Don't Miss!
- News
Peshawar Mosque Blast: ಪೇಶಾವರ ಮಸೀದಿಯಲ್ಲಿ ಆತ್ಮಾಹುತಿ ಬಾಂಬರ್ನ ತುಂಡಾದ ತಲೆ ಪತ್ತೆ!
- Automobiles
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Technology
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅನುಷ್ಕಾ ಶೆಟ್ಟಿಗೆ ಲತಾ ಮಂಗೇಶ್ಕರ್ ಹಾಡಲಿ ಎಂದು ರಾಜಮೌಳಿ ಬಯಸಿದ್ದರು: ಗಾನಕೋಗಿಲೆ ಹಾಡಲಿಲ್ಲ ಏಕೆ?
ಭಾರತ ಸಂಗೀತ ಲೋಕದ ದಂತಕಥೆ ಲತಾ ಮಂಗೇಶ್ಕರ್. ಭಾರತೀಯ ಚಿತ್ರರಂಗಕ್ಕೆ ಲತಾ ಮಂಗೇಶ್ಕರ್ ಹೆಸರೇ ಒಂದು ಬ್ರ್ಯಾಂಡ್. ಅದಕ್ಕೆ ಸಂಗೀತ ಲೋಕ ಇವರನ್ನು 'ಕ್ವೀನ್ ಆಫ್ ಮೆಲೋಡಿ' ಎಂದು ಕರೆದಿದೆ. ಇವರ ಸುಮಧುರ ಕಂಠಕ್ಕೆ ತಮ್ಮನೇ ತಾವು ಮರೆತು ಹೋಗುವ ಅದೆಷ್ಟೋ ಸಂಗೀತ ಪ್ರೇಮಿಗಳಿದ್ದಾರೆ. ಭಾರತ ಸರ್ಕಾರ ಲತಾ ಮಂಗೇಶ್ಕರ್ ಧ್ವನಿಗೆ ಮರುಳಾಗಿ ದೇಶದ ಅತ್ಯುನ್ನತ ಪ್ರಶಸ್ತಿ 'ಭಾರತ ರತ್ನ' ನೀಡಿ ಗೌರವಿಸಿದೆ. ಭಾರತದ ಎಲ್ಲಾ ನಟಿಯರ ಫೇವರಿಟ್ ಲತಾ ಮಂಗೇಶ್ಕರ್.
Recommended Video
ಲತಾ ಮಂಗೇಶ್ಕರ್ ನಮಗೂ ಹಾಡಬೇಕು ಅಂತ ಅದೆಷ್ಟೋ ನಾಯಕಿಯರು ಬೇಡಿಕೊಂಡಿರಬಹುದು. ಅದರೆ, ಎಲ್ಲರಿಗೂ ಅವಕಾಶ ಸಿಕ್ಕಿಲ್ಲ. ಹೊಸ ಫೀಳಿಗೆಯನ್ನು ಹೊರತು ಪಡಿಸಿ ಬಾಲಿವುಡ್ ಬಹುತೇಕ ನಟಿಯರಿಗೆ ಲತಾ ಮಂಗೇಶ್ಕರ್ ಹಾಡಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿಗೂ ಲತಾ ಮಂಗೇಶ್ಕರ್ ಹಾಡಲಿ ಎಂಬುದು ರಾಜಮೌಳಿ ಆಸೆಯಾಗಿತ್ತಂತೆ. ಆದರೆ, ಆ ಆಸೆ ನೆರವೇರಲಿಲ್ಲ.

ಲತಾ ಹಾಡುವುದು ರಾಜಮೌಳಿ ಬಯಕೆಯಾಗಿತ್ತು
'ಬಾಹುಬಲಿ 2' ಸಿನಿಮಾಗೆ ಲತಾ ಮಂಗೇಶ್ಕರ್ ಹಾಡಲಿ ಎಂಬುದು ಎಸ್ ಎಸ್ ರಾಜಮೌಳಿ ಕನಸಾಗಿತ್ತು. ಬಾಹುಬಲಿ ಮೊದಲ ಭಾಗ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಹೀಗಾಗಿ 'ಬಾಹುಬಲಿ 2' ಚಿತ್ರದ ಬಿಡುಗಡೆಗೆ ಭರ್ಜರಿ ತಯಾರಿ ನಡೆಯುತ್ತಿತ್ತು. ಹಿಂದಿಗೂ ಡಬ್ ಆಗಿ ಬಿಡುಗಡೆ ಆಗಬೇಕಿದ್ದರಿಂದ ರಾಜಮೌಳಿ ಹಾಡುಗಳ ಬಗ್ಗೆನೂ ತಲೆಕೆಡಿಸಿಕೊಂಡಿದ್ದರು. ಈ ವೇಳೆ 'ಬಾಹುಬಲಿ 2'ಚಿತ್ರದ ಒಂದು ಹಾಡನ್ನು ಲತಾ ಮಂಗೇಶ್ಕರ್ ಹಾಡುವಂತೆ ಕೇಳಿಕೊಂಡಿದ್ದರು. ಅನುಷ್ಕಾ ಶೆಟ್ಟಿಗೆ ಲತಾ ಮಂಗೇಶ್ಕರ್ ಧ್ವನಿ ನೀಡಿದ್ದರೆ, ಸಿನಿಮಾದ ಹಾಡುಗಳಿಗೆ ಪ್ರಚಾರ ಮಾಡುವುದೇ ಬೇಡ ಎಂಬುದು ರಾಜಮೌಳಿ ಬಯಕೆಯಾಗಿತ್ತು.

ಕೀರವಾಣಿಗೆ ಲತಾ ಮಂಗೇಶ್ಕರ್ ಹಾಡಬೇಕಿತ್ತು
'ಬಾಹುಬಲಿ 2' ಸಿನಿಮಾಗೆ ಎಂ ಎಂ ಕೀರವಾಣಿ ಸಂಗೀತ ನೀಡಿದ್ದರು. ಈ ಸಿನಿಮಾದ ತೆಲುಗು ಹಾಡುಗಳು ಸೂಪರ್ ಹಿಟ್ ಆಗಿತ್ತು. ಹಿಂದಿಯಲ್ಲಿ ಬಾಹುಬಲಿ 2 ಚಿತ್ರದ 'ಸೋಜಾ ಝರಾ' ಹಾಡನ್ನು ಲತಾ ಮಂಗೇಶ್ಕರ್ ಹಾಡಿವಂತೆ ಕೇಳಿಕೊಂಡಿದ್ದರು. ಇದಕ್ಕಾಗಿ ಲತಾ ಮಂಗೇಶ್ಕರ್ ಅವರಿಗೆ ಈ ಹಾಡನ್ನು ಕಳುಹಿಸಿಕೊಟ್ಟಿದ್ದರು ಎನ್ನಲಾಗಿದೆ. ಆದರೆ, ರಾಜಮೌಳಿಯ ಆಸೆ ಈಡೇರಲಿಲ್ಲ. ಲತಾ ಮಂಗೇಶ್ಕರ್ ಹಾಡು ಹಾಡಲು ತಿರಸ್ಕರಿಸಿದ್ದರು.

ಬಾಹುಬಲಿ ಹಾಡು ತಿರಸ್ಕರಿಸಲು ಕಾರಣವೇನು
ಲತಾ ಮಂಗೇಶ್ಕರ್ ಸುಮಾರು 7 ದಶಕಗಳ ಕಾಲ ಹಾಡಿದ್ದಾರೆ. ಸುಮಾರು 36 ಭಾಷೆಯ ಸಿನಿಮಾಗಳಿಗೆ ಸಾವಿರಾರು ಹಾಡುಗಳನ್ನು ಹಾಡಿ ದಾಖಲೆ ಬರೆದಿದ್ದಾರೆ. ಅದೆಷ್ಟು ಸ್ಟಾರ್ ನಾಯಕಿಯರ ಧ್ವನಿಯಾಗಿದ್ದಾರೆ. ಒಂದು ವೇಳೆ ಲತಾ ಮಂಗೇಶ್ಕರ್ ಈ ಹಾಡನ್ನು ಹಾಡಿದ್ದರು. ದಕ್ಷಿಣ ಭಾರತದ ಮತ್ತೊಬ್ಬ ನಟಿಗೆ ಧ್ವನಿ ನೀಡಿದಂತೆ ಆಗುತ್ತಿತ್ತು. ಆದರೆ. ಲತಾ ಮಂಗೇಶ್ಕರ್ ವಯಸ್ಸಿ ಕಾರಣ ನೀಡಿ, ಈ ಹಾಡನ್ನು ತಿರಸ್ಕರಿಸಿದ್ದರು.

ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ
ಲತಾ ಮಂಗೇಶ್ಕರ್ ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. 28 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗುಣಮುಖರಾಗಲಿಲ್ಲ. ಫೆಬ್ರವರಿ 06 ರ ಬೆಳಗ್ಗೆ 8.12ಕ್ಕೆ ಬಹು ಅಂಗಾಂಗ ವೈಫಲ್ಯದಿಂದ ಲತಾ ಮಂಗೇಶ್ಕರ್ ಕೊನೆಯುಸಿರೆಳೆದಿದ್ದರು. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಬಾಲಿವುಡ್‌ನ ಗಣ್ಯರೆಲ್ಲರೂ ಲತಾ ಮಂಗೇಶ್ಕರ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದರು. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.