For Quick Alerts
  ALLOW NOTIFICATIONS  
  For Daily Alerts

  ಎರಡನೇ ಮದುವೆ ಆಗಲು ತಯಾರಿ ನಡೆಸಿದ್ದಾರಾ ತೆಲುಗಿನ ಯಶಸ್ವಿ ನಿರ್ಮಾಪಕ.?

  |

  ತೆಲುಗು ಸಿನಿ ಅಂಗಳದ ಯಶಸ್ವಿ ನಿರ್ಮಾಪಕರ ಪೈಕಿ ದಿಲ್ ರಾಜು ಕೂಡ ಒಬ್ಬರು. 'ಆರ್ಯ', 'ಬೊಮ್ಮರಿಲ್ಲು', 'ಕೊತ್ತ ಬಂಗಾರು ಲೋಕಂ', 'ಜೋಷ್', 'ಬೃಂದಾವನಂ', 'ಮಿಸ್ಟರ್ ಪರ್ಫೆಕ್ಟ್', 'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು' ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಚಿತ್ರಗಳಿಗೆ ಬಂಡವಾಳ ಹಾಕಿದವರು ಇದೇ ದಿಲ್ ರಾಜು.

  ಹದಿನೇಳು ವರ್ಷಗಳಿಂದ ಟಾಲಿವುಡ್ ನಲ್ಲಿ ಸಕ್ರಿಯರಾಗಿರುವ ದಿಲ್ ರಾಜು ಇದೀಗ ವೈಯುಕ್ತಿಕ ವಿಚಾರಕ್ಕೆ ಸುದ್ದಿ ಆಗಿದ್ದಾರೆ. ನಿರ್ಮಾಪಕ ದಿಲ್ ರಾಜು ಎರಡನೇ ಮದುವೆ ಆಗಲು ನಿರ್ಧರಿಸಿದ್ದಾರಂತೆ ಎಂಬ ಗುಸು ಗುಸು ತೆಲುಗು ಸಿನಿ ಅಂಗಳದಲ್ಲಿ ದಟ್ಟವಾಗಿ ಹಬ್ಬಿದೆ.

  ಮೊದಲನೇ ಪತ್ನಿ ನಿಧನ

  ಮೊದಲನೇ ಪತ್ನಿ ನಿಧನ

  ದಿಲ್ ರಾಜು ಪತ್ನಿ ಅನಿತಾ ಮಾರ್ಚ್ 11, 2017 ರಂದು ವಿಧಿವಶರಾದರು. ಹೃದಯಾಘಾತದಿಂದ ಹೈದರಾಬಾದ್ ನಲ್ಲಿ ಅನಿತಾ ತೀರಿಕೊಂಡರು. ಪತ್ನಿ ತೀರಿಕೊಂಡ ಬಳಿಕ ಒಂಟಿಯಾಗಿ ಇರುವ ದಿಲ್ ರಾಜು ಇದೀಗ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರಂತೆ.

  ಅನುಷ್ಕಾ ಮದುವೆ ಸುದ್ದಿ ಬೆನ್ನಲ್ಲೇ ಅಭಿಮಾನಿಗಳಿಂದ ಸರ್ಪ್ರೈಸ್ಅನುಷ್ಕಾ ಮದುವೆ ಸುದ್ದಿ ಬೆನ್ನಲ್ಲೇ ಅಭಿಮಾನಿಗಳಿಂದ ಸರ್ಪ್ರೈಸ್

  ಮಗಳಿಗೆ ಮದುವೆ ಮಾಡಿರುವ ದಿಲ್ ರಾಜು

  ಮಗಳಿಗೆ ಮದುವೆ ಮಾಡಿರುವ ದಿಲ್ ರಾಜು

  ದಿಲ್ ರಾಜು ಮತ್ತು ಅನಿತಾ ದಂಪತಿಗೆ ಒಬ್ಬಳೇ ಮಗಳು. ಪ್ರೀತಿಯ ಮಗಳಿಗೆ ಈಗಾಗಲೇ ಮದುವೆ ಮಾಡಿ ಗಂಡನ ಮನೆಗೆ ದಿಲ್ ರಾಜು ಕಳುಹಿಸಿದ್ದಾರೆ. ಹೀಗಾಗಿ, ಇತ್ತೀಚಿನ ದಿನಗಳಲ್ಲಿ ದಿಲ್ ರಾಜುಗೆ ಒಂಟಿತನ ಹೆಚ್ಚಾಗಿ ಕಾಡುತ್ತಿರುವುದರಿಂದ, ಮತ್ತೊಂದು ಮದುವೆ ಆಗಲು ಕುಟುಂಬ ಸಲಹೆ ನೀಡಿದೆ ಎನ್ನಲಾಗಿದೆ.

  ತೆಲುಗು ನಟ ನಿತಿನ್ ಮದುವೆ ದಿಢೀರ್ ಮುಂದೂಡಿಕೆ.! ಏಕೆ ಹೀಗೆ.?ತೆಲುಗು ನಟ ನಿತಿನ್ ಮದುವೆ ದಿಢೀರ್ ಮುಂದೂಡಿಕೆ.! ಏಕೆ ಹೀಗೆ.?

  30 ವರ್ಷದ ಯುವತಿ ಜೊತೆಗೆ ಮದುವೆ

  30 ವರ್ಷದ ಯುವತಿ ಜೊತೆಗೆ ಮದುವೆ

  49 ವರ್ಷ ವಯಸ್ಸಿನ ದಿಲ್ ರಾಜು, ಇದೀಗ 30 ವರ್ಷದ ಯುವತಿ ಜೊತೆಗೆ ಮದುವೆ ಆಗಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಆ ಯುವತಿಯ ಹೆಸರು ಮತ್ತು ಹಿನ್ನಲೆ ಕುರಿತು ಮಾಹಿತಿ ಲಭ್ಯವಾಗಿಲ್ಲ. ಹಾಗೇ, ಮದುವೆ ಯಾವಾಗ ಎಂಬುದರ ಕುರಿತು ದಿಲ್ ರಾಜು ಕನ್ಫರ್ಮ್ ಮಾಡಿಲ್ಲ.

  ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ದಿಲ್ ರಾಜು

  ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ದಿಲ್ ರಾಜು

  ತೆಲುಗಿನ ಯಶಸ್ವಿ ನಿರ್ದೇಶಕರಾದ ಸುಕುಮಾರ್, ಬೋಯಾಪಾಟಿ ಶ್ರೀನು, ಭಾಸ್ಕರ್, ವಂಶಿ ಪೈಡಿಪಲ್ಲಿ, ಶ್ರೀಕಾಂತ್ ಅಡ್ಡಾಲ, ವಾಸು ವರ್ಮ ಮತ್ತು ವೇಣು ಶ್ರೀರಾಮ್.. ನಿರ್ದೇಶಕರಾಗಿ ಚೊಚ್ಚಲ ಚಿತ್ರವನ್ನು ತೆರೆಗೆ ತಂದಿದ್ದು ಇದೇ ದಿಲ್ ರಾಜು ಬ್ಯಾನರ್ ಮೂಲಕ. ಹಲವು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿರುವ ದಿಲ್ ರಾಜು ಕೈಯಲ್ಲಿ ಇದೀಗ ಮೂರು ಪ್ರಾಜೆಕ್ಟ್ ಗಳಿವೆ.

  English summary
  Tollywood Producer Dil Raju to tie knot with 30 years old lady.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X