For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಹೊಡೆತಕ್ಕೆ ಸಿಕ್ಕ 'ಗಾಡ್‌ಫಾದರ್' ಟೋಟಲ್ ಕಲೆಕ್ಷನ್ ಎಷ್ಟು, ಉಂಟಾದ ನಷ್ಟವೆಷ್ಟು?

  |

  ಕಾಂತಾರ ಸೆಪ್ಟೆಂಬರ್ 30ರಂದು ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡಿತ್ತು. ಬಿಡುಗಡೆಯಾದ ದಿನದಿಂದಲೇ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಕಾಂತಾರ ಚಿತ್ರಕ್ಕೆ ಜನರು ಚಿತ್ರದ ಬಗ್ಗೆ ಆಡಿದ ಮಾತುಗಳೇ ದೊಡ್ಡ ಪ್ರಚಾರವಾಗಿ ಪರಿಣಮಿಸಿತು. ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡಿದ್ದ ಕಾಂತಾರ ಚಿತ್ರ ನಂತರ ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಚಿತ್ರವಾಯಿತು.

  ಕನ್ನಡದಲ್ಲಿ ಬಿಡುಗಡೆಯಾಗಿ ಎರಡು ವಾರಗಳ ನಂತರ ತೆಲುಗಿನಲ್ಲೂ ಅದೇ ಶೀರ್ಷಿಕೆ ಅಡಿಯಲ್ಲಿ ಅಕ್ಟೋಬರ್ 15ರಂದು ಬಿಡುಗಡೊಂಡ ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರ ಸದ್ಯ ತೆಲುಗು ರಾಜ್ಯಗಳಲ್ಲೇ ಐವತ್ತಕ್ಕೂ ಹೆಚ್ಚು ಕೋಟಿ ಗಳಿಸಿದೆ. ಇನ್ನು ಕಾಂತಾರ ಇತರೆ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಗೊಂಡ ನಂತರ ಆಯಾ ಭಾಷೆಗಳ ಹಲವು ಚಿತ್ರಗಳು ಹೆಚ್ಚು ಗಳಿಸುವ ಅವಕಾಶ ಕೈತಪ್ಪಿಸಿಕೊಂಡು ಹಿನ್ನಡೆ ಅನುಭವಿಸಿದವು.

  ಈ ರೀತಿ ಕಾಂತಾರ ಚಿತ್ರದ ಹೊಡೆತ ತಿಂದ ಚಿತ್ರಗಳ ಪೈಕಿ ತೆಲುಗಿನ ಗಾಡ್ ಫಾದರ್ ಹಾಗೂ ಘೋಸ್ಟ್ ಚಿತ್ರಗಳೂ ಸಹ ಸೇರಿವೆ. ಹೌದು, ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್ 5ರಂದು ತೆರೆ ಕಂಡಿದ್ದ ಚಿರಂಜೀವಿ ಅಭಿನಯದ ಗಾಡ್ ಫಾದರ್ ಚಿತ್ರ ಒಳ್ಳೆಯ ಓಪನಿಂಗ್ ಪಡೆದುಕೊಂಡಿತ್ತು. ಚಿತ್ರ ವೀಕ್ಷಿಸಿದವರು ಆಚಾರ್ಯ ಮೂಲಕ ಬಿದ್ದಿದ್ದ ಚಿರಂಜೀವಿ ಈ ಚಿತ್ರದ ಮೂಲಕ ಮೇಲೇಳಲಿದ್ದಾರೆ ಎಂದಿದ್ದರು. ಆದರೆ ಕಾಂತಾರ ತೆಲುಗಿಗೆ ಡಬ್ ಆದ ನಂತರ ಗಾಡ್ ಫಾದರ್ ಕಲೆಕ್ಷನ್ ಇಳಿಕೆ ಕಂಡು ಲಯ ಕಳೆದುಕೊಂಡಿತು. ಸದ್ಯ ಓಟಿಟಿಗೆ ಲಗ್ಗೆ ಇಟ್ಟಿರುವ ಗಾಡ್‌ ಫಾದರ್ ಚಿತ್ರ ಒಟ್ಟಾರೆ ಎಷ್ಟು ಗಳಿಸಿದೆ, ಚಿತ್ರದಿಂದ ಎಷ್ಟು ನಷ್ಟ ಉಂಟಾಗಿದೆ ಎಂಬ ವಿವರ ಈ ಕೆಳಕಂಡಂತಿದೆ..

  109 ಕೋಟಿ ಗಳಿಸಿದ ಗಾಡ್ ಫಾದರ್

  109 ಕೋಟಿ ಗಳಿಸಿದ ಗಾಡ್ ಫಾದರ್

  ಇನ್ನು 85 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಚಿರಂಜೀವಿ ಹಾಗೂ ನಯನತಾರಾ ಅಭಿನಯದ ಗಾಡ್ ಫಾದರ್ ಚಿತ್ರ ಒಟ್ಟಾರೆ 109 ಕೋಟಿ ಗ್ರಾಸ್ ಗಳಿಸಿದೆ. ಒಟ್ಟಿನಲ್ಲಿ ಚಿತ್ರಕ್ಕೆ ಖರ್ಚಾಗಿದ್ದ ಬಜೆಟ್‌ಗಿಂತ ಅಧಿಕ ಹಣವನ್ನು ಗಾಡ್ ಫಾದರ್ ಗಳಿಸಿದೆ .

  14 ಕೋಟಿ ನಷ್ಟ

  14 ಕೋಟಿ ನಷ್ಟ

  ಗಾಡ್ ಫಾದರ್ ಬಜೆಟ್‌ಗಿಂತ ಅಧಿಕ ಗಳಿಸಿರಬಹುದು. ಆದರೆ ಆ ಕಲೆಕ್ಷನ್‌ನ ಶೇರ್ ಮೊತ್ತ ಕಡಿಮೆ ಇರುವುದರಿಂದ ಚಿತ್ರ ನಷ್ಟವನ್ನು ಕಂಡಿದೆ ಎಂದು ವರದಿ ಮಾಡಿದೆ 'ಟಾಲಿ ಟು ಬಾಲಿ' ಎಂಬ ತೆಲುಗಿ ವೆಬ್ ಸೈಟ್. ಹೌದು, ಗಾಡ್ ಫಾದರ್ ಚಿತ್ರ 74 ಕೋಟಿ ಶೇರ್ ಕಲೆಕ್ಷನ್ ಮಾಡಿದರೆ ವಿತರಕರು ಸೇಫ್ ಆಗುತ್ತಿದ್ದರು. ಆದರೆ ಚಿತ್ರ 59.38 ಕೋಟಿ ರೂಪಾಯಿಗಳಷ್ಟು ಮಾತ್ರ ಶೇರ್ ಕಲೆಕ್ಷನ್ ಮಾಡಿರುವುದರಿಂದ 14.62 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದ್ದಾರೆ ವಿತರಕರು.

  ಕಾಂತಾರ ಇರದಿದ್ದರೆ ಮತ್ತೊಂದಷ್ಟು ಗಳಿಸುತ್ತಿತ್ತು

  ಕಾಂತಾರ ಇರದಿದ್ದರೆ ಮತ್ತೊಂದಷ್ಟು ಗಳಿಸುತ್ತಿತ್ತು

  ಇನ್ನು ಕಾಂತಾರ ತೆಲುಗಿಗೆ ಡಬ್ ಆಗಿ ಬಿಡುಗಡೆಯಾದ ನಂತರ ಗಾಡ್ ಫಾದರ್ ಕಲೆಕ್ಷನ್ ತಗ್ಗಿರುವುದನ್ನು ಕಾಣಬಹುದಾಗಿದೆ. ಮೊದಲೇ ಗಾಡ್ ಫಾದರ್ ಚಿತ್ರಕ್ಕಿದ್ದ ಮಿಶ್ರ ಪ್ರತಿಕ್ರಿಯೆಯ ಜತೆ ತೆಲುಗು ರಾಜ್ಯಗಳ ವೀಕ್ಷಕರು ಕಾಂತಾರ ಕಡೆ ಮುಖ ಮಾಡಿದ ಪ್ರಭಾವ ಚಿತ್ರ ಲಾಭ ತರುವಲ್ಲಿ ವಿಫಲವಾಗಿದೆ. ಒಂದುವೇಳೆ ಕಾಂತಾರ ಬಿಡುಗಡೆಗೊಳ್ಳದಿದ್ದರೆ ಮೂರನೇ ವಾರ ಮತ್ತೊಂದಷ್ಟು ಕೋಟಿ ರೂಪಾಯಿ ಕಲೆಕ್ಷನ್ ಅನ್ನು ಗಾಡ್ ಫಾದರ್ ಮಾಡಿಕೊಂಡು ಸೇಫ್ ಆಗುತ್ತಿತ್ತು ಎನ್ನಬಹುದು.

  English summary
  Chiranjeevi Starrer Godfather failed to cross breakeven due to Kantara effect. Take a look
  Wednesday, November 23, 2022, 14:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X