Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಎರಡನೇ ಪತ್ನಿಯೊಟ್ಟಿಗಿನ ಲವ್ ಸ್ಟೋರಿ ಹಂಚಿಕೊಂಡ ದಿಲ್ ರಾಜು
ದಿಲ್ ರಾಜು, ದಕ್ಷಿಣ ಭಾರತದ ಜನಪ್ರಿಯ ನಿರ್ಮಾಪಕ ಹಾಗೂ ಸಿನಿಮಾ ವಿತರಕ. ಭಾರಿ ಬಜೆಟ್‌ನ ಸಿನಿಮಾಗಳನ್ನು ನಿರ್ಮಾಣ ಮಾಡುವಲ್ಲಿ ಎತ್ತಿದ ಕೈಯ್ಯಾಗಿರುವ ದಿಲ್ ರಾಜು, ಬಿಗ್ ಬಜೆಟ್ ಸಿನಿಮಾಗಳ ವಿತರಣೆಯಲ್ಲಿಯೂ ಟಾಪ್ ಎನಿಸಿಕೊಂಡಿದ್ದಾರೆ.
52 ವರ್ಷದ ದಿಲ್ ರಾಜುಗೆ ಮದುವೆಯಾಗಿರುವ ಮಗಳಿದ್ದಾಳೆ. ಆ ಮಗಳಿಗೆ ಮಗನೊಬ್ಬನಿದ್ದಾನೆ. ಆದರೂ ಸಹ ಇತ್ತೀಚೆ ಎರಡು ವರ್ಷದ ಹಿಂದೆ ದಿಲ್ ರಾಜು ಯುವತಿಯೊಬ್ಬಾಕೆಯೊಟ್ಟಿಗೆ ವಿವಾಹವಾಗಿದ್ದಾರೆ!
ಎರಡನೇ ವಿವಾಹವಾದಾಗ ದಿಲ್ ರಾಜುಗೆ ಐವತ್ತು ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೂ ಕಡಿಮೆ ವಯಸ್ಸಿನ ಯುವತಿಯನ್ನು ದಿಲ್ ರಾಜು ಮದುವೆಯಾದ ಬಗ್ಗೆ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದರು. ಆದರೆ ದಿಲ್ ರಾಜು ಮಗಳು ಸೇರಿದಂತೆ ಅವರ ಕುಟುಂಬ ಈ ಮದುವೆಯನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾಗಿ ಹೇಳಿಕೊಂಡಿತ್ತು.
ಇದೀಗ ಮದುವೆಯಾಗಿ ಎರಡು ವರ್ಷಗಳ ಬಳಿಕ ದಿಲ್ ರಾಜು, ತಮ್ಮ ಎರಡನೇ ಮದುವೆಗೆ ಕಾರಣ, ಹಾಗೂ ಪತ್ನಿಯೊಟ್ಟಿಗೆ ಪ್ರೇಮ ಹುಟ್ಟಿದ್ದು ಹೇಗೆ ಎಂದು ತಮ್ಮ ಲವ್ ಸ್ಟೋರಿ ಹಂಚಿಕೊಂಡಿದ್ದಾರೆ.
ಸಂಕ್ರಾಂತಿ ಸಂದರ್ಭ ಮಾಡಲಾದ ವಿಶೇಷ ಸಂದರ್ಶನದಲ್ಲಿ ಭಾಗವಹಿಸಿದ್ದ ದಿಲ್ ರಾಜು ಹಾಗೂ ಪತ್ನಿ ತೇಜಸ್ವಿನಿ ತಮ್ಮ ಪ್ರೀತಿ, ಮದುವೆ, ಕುಟುಂಬ, ಇಷ್ಟಗಳು, ಹೊಂದಾಣಿಕೆ ವಿವಿಧ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಎರಡನೇ ಪತ್ನಿಯೊಟ್ಟಿಗಿನ ಲವ್ ಸ್ಟೋರಿ ಹಂಚಿಕೊಂಡ ದಿಲ್ ರಾಜು
ತೇಜಸ್ವಿಯನ್ನು ಮೊದಲು ನೋಡಿದ್ದು, ಪ್ರೀತಿ ಹುಟ್ಟಿದ್ದು ಹೇಗೆ ಎಂಬ ಬಗ್ಗೆ ಮಾತನಾಡಿರುವ ದಿಲ್ ರಾಜು, ''ನಾನು ಯಾವಾಗಲೂ ಒಂದು ಏರ್‌ಲೈನ್‌ನಲ್ಲಿ ಪ್ರಯಾಣ ಮಾಡುತ್ತಿದ್ದೆ. ಅದೇ ಏರ್‌ಲೈನ್‌ನಲ್ಲಿ ತೇಜಸ್ವಿನಿ ಹೋಸ್ಟೆಸ್ ಆಗಿದ್ದರು. ಆಕೆ ನನಗೆ ಇಷ್ಟವಾದರು. ಹಾಗೆಯೇ ಅವರೊಡನೆ ಮಾತನಾಡಲು ಆರಂಭಿಸಿದೆ. ಸುಮಾರು ಒಂದು ವರ್ಷಗಳ ಕಾಲ ಅವರನ್ನು ಗಮನಿಸಿದ ಬಳಿಕವೇ ಮದುವೆ ಮಾಡಿಕೊಳ್ಳುವಂತೆ ಕೇಳಿದೆ'' ಎಂದಿದ್ದಾರೆ ದಿಲ್ ರಾಜು.

'ಮೊದಲು ಪೆನ್ ಕೇಳಿ ಬಳಿಕ ಫೋನ್ ನಂಬರ್ ಕೇಳಿದರು'
ತೇಜಸ್ವಿನಿ ಸಹ ಈ ಬಗ್ಗೆ ಮಾತನಾಡಿದ್ದು, ''ದಿಲ್ ರಾಜು ಅವರು ಆಗಾಗ್ಗೆ ನಾನು ಕೆಲಸ ಮಾಡುತ್ತಿದ್ದ ವಿಮಾನಕ್ಕೆ ಬರುತ್ತಿದ್ದರೂ. ಅದೂ ನನ್ನ ಶಿಫ್ಟ್ ಸಮಯದಲ್ಲಿಯೇ ಅವರು ಹೆಚ್ಚು ಟ್ರಾವೆಲ್ ಮಾಡುತ್ತಿದ್ದರು. ಮೊದಲಿಗೆ ಪೆನ್ ಬೇಕೆಂದು ಕೇಳಿದರು. ಆ ಮೇಲೆ ಒಂದು ದಿನ ಫೋನ್ ನಂಬರ್ ಕೇಳಿದರು. ಆ ನಂತರ ಮದುವೆ ವಿಷಯ ಮಾತನಾಡಿ, ಕುಟುಂಬದವರೊಡನೆ ಚರ್ಚೆ ಮಾಡಿದ ಬಳಿಕ ಮದುವೆ ಆಯಿತು'' ಎಂದಿದ್ದಾರೆ.

ಮೊದಲ ಪತ್ನಿ ಬಗ್ಗೆ ದಿಲ್ ರಾಜು ಮಾತು
ಇದೇ ಸಂದರ್ಶನದಲ್ಲಿ ತಮ್ಮ ಮೊದಲ ಪತ್ನಿಯ ಬಗ್ಗೆಯೂ ದಿಲ್ ರಾಜು ಮಾತನಾಡಿದ್ದು, ನನ್ನ 47ನೇ ವಯಸ್ಸಿನಲ್ಲಿ ಮೊದಲ ಪತ್ನಿಯನ್ನು ಕಳೆದುಕೊಂಡೆ. ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ಪತ್ನಿಯ ಸಾವಿನ ಬಳಿಕ ನಾನು ತೀವ್ರ ಮಾನಸಿಕ ಕ್ಷೋಭೆಗೆ ಒಳಗಾಗಿದ್ದೆ. ಅದಾದ ಎರಡು ವರ್ಷದ ಬಳಿಕ ನನಗೆ ಸಂಗಾತಿ ಬೇಕು ಎನಿಸಿತ್ತು. ಆಗಲೇ ತೇಜಸ್ವಿನಿ ಸಿಕ್ಕರು. ಅವರನ್ನು, ಕುಟುಂಬದವರನ್ನು ಒಪ್ಪಿಸಿ ವಿವಾಹ ಆದೆವು. ನನ್ನ ಮಗಳು ಹಾಗೂ ಇತರೆ ಕುಟುಂಬದವರು ಮದುವೆಯನ್ನು ಒಪ್ಪಿಕೊಂಡರು'' ಎಂದಿದ್ದಾರೆ ದಿಲ್ ರಾಜು.

ದಿಲ್ ರಾಜು-ತೇಜಸ್ವಿನಿಗೆ ಮಗು
ದಿಲ್ ರಾಜು ಹಾಗೂ ತೇಜಸ್ವಿನಿ 2020 ರ ಕೋವಿಡ್ ಸಮಯದಲ್ಲಿ ಸರಳವಾಗಿ ಕೆಲವೇ ಕುಟುಂಬ ಸದಸ್ಯರ ಮುಂದೆ ವಿವಾಹವಾದರು. ಈ ಮದುವೆ ಸುದ್ದಿ ಆಗ ಬಹಳ ವೈರಲ್ ಆಗಿತ್ತು. ದಿಲ್ ರಾಜು ಹಾಗೂ ತೇಜಸ್ವಿನಿಗೆ ಇತ್ತೀಚೆಗಷ್ಟೆ ಮಗು ಆಗಿದೆ. ದಿಲ್ ರಾಜು, ನಿರ್ಮಾಣ ಮಾಡಿರುವ ವಿಜಯ್ ನಟನೆಯ 'ವಾರಿಸು' ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಕೇವಲ ಐದು ದಿನಕ್ಕೆ 150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಹಲವು ಸೂಪರ್ ಸ್ಟಾರ್ ಸಿನಿಮಾಗಳನ್ನು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ, ಮುಂದೆ ಮಾಡಲಿದ್ದಾರೆ.