For Quick Alerts
  ALLOW NOTIFICATIONS  
  For Daily Alerts

  ಕಾಡಿಗೆ ಎಂಟ್ರಿ ಕೊಟ್ಟಿದ್ದ ನಟ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲು

  |

  ತೆಲಂಗಾಣದ ಅಡಿಲಾಬಾದ್ ಕಾಡಿಗೆ ಭೇಟಿ ನೀಡಿದ್ದ ನಟ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಾಗಿದೆ. ಕೊರೊನಾ ವೈರಸ್ ಸಮಯದಲ್ಲಿಭೇಟಿ ನೀಡಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಅಲ್ಲು ವಿರುದ್ಧ ಅಡಿಲಾಬಾದ್ ನ ನೆರಾಡಿಕೊಂಡ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿದೆ.

  ನಟ ಅಲ್ಲು ಅರ್ಜುನ್ ಇತ್ತೀಚಿಗೆ ತೆಲಂಗಾಣದ ಅಡಿಲಾಬಾದ್ ಕಾಡಿಗೆ ಭೇಟಿ ನೀಡಿದ್ದರು. ಅಲ್ಲು ಅರ್ಜುನ್ ಎಂಟ್ರಿ ಕೊಡುತ್ತಿದ್ದಂತೆ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಾರೆ. ಯಾವುದೇ ಸಾಮಾಜಿಕ ಅಂತರ, ಮಾಸ್ಕ್ ಧರಿಸಿದೆ ಅಭಿಮಾನಿಗಳು ಅಲ್ಲು ಅರ್ಜುನ್ ಮುತ್ತಿಕೊಂಡಿದ್ದಾರೆ. ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ಪಟ್ಟಿದ್ದಾರೆ. ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.

  ಕಾಡಿಗೆ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್ ನೋಡಲು ಮುಗಿಬಿದ್ದ ಅಭಿಮಾನಿಗಳು

  ಅಲ್ಲು ಅರ್ಜುನ್ ಮುಂಬರುವ ಪುಷ್ಪ ಸಿನಿಮಾಗಾಗಿ ಸ್ಥಳ ನೋಡಲು ಕಾಡಿಗೆ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ಸ್ನೇಹಿತರು ಮತ್ತು ಸಿನಿಮಾತಂಡದ ಜೊತೆ ಅಲ್ಲು ಅಡಿಲಾಬಾದ್ ಕಾಡಿಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ಹರಿತ ವನಮ್ ಪಾರ್ಕ್ ಮತ್ತು ಕುಂತಲಾ ಜಲಪಾತಕ್ಕೆ ಭೇಟಿ ನೀಡಿದ್ದಾರೆ.

  ಕೊರೊನಾ ಹಿನ್ನಲೆ ಈ ಸ್ಥಳಗಳನ್ನು ಸಾರ್ವಜನಿಕ ಪ್ರವೇಶಕ್ಕೆ ಮುಚ್ಚಲಾಗಿದೆ. ಯಾರಿಗೂ ಪ್ರವೇಶವಿಲ್ಲ ಆದರೆ ಆದರೆ ಅಲ್ಲು ಅರ್ಜುನ್ ಮತ್ತು ಸ್ನೇಹಿತರು ನಿಯಮ ಉಲ್ಲಂಘನೆ ಮಾಡಿ ಭೇಟಿ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

  ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada

  ಅಲ್ಲು ಅರ್ಜುನ್ ಸದ್ಯ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾರಿ ಡ್ರೈವರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲು ಅರ್ಜುನ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವ ಪುಷ್ಪ ತಂಡ ಸದ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದೆ.

  English summary
  Complaint Against Allu Arjun In Police Station For Scouting Some Of The Locations For His Pushpa Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X