For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯಾ ರೈಗೆ 10 ಕೋಟಿ..! ಬಹಿರಂಗವಾಯ್ತು 'ಪೊನ್ನಿಯಿನ್ ಸೆಲ್ವನ್' ನಟರ ಸಂಭಾವನೆ..!

  |

  ನಿರ್ದೇಶಕ ಮಣಿರತ್ನಂ ಅವರ ಮುಂದಿನ ಚಿತ್ರ, ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಪೊನ್ನಿಯಿನ್ ಸೆಲ್ವನ್ 1 ಚಿತ್ರ ಇದೆ ಸಪ್ಟೆಂಬರ್ 30ರಂದು ಬಿಡುಗಡೆಗೆ ಸಜ್ಜಾಗಿದೆ. ವಿಶ್ವದಾದ್ಯಂತ ತೆರೆ ಕಾಣಲಿರುವ 'ಪೊನ್ನಿಯಿನ್ ಸೆಲ್ವನ್' ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಟ್ರೈಲರ್‌ ಪೋಸ್ಟರ್‌ಗಳ ಮೂಲಕ ಚಿತ್ರ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದು, ಚೋಳ ಸಾಮ್ರಾಜ್ಯದ ಸುತ್ತಲಿನ ಕಥಾ ಹಂದರರೊಂದಿಗೆ ಚಿತ್ರ ಜನರನ್ನು ತಲುಪಲಿದೆ.

  ಪೊನ್ನಿಯಿನ್ ಸೆಲ್ವನ್ ಚಿತ್ರ ಕಲ್ಕಿ ಕೃಷ್ಣಮೂರ್ತಿಯವರ ಸಾಹಿತ್ಯ ಕೃತಿಯನ್ನು ಆಧರಿಸಿದ ಕಥೆಯಾಗಿದೆ. ತಮಿಳು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಅನೇಕ ದಿಗ್ಗಜರು ಈ ಚಿತ್ರವನ್ನು ಮಾಡಲು ಪ್ರಯತ್ನಿಸುತ್ತಿದ್ದರು. ಆದರೆ ಇದೀಗ ಸಮಯ ಕೂಡಿಬಂದಿದ್ದು, ಮಣಿರತ್ನಂ ಈ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಮಣಿರತ್ನಂ ಅವರ ಕನಸಿನ ಯೋಜನೆಗಳಲ್ಲಿ ಪೊನ್ನಿಯಿನ್ ಸೆಲ್ವನ್ ಕೂಡ ಒಂದಾಗಿದ್ದು, ಕಲ್ಕಿ ಕೃಷ್ಣಮೂರ್ತಿಯವರ ಸಂಪೂರ್ಣ ಕೃತಿಯನ್ನು ಒಂದೇ ಸಿನಿಮಾವಾಗಿಸಲು ಮೊದಲು ನಿರ್ಧರಿಸಿದ್ದರು. ಆದರೆ ಕಥೆ ಬಹುದೊಡ್ಡ ಪ್ರಮಾಣವಾಗಿರುವ ಕಾರಣ ಪೊನ್ನಿಯಿನ್ ಸೆಲ್ವನ್ ಚಿತ್ರವನ್ನು ಎರಡು ಭಾಗ ಮಾಡಲಾಗಿದೆ ಎನ್ನಲಾಗಿದೆ.

  ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಸುಮಾರು 500 ಕೋಟಿ ರೂ ಬಜೆಟ್‌ನಲ್ಲಿ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರ ಸಿದ್ಧವಾಗಿದೆ. ಬಾಲಿವುಡ್‌ ನಟಿ ಐಶ್ವರ್ಯಾ ರೈ, ಟಾಲಿವುಡ್‌ ನಟ ಚಿಯಾನ್‌ ವಿಕ್ರಮ್‌, ಕಾರ್ತಿ, ಜಯಂ ರವಿ, ತ್ರಿಶಾ, ಶೋಭಿತಾ ಧುಲಿಪಾಲ ಸೇರಿದಂತೆ ದೊಡ್ಡ ತಾರಾ ಬಳಗವೆ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿದ್ದು, ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟರನ್ನೇ ಚಿತ್ರದ ಪ್ರಮುಖ ಪಾತ್ರಗಳಿಗೆ ಮಣಿರತ್ನಂ ಆಯ್ಕೆ ಮಾಡಿದ್ದಾರೆ. ಇನ್ನು ಪೊನ್ನಿಯಿನ್ ಸೆಲ್ವನ್ ಐತಿಹಾಸಿಕ ಚಿತ್ರವಾಗಿದ್ದು, ಅಂದಿನ ಕಾಲದ ರಾಜವೈಭವಕ್ಕೆ ತಕ್ಕಂತಹ ಸೆಟ್‌ಗಳು, ಅದ್ಧೂರಿ ವೇಷ ಭೂಷಣಗಳನ್ನು ಚಿತ್ರದಲ್ಲಿ ಕಾಣಬಹುದಾಗಿದೆ. ಹೀಗಾಗಿ ಚಿತ್ರದ ಬಜೆಟ್‌ ಕೂಡ ದೊಡ್ಡ ಮಟ್ಟದಲ್ಲಿದೆ.

  ಪೊನ್ನಿಯಿನ್ ಸೆಲ್ವನ್ ಚಿತ್ರ ಬಿಡುಗಡೆಗೆ ಸಮೀಪಿಸುತ್ತಿದಂತೆ ಚಿತ್ರದ ಒಂದೊಂದೆ ಇಂಟ್ರಸ್ಟಿಂಗ್‌ ವಿಚಾರಗಳು ಹೊರಬರುತ್ತಿದ್ದು, ಇದೀಗ ಚಿತ್ರದ ತಾರಾಗಣದ ಸಂಭಾವನೆ ಮಾಹಿತಿ ಹೊರಬಿದ್ದಿದೆ. ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಎಲ್ಲಾ ಭಾಗದ ನಟ ದಿಗ್ಗಜರನ್ನು ಒಗ್ಗೂಡಿಸಲಾಗಿದೆ. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಟಾಲಿವುಡ್‌ ನಟ ಚಿಯಾನ್‌ ವಿಕ್ರಮ್‌ಗೆ 12 ಕೋಟಿ ರೂ ಸಂಭಾವನೆ ನೀಡಲಾಗಿದ್ದು, ಬಾಲಿವುಡ್‌ ನಟಿ ನಟಿ ಐಶ್ವರ್ಯಾ ರೈಗೆ 10 ಕೋಟಿ ರೂ ಸಂಭಾವನೆ ನೀಡಲಾಗಿದೆಯಂತೆ. ಇದು ಚಿತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದವರಾಗಿದ್ದು, ಇನ್ನು ಜಯಂ ರವಿ 8 ಕೋಟಿ ರೂ, ಕಾರ್ತಿ 5 ಕೋಟಿ ರೂ, ನಟಿ ತ್ರಿಷಾ 2 ಕೋಟಿ ರೂ ಸಂಭಾವನೆ ಪಡೆದಿದ್ದರೆ, ಪ್ರಕಾಶ್‌ ರಾಜ್‌ ಹಾಗೂ ಐಶ್ವರ್ಯ ಲಕ್ಕಿ ತಲಾ 1.5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.

  ಪೊನ್ನಿಯಿನ್ ಸೆಲ್ವನ್ ಚಿತ್ರ ಕಾದಂಬರಿ ಆಧರಿತ ಐತಿಹಾಸಿಕ ಕಥೆಯಾಗಿದೆ. 1955ರಲ್ಲಿ ಇದ್ದ ಚೋಳರ ಆಡಳ್ವಿಕೆ ಮತ್ತು ಅವರ ಪರಂಪರೆಯನ್ನು ಚಿತ್ರ ಪ್ರತಿನಿಧಿಸುತ್ತಿದೆ. ಜೊತೆಗೆ ತಮಿಳು ನಾಡಿನ ಹಳೆಯ ಪರಂಪರೆಯ ಸುತ್ತ ಚಿತ್ರದ ಕಥೆ ಸುತ್ತಲಿದೆ. ಎ.ಆರ್‌ ರೆಹಮಾನ್‌ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ತಮಿಳಿನಲ್ಲಿ ಬಿ ಜಯಮೋಹನ್ ಮತ್ತು ತೆಲುಗಿನಲ್ಲಿ ತನಿಕೆಲ್ಲ ಭರಣಿ ಚಿತ್ರದ ಸಂಭಾಷಣೆ ಬರೆದಿದ್ದಾರೆ. ರವಿವರ್ಮನ್ ಅವರ ಛಾಯಾಗ್ರಹಣದಲ್ಲಿ ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ.

  English summary
  Tollwood Actor Chiyaan Vikram Starer Ponniyin Selvan Star Cast Remuneration.
  Monday, September 26, 2022, 21:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X