For Quick Alerts
  ALLOW NOTIFICATIONS  
  For Daily Alerts

  ತೆಲುಗಿಗೆ ರಾಬರ್ಟ್‌: ದರ್ಶನ್‌ ಪಾತ್ರಕ್ಕೆ ಧ್ವನಿ ಕೊಡುವವರು ಯಾರು?

  |

  ನಟ ದರ್ಶನ್ ನಟನೆಯ ಸಿನಿಮಾ ರಾಬರ್ಟ್‌ ಬಿಡುಗಡೆ ದಿನಾಂಕ ಇದೀಗ ಘೋಷಣೆ ಆಗಿದೆ. ಮಾರ್ಚ್‌ 11 ನೇ ತಾರೀಖಿನಂದು ರಾಬರ್ಟ್ ಸಿನಿಮಾ ಬಿಡುಗಡೆ ಆಗಲಿದೆ. ಅದೇ ದಿನ ಕನ್ನಡದ ಜೊತೆಗೆ ತೆಲುಗಿನಲ್ಲಿಯೂ ಸಿನಿಮಾ ಬಿಡುಗಡೆ ಆಗಲಿದೆ.

  ರಾಬರ್ಟ್‌ನ ತೆಲುಗು ವರ್ಷನ್‌ಗಾಗಿ ಲಘು-ಬಗೆಯಲ್ಲಿ ಡಬ್ಬಿಂಗ್ ಕಾರ್ಯ ನಡೆಯುತ್ತಿದ್ದು. ನಟ ದರ್ಶನ್‌ ಅವರಿಗೆ ತೆಲುಗಿನಲ್ಲಿ ಯಾರು ಧ್ವನಿ ನೀಡಲಿದ್ದಾರೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.

  ಅಜಾನುಭಾಹು ದರ್ಶನ್‌ ಗೆ ಅವರದ್ದೇ ಧ್ವನಿ ಚೆನ್ನಾಗಿ ಹೊಂದುತ್ತದೆ. ದರ್ಶನ್ ಅವರ ದೇಹಕ್ಕೆ ತಕ್ಕಂತೆ ಅವರ ಧ್ವನಿ ಇದೆ. ದರ್ಶನ್ ಪಾತ್ರಕ್ಕೆ ಬೇರೆಯವರು ಧ್ವನಿ ನೀಡಿದರೆ ಅದು ಅಷ್ಟೇನೂ ಚೆನ್ನಾಗಿರುವುದಿಲ್ಲ ಎಂಬುದು ದರ್ಶನ್ ಅಭಿಮಾನಿಗಳು ಸೇರಿದಂತೆ ಹಲವರ ಅಭಿಪ್ರಾಯ.

  ಅಭಿಮಾನಿಗಳು ಬಯಸಿದಂತೆಯೇ ಆಗಿದೆ

  ಅಭಿಮಾನಿಗಳು ಬಯಸಿದಂತೆಯೇ ಆಗಿದೆ

  ದರ್ಶನ್ ಅಭಿಮಾನಿಗಳು ಬಯಸಿದಂತೆಯೇ ಆಗಿದೆ. ತೆಲುಗು ರಾಬರ್ಟ್‌ನಲ್ಲಿ ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಲಿದ್ದಾರೆ ನಟ ದರ್ಶನ್. ದರ್ಶನ್‌ ರ ಹಲವು ಸಿನಿಮಾಗಳು ಈಗಾಗಲೇ ತೆಲುಗಿಗೆ ಡಬ್ ಆಗಿ ಬಿಡುಗಡೆ ಆಗಿವೆ. ಆದರೆ ಇದೇ ಮೊದಲ ಬಾರಿಗೆ ದರ್ಶನ್ ತಮ್ಮದೇ ತೆಲುಗು ಸಿನಿಮಾಕ್ಕೆ ತಾವೇ ಡಬ್ ಮಾಡುತ್ತಿದ್ದಾರೆ.

  ಸುಲಲಿತವಾಗಿ ತೆಲುಗು ಮಾತನಾಡುತ್ತಾರೆ ದರ್ಶನ್

  ಸುಲಲಿತವಾಗಿ ತೆಲುಗು ಮಾತನಾಡುತ್ತಾರೆ ದರ್ಶನ್

  ದರ್ಶನ್ ಅವರು ಸುಲಲಿತವಾಗಿ ತೆಲುಗು ಭಾಷೆ ಮಾತನಾಡಬಲ್ಲರು. ಈ ಹಿಂದೆ ತಮ್ಮ ತೆಲುಗು ಡಬ್ ಸಿನಿಮಾಗಳ ಪ್ರಚಾರಕ್ಕಾಗಿ ತೆಲುಗು ರಾಜ್ಯಗಳಿಗೆ ಹೋದಾಗ ಅಲ್ಲಿ ಸಂದರ್ಶಕರೊಂದಿಗೆ, ಟಿವಿ ಮಾಧ್ಯಮದವರೊಂದಿಗೆ ತೆಲುಗಿನಲ್ಲಿಯೇ ಮಾತನಾಡಿದ್ದರು ನಟ ದರ್ಶನ್.

  ಸುಕುಮಾರ್ ಜೊತೆಗೆ ದರ್ಶನ್ ಸಿನಿಮಾ?

  ಸುಕುಮಾರ್ ಜೊತೆಗೆ ದರ್ಶನ್ ಸಿನಿಮಾ?

  2004 ರಲ್ಲಿ ಬಿಡುಗಡೆ ಆಗಿದ್ದ ಭಗವಾನ್ ಸಿನಿಮಾದಿಂದ ಹಿಡಿದು ಇತ್ತೀಚಿನ ಕುರುಕ್ಷೇತ್ರ ದ ವರೆಗೆ ಹಲವಾರು ಸಿನಿಮಾಗಳು ತೆಲುಗಿಗೆ ಡಬ್ ಆಗಿವೆ. ನಟ ದರ್ಶನ್ ಗೆ ತೆಲುಗು ರಾಜ್ಯಗಳಲ್ಲಿ ಸಹ ಕೋಟ್ಯಂತರ ಅಭಿಮಾನಿಗಳಿದ್ದಾರೆ. ನಟ ದರ್ಶನ್, ತೆಲುಗಿನ ಸ್ಟಾರ್ ನಿರ್ದೇಶಕ ಸುಕುಮಾರ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

  ತಮಿಳು ಸಿನಿಮಾದಲ್ಲಿ ನಟಿಸಿದ್ದ ದರ್ಶನ್

  ತಮಿಳು ಸಿನಿಮಾದಲ್ಲಿ ನಟಿಸಿದ್ದ ದರ್ಶನ್

  ದರ್ಶನ್‌ ಗೆ ತಮಿಳು ಸಹ ಮಾತನಾಡಲು ಬರುತ್ತದೆ. ದರ್ಶನ್ ಹೀರೋ ಆಗಿ ನಟಿಸುವ ಮುನ್ನಾ ತಮಿಳಿನಲ್ಲಿ ಒಂದು ಸಿನಿಮಾ ನಟಿಸಿದ್ದರು. ವಿಜಯ್‌ಕಾಂತ್ ನಟನೆಯ ಆ ಸಿನಿಮಾದ ಹೆಸರು ವಲ್ಲರಸು. ಕಳೆದ ಲೋಕಸಭಾ ಚುನಾವಣೆ ವೇಳೆ ಸುಮಲತಾ ಪರ ಪ್ರಚಾರ ಮಾಡುತ್ತಾ ಮಂಡ್ಯದ ತಮಿಳು ಕಾಲೋನಿಯಲ್ಲಿ ತಮಿಳಿನಲ್ಲಿ ಮಾತನಾಡಿದ್ದರು ನಟ ದರ್ಶನ್.

  English summary
  Darshan himself will give voice to his character in movie Robert's Telugu dubbed version.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X