಕನಕ ಸಿಲಿಂಡರ್

    ಅನಂತಪುರ, ಗುಂಟೂರಿಗೆ ಆಮ್ಲಕನಕ ಸಿಲಿಂಡರ್

    'ಇಂದು ಅನಂತಪುರಂ ಹಾಗೂ ಗುಂಟೂರು ಜಿಲ್ಲೆಗೆ ಆಮ್ಲಜನಕ ಸಿಲಿಂಡರ್‌ಗಳನ್ನು ಕಳಿಸಿದ್ದೇವೆ. ಇನ್ನು ಮುಂದೆ ಇತರ ಜಿಲ್ಲೆಗಳಿಗೆ ಸಿಲಿಂಡರ್‌ಗಳನ್ನು, ಆಮ್ಲಜನಕ ಸಾಂದ್ರಕಗಳನ್ನು ಕಳಿಸಲಾಗುತ್ತದೆ. ಈ ಕಾರ್ಯವನ್ನು ನಾವು ಸಮರೋಪಾಧಿಯಲ್ಲಿ ಮಾಡುತ್ತಿದ್ದೇವೆ' ಎಂದಿದ್ದಾರೆ.

    ರಾಮ್ ಚರಣ್ ತೇಜ್ ಸಹ ಕೈ ಜೋಡಿಸಿದ್ದಾರೆ

    ರಾಮ್ ಚರಣ್ ತೇಜ್ ಸಹ ಕೈ ಜೋಡಿಸಿದ್ದಾರೆ

    'ಈ ಮಹತ್ವದ ಕಾರ್ಯದಲ್ಲಿ ರಾಮ್ ಚರಣ್ ತೇಜ ಸಹ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆಮ್ಲಜನಕ ಸಿಲಿಂಡರ್ ಹಾಗೂ ಸಾಂದ್ರಕಗಳು ಬೇಗ ನಮಗೆ ಲಭ್ಯವಾಗುವ ಹಿಂದೆ ರಾಮ್ ಚರಣ್ ಶ್ರಮ ಇದೆ. ನಾಳೆ (ಮೇ27) ಖಮ್ಮಂ, ಕರೀಂನಗರ ಸೇರಿ ಐದು ಜಿಲ್ಲೆಗಳಿಗೆ ಚಿರಂಜೀವಿ ಆಕ್ಸಿಜನ್ ಬ್ಯಾಂಕ್‌ನ ಆಕ್ಸಿಜನ್ ಸಿಲಿಂಡರ್‌ಗಳು ಸೇರುತ್ತವೆ' ಎಂದಿದ್ದಾರೆ ಚಿರಂಜೀವಿ.

    Recommended Video

    ಮಕ್ಕಳ ಜವಾಬ್ದಾರಿ ಏನು ಅನ್ನೋದನ್ನ ತೋರಿಸಿಕೊಟ್ರು Duniya Vijay | Filmibeat Kannada
    ಹಲವು ಸೇವಾ ಕಾರ್ಯ ಮಾಡಿರುವ ಚಿರಂಜೀವಿ

    ಹಲವು ಸೇವಾ ಕಾರ್ಯ ಮಾಡಿರುವ ಚಿರಂಜೀವಿ

    ಚಿರಂಜೀವಿ, ತೆಲುಗು ಸಿನಿಮಾ ಕಾರ್ಮಿಕರಿಗೆ ಸರ್ಕಾರದಿಂದ ಸಹಾಯ ಕೋಡಿಸಲು ಶ್ರಮಿಸಿದ್ದರು. ಅದು ಮಾತ್ರವೇ ಅಲ್ಲದೆ ಜನರಿಗೆ ಹಾಗೂ ಸಿನಿಮಾ ಕಾರ್ಮಿಕರಿಗೆ ಉಚಿತ ಆಹಾರ ವಿತರಣೆ, ದಿನಸಿ ವಿತರಣೆ. ಲಾಕ್‌ಡೌನ್‌ನಿಂದ ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಧನ ಸಹಾಯ ಇನ್ನೂ ಹಲವು ಸೇವಾ ಕಾರ್ಯವನ್ನು ಲಾಕ್‌ಡೌನ್ ಅವಧಿಯಲ್ಲಿ ಚಿರಂಜೀವಿ ಮಾಡಿದ್ದಾರೆ.

    English summary
    Actor Chiranjeevi and his son Ram Charan Teja started Oxygen Bank to help COVID 19 patients who were in need of oxygen.
    Wednesday, May 26, 2021, 15:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X