For Quick Alerts
  ALLOW NOTIFICATIONS  
  For Daily Alerts

  ಮೆಗಾಸ್ಟಾರ್ ಚಿರಂಜೀವಿ ಹಿರಿಯ ಪುತ್ರಿ ಸುಶ್ಮಿತಾ ಚಿತ್ರರಂಗಕ್ಕೆ ಎಂಟ್ರಿ

  |

  ಮೆಗಾಸ್ಟಾರ್ ಚಿರಂಜೀವಿ ಕುಟುಂಬದಿಂದ ಮತ್ತೊಬ್ಬ ಕಲಾವಿದೆ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ಚಿರಂಜೀವಿ, ಚಿರು ಸಹೋದರರ, ಚಿರಂಜೀವಿ ಮಗ, ಸಹೋದರನ ಮಕ್ಕಳು, ಸಹೋದರಿಯರ ಮಕ್ಕಳು ಹೀಗೆ ತೆಲುಗು ಇಂಡಸ್ಟ್ರಿಯಲ್ಲಿ ಮೆಗಾ ಕುಟುಂಬದಿಂದ ಬಹಳಷ್ಟು ಜನರು ಈಗಾಗಲೇ ಸಿನಿಮಾಗಳನ್ನು ಮಾಡ್ತಿದ್ದಾರೆ. ಇದೀಗ, ಚಿರು ಪುತ್ರಿ ಅಧಿಕೃತವಾಗಿ ಟಾಲಿವುಡ್ ಇಂಡಸ್ಟ್ರಿ ಪ್ರವೇಶಿಸಿದ್ದಾರೆ.

  ಆಗಸ್ಟ್ 22 ರಂದು ಮೆಗಾಸ್ಟಾರ್ 66ನೇ ಹುಟ್ಟುಹಬ್ಬ. ಚಿರು ಬರ್ತಡೇ ಹಿನ್ನೆಲೆ ಹೊಸ ಹೊಸ ಸಿನಿಮಾಗಳು, ಪೋಸ್ಟರ್, ಟೀಸರ್ ಹಾಗೂ ಇನ್ನಿತರ ಸರ್ಪ್ರೈಸ್‌ಗಳೊಂದಿಗೆ ಸಿದ್ದವಾಗಿದೆ. ಒಂದು ದಿನಕ್ಕೂ ಮುಂಚೆಯೇ ಮಗಳು ಸರ್ಪ್ರೈಸ್ ಕೊಟ್ಟಿದ್ದಾರೆ. ಚಿರಂಜೀವಿಯ ಹಿರಿಯ ಪುತ್ರಿ ಸುಶ್ಮಿತಾ ತಮ್ಮ ಚೊಚ್ಚಲ ಸಿನಿಮಾದ ಟೈಟಲ್ ಪೋಸ್ಟರ್ ಅನಾವರಣಗೊಳಿಸಿದ್ದಾರೆ.

  ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ ಮೆಗಾಸ್ಟಾರ್ ಚಿರಂಜೀವಿಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ ಮೆಗಾಸ್ಟಾರ್ ಚಿರಂಜೀವಿ

  ಪ್ರಶಾಂತ್ ಕುಮಾರ್ ದಿಮ್ಮಾಲ ನಿರ್ದೇಶನದಲ್ಲಿ ಸುಶ್ಮಿತಾ ಕೊಂಡೇಲಾ ನಾಯಕಿಯಾಗಿ ಎಂಟ್ರಿಯಾಗುತ್ತಿದ್ದು, ಈ ಚಿತ್ರಕ್ಕೆ 'ಶ್ರೀದೇವಿ ಶೋಭನ್‌ಬಾಬು' ಎಂದು ನಾಮಕರಣ ಮಾಡಲಾಗಿದೆ. ಸಂತೋಷ್ ಶೋಭನ್ ನಾಯಕನಾಗಿ ನಟಿಸುತ್ತಿದ್ದಾರೆ. ಮುಂದೆ ಓದಿ...

  2006ರಲ್ಲಿ ಮದುವೆ ಆಗಿದೆ

  2006ರಲ್ಲಿ ಮದುವೆ ಆಗಿದೆ

  ಸುಶ್ಮಿತಾ ಕೊಂಡೇಲಾ ಅವರಿಗೆ 2006ರಲ್ಲಿಯೇ ವಿವಾಹವಾಗಿದೆ. ವಿಷ್ಣುಪ್ರಸಾದ್ ಜೊತೆ ದಾಂಪತ್ಯ ಜೀವನ ಆರಂಭಿಸಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಸಮರ ಮತ್ತು ಸಂಹಿತಾ. ಸುಶ್ಮಿತಾಗೆ ಈಗ 38 ವರ್ಷ ವಯಸ್ಸು.

  ಚಿರಂಜೀವಿ ಮಕ್ಕಳ ವಿವರ

  ಚಿರಂಜೀವಿ ಮಕ್ಕಳ ವಿವರ

  ತೆಲುಗಿನ ಖ್ಯಾತ ಕಲಾವಿದ ಅಲ್ಲು ರಾಮಲಿಂಗಯ್ಯ ಅವರ ಮಗಳು ಸುರೇಖಾ ಅವರನ್ನು 1980ರಲ್ಲಿ ಚಿರಂಜೀವಿ ಮದುವೆಯಾದರು. ಈ ದಂಪತಿಗೆ ಮೂವರು ಮಕ್ಕಳು. ಸುಶ್ಮಿತಾ, ಶ್ರೀಜಾ ಹಾಗೂ ರಾಮ್ ಚರಣ್. ರಾಮ್ ಚರಣ್ ತೆಲುಗು ಇಂಡಸ್ಟ್ರಿಯ ಸ್ಟಾರ್ ನಟ. ಚಿರಂಜೀವಿ ಸಹೋದರ ನಾಗಬಾಬು ಮತ್ತು ಪವನ್ ಕಲ್ಯಾಣ್. ನಾಗುಬಾಬು ಮಗ ವರುಣ್ ತೇಜ ನಾಯಕ ನಟ. ನಿಹಾರಿಕ ಸಹ ಸಿನಿಮಾ ಮಾಡಿದ್ದಾರೆ.

  'ಆಚಾರ್ಯ' ಬಿಡುಗಡೆಯಾಗಬೇಕಿದೆ

  'ಆಚಾರ್ಯ' ಬಿಡುಗಡೆಯಾಗಬೇಕಿದೆ

  ಸದ್ಯ ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾ ಸಂಪೂರ್ಣ ಚಿತ್ರೀಕರಣ ಮುಗಿಸಿದೆ. ರಾಮ್ ಚರಣ್ ತೇಜ ಈ ಚಿತ್ರ ನಿರ್ಮಿಸಿದ್ದು, ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಎರಡ್ಮೂರು ಸಲ ಬಿಡುಗಡೆ ದಿನಾಂಕ ಘೋಷಿಸಿ ಕೊರೊನಾ ಲಾಕ್‌ಡೌನ್‌ನಿಂದ ಮುಂದೂಡಿಕೆ ಮಾಡಿದೆ. ಈಗ ಹೊಸ ದಿನಾಂಕಕ್ಕಾಗಿ ಚಿತ್ರತಂಡ ಆಲೋಚಿಸುತ್ತಿದೆ. ಕಾಜಲ್ ಅಗರ್‌ವಾಲ್ ನಾಯಕಿಯಾಗಿ ನಟಿಸಿದ್ದು, ಪೂಜಾ ಹೆಗ್ಡೆ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

  ಬರ್ತಡೇಗೆ ಹೊಸ ಸಿನಿಮಾಗಳು ಘೋಷಣೆ

  ಬರ್ತಡೇಗೆ ಹೊಸ ಸಿನಿಮಾಗಳು ಘೋಷಣೆ

  ಚಿರಂಜೀವಿ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿರುವ ಚಿರಂಜೀವಿ ಸಾಧ್ಯವಾದರೆ ಗಿಡಗಳನ್ನು ನೆಡಿ ಎಂದು ಕರೆ ಕೊಟ್ಟಿದ್ದಾರೆ. ಬರ್ತಡೇ ಪ್ರಯುಕ್ತ ಹೊಸ ಸಿನಿಮಾಗಳು ಘೋಷಣೆಯಾಗಲಿದೆ. ಮಲಯಾಳಂ ಹಿಟ್ ಸಿನಿಮಾ 'ಲೂಸಿಫರ್' ತೆಲುಗು ರಿಮೇಕ್‌ಗೆ ಚಾಲನೆ ಕೊಟ್ಟಿದ್ದಾರೆ. ತಮಿಳಿನ 'ವೇದಲಂ' ಚಿತ್ರವನ್ನು ತೆಲುಗಿಗೆ ರಿಮೇಕ್ ಮಾಡಲಾಗುತ್ತಿದೆ. ಈ ಚಿತ್ರದಲ್ಲೂ ಚಿರಂಜೀವಿ ನಾಯಕ. ನಿರ್ದೇಶಕ ಬಾಬಿ ಜೊತೆಯೂ ಹೊಸ ಸಿನಿಮಾವೊಂದು ಆರಂಭಿಸುತ್ತಿದ್ದಾರೆ.

  English summary
  Telugu megastar Chiranjeevi's daughter Sushmita Konidela debut in tollywood with 'Sridevi Shoban Babu' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X