For Quick Alerts
  ALLOW NOTIFICATIONS  
  For Daily Alerts

  ಕೊರೊನಾ ವೈರಸ್ ಭೀತಿ: ನಾಗಾರ್ಜುನ ಚಿತ್ರದ ಶೂಟಿಂಗ್ ಕ್ಯಾನ್ಸಲ್.!

  |

  ಮಾರಣಾಂತಿಕ ಕೊರೊನಾ ವೈರಸ್ ನಿಂದ ವಿಶ್ವದಾದ್ಯಂತ ಆತಂಕ ಸೃಷ್ಟಿಸಿದೆ. ಕೊರೊನಾ ವೈರಸ್ ನಿಂದ ಚೀನಾದಲ್ಲಿ ಮರಣ ಮೃದಂಗ ಮುಂದುವರೆದಿದ್ದು, ಸೋಂಕು ಇತರೆ ದೇಶಗಳಿಗೂ ಹಬ್ಬುವ ಭೀತಿ ಮೂಡಿದೆ. ಸೋಂಕು ಹರಡದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ.

  ಇವೆಲ್ಲದರ ನಡುವೆ ಡೆಡ್ಲಿ ಕೊರೊನಾ ವೈರಸ್ ನಿಂದ ಚಿತ್ರವೊಂದರ ಶೂಟಿಂಗ್ ಕ್ಯಾನ್ಸಲ್ ಆಗಿದೆ. ತೆಲುಗು ನಟ ನಾಗಾರ್ಜುನ ಅಭಿನಯದ 'ವೈಲ್ಡ್ ಡಾಗ್' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿತ್ತು. ಆದ್ರೀಗ, ಕೊರೊನಾ ಬಿಸಿ ಈ ಚಿತ್ರಕ್ಕೂ ತಟ್ಟಿದೆ.

  ಅಕ್ಕಿನೇನಿ ಕುಟುಂಬದ ಅವಾರ್ಡ್ ಫಂಕ್ಷನ್ ಗೆ ಸಮಂತಾ ಚಕ್ಕರ್: ಕಾರಣ ಬಯಲು.!ಅಕ್ಕಿನೇನಿ ಕುಟುಂಬದ ಅವಾರ್ಡ್ ಫಂಕ್ಷನ್ ಗೆ ಸಮಂತಾ ಚಕ್ಕರ್: ಕಾರಣ ಬಯಲು.!

  'ವೈಲ್ಡ್ ಡಾಗ್' ಚಿತ್ರದ ಮುಂದಿನ ಶೂಟಿಂಗ್ ಶೆಡ್ಯೂಲ್ ನ ಥೈಲ್ಯಾಂಡ್ ನಲ್ಲಿ ಪ್ಲಾನ್ ಮಾಡಲಾಗಿತ್ತು. ಆದ್ರೆ ಥೈಲ್ಯಾಂಡ್ ನಲ್ಲೂ ಕೊರೊನಾ ಭಯ ಇರುವುದರಿಂದಾಗಿ ಶೂಟಿಂಗ್ ಶೆಡ್ಯೂಲ್ ನ ಕ್ಯಾನ್ಸಲ್ ಮಾಡಲಾಗಿದೆ. ಮುಂದಿನ ಹಂತದ ಚಿತ್ರೀಕರಣ ದಿನಾಂಕವನ್ನು ಸದ್ಯಕ್ಕೆ ಚಿತ್ರತಂಡ ಘೋಷಿಸಿಲ್ಲ.

  ನಾಗಾರ್ಜುನ ಮಾತಿಗೆ ನಾಚಿ ನೀರಾದ ನಟಿ ರೇಖಾನಾಗಾರ್ಜುನ ಮಾತಿಗೆ ನಾಚಿ ನೀರಾದ ನಟಿ ರೇಖಾ

  ಅಂದ್ಹಾಗೆ, 'ವೈಲ್ಡ್ ಡಾಗ್' ಚಿತ್ರದಲ್ಲಿ ನಾಗಾರ್ಜುನ RAW ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸೋಲೋಮನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ನೈಜ ಘಟನೆ ಆಧಾರಿತ ಚಿತ್ರ ಇದಾಗಿದೆ.

  English summary
  Corona Virus scare cancels Nagarjuna's film Wild Dog shooting schedule.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X