For Quick Alerts
  ALLOW NOTIFICATIONS  
  For Daily Alerts

  ಖ್ಯಾತ ನಟ ಶ್ರೀಹರಿ ಬಯೋಪಿಕ್‌ಗೆ ಸಿದ್ದತೆ, ನಾಯಕ ನಟ ಯಾರು!

  |

  ತೆಲುಗಿನ ಖ್ಯಾತ ನಟ ಶ್ರೀಹರಿ ಅವರ ಬಯೋಪಿಕ್ ಸುದ್ದಿ ಈಗ ಟಾಲಿವುಡ್‌ನಲ್ಲಿ ಸದ್ದು ಮಾಡ್ತಿದೆ. 49ನೇ ವಯಸ್ಸಿನಲ್ಲಿ ಹಠಾತ್ ಮರಣ ಹೊಂದಿದ್ದ ಸ್ಟಾರ್ ನಟ ಶ್ರೀಹರಿ ತೆಲುಗು ಮಾತ್ರವಲ್ಲ, ಕನ್ನಡ, ತಮಿಳು ಇಂಡಸ್ಟ್ರಿಯಲ್ಲೂ ಚಿರಪರಿಚಿತ.

  ಮೊದಲ ಸಿನಿಮಾದಲ್ಲೇ Superstar Niranjan 6 packs | Filmibeat Kannada

  ಉತ್ತಮ ಸಿನಿಮಾಗಳ ಮೂಲಕ ಜನಮನ ಗೆದ್ದಿದ್ದ ನಟ ಲಿವರ್ ಸಮಸ್ಯೆಯಿಂದ 2013ರಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಶ್ರೀಹರಿ ಸಾವನ್ನಪ್ಪಿ 7 ವರ್ಷ ಕಳೆದಿದೆ. ಈಗ ಶ್ರೀಹರಿ ಅವರ ಜೀವನ ಕಥೆಯನ್ನು ತೆರೆಮೇಲೆ ತರುವ ಕುರಿತು ಚಿಂತನೆ ನಡೆದಿದೆ. ಅಷ್ಟಕ್ಕೂ, ಇಂತಹ ಪ್ರಯತ್ನಕ್ಕೆ ಕೈಹಾಕಿರುವುದು ಬೇರೆ ಯಾರೂ ಅಲ್ಲ, ಶ್ರೀಹರಿ ಪತ್ನಿ ಶಾಂತಕುಮಾರಿ. ಹಾಗಾದ್ರೆ, ನಾಯಕ ನಟ ಯಾರು? ಮುಂದೆ ಓದಿ...

  ಶ್ರೀಹರಿ ಬಯೋಪಿಕ್‌ಗೆ ಪತ್ನಿ ಚಿಂತನೆ

  ಶ್ರೀಹರಿ ಬಯೋಪಿಕ್‌ಗೆ ಪತ್ನಿ ಚಿಂತನೆ

  ನಟ ಶ್ರೀಹರಿ ಅವರ ಬಯೋಪಿಕ್ ಮಾಡಲು ಖುದ್ದು ಅವರ ಪತ್ನಿ ಶಾಂತ ಕುಮಾರಿ ಅಲಿಯಾಸ್ ಡಿಸ್ಕೋ ಶಾಂತಿ ಚಿಂತನೆ ನಡೆಸಿದ್ದು, ಅದಕ್ಕಾಗಿ ತಯಾರಿ ಸಹ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

  ತೆಲುಗು ನಟ ಶ್ರೀಹರಿ ಅಂತಿಮಯಾತ್ರೆ ಚಿತ್ರಗಳುತೆಲುಗು ನಟ ಶ್ರೀಹರಿ ಅಂತಿಮಯಾತ್ರೆ ಚಿತ್ರಗಳು

  ಶ್ರೀಹರಿ ಮಗನೇ ನಾಯಕ!

  ಶ್ರೀಹರಿ ಮಗನೇ ನಾಯಕ!

  ಸದ್ಯದ ಮಾಹಿತಿ ಪ್ರಕಾರ ಶ್ರೀಹರಿ ಅವರ ಬಯೋಪಿಕ್ ಚಿತ್ರದಲ್ಲಿ ಅವರ ಮಗನೇ ನಾಯಕ ನಟನಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಶ್ರೀಹರಿ ಹಾಗೂ ಡಿಸ್ಕೋ ಶಾಂತಿ ಅವರ ಮಗ ಮೇಘಶ್ಯಾಂ ತೆರೆಮೇಲೆ ರಿಯಲ್ ಸ್ಟಾರ್ ಆಗಿ ಘರ್ಜಿಸುವ ನಿರೀಕ್ಷೆ ಇದೆ.

  ಸ್ಟಂಟ್‌ಮ್ಯಾನ್ ಆಗಿ ವೃತ್ತಿ ಆರಂಭಿಸಿದ್ದ ನಟ

  ಸ್ಟಂಟ್‌ಮ್ಯಾನ್ ಆಗಿ ವೃತ್ತಿ ಆರಂಭಿಸಿದ್ದ ನಟ

  1964ರಲ್ಲಿ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಎಲಮರು ಎಂಬಲ್ಲಿ ಶ್ರೀಹರಿ ಜನಿಸಿದರು. ತೆಲುಗು ಚಿತ್ರರಂಗದಲ್ಲಿ ಸ್ಟಂಟ್‌ಮ್ಯಾನ್‌ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು, 1987 ರಲ್ಲಿ 'ಬ್ರಹ್ಮ ನಾಯಡು' ಚಿತ್ರದ ಮೂಲಕ ನಟನೆಯನ್ನು ಶುರು ಮಾಡಿದ್ದರು. ಮಗಧೀರ (2009) ನಲ್ಲಿ ಶೇರ್ ಖಾನ್ ಪಾತ್ರ ಹಾಗೂ ಆಹಾ ನಾ-ಪೆಳ್ಳಾಂಟಾ (1987) ಚಿತ್ರದಲ್ಲಿ ದುರ್ಗಾ ಪಾತ್ರವನ್ನು ಅಭಿಮಾನಿಗಳು ಎಂದಿಗೂ ಮರೆಯಲ್ಲ.

  ಮಗಳನ್ನು ಕಳೆದುಕೊಂಡಿದ್ದ ನಟ

  ಮಗಳನ್ನು ಕಳೆದುಕೊಂಡಿದ್ದ ನಟ

  1991ರಲ್ಲಿ ನಟಿ ಡಿಸ್ಕೋ ಶಾಂತಿ ಅವರನ್ನು ವಿವಾಹವಾದ ನಟ ಶ್ರೀಹರಿಗೆ ಮೂವರು ಮಕ್ಕಳು. ನಾಲ್ಕು ವರ್ಷವಿದ್ದಾಗ ಹೆಣ್ಣು ಮಗ ಮೃತಪಟ್ಟಿತ್ತು. ಇಬ್ಬರು ಗಂಡು ಮಕ್ಕಳು ಇದ್ದಾರೆ. ಮಗಳು ಅಕ್ಷರಾ ಹೆಸರಿನಲ್ಲಿ ಫೌಂಡೇಶನ್ ಸ್ಥಾಪಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಗ್ರಾಮಗಳನ್ನು ದತ್ತ ಪಡೆದು ಅಭಿವೃದ್ದಿಪಡಿಸುವ ಕೆಲಸ ಮಾಡುತ್ತಿದ್ದರು.

  ಕನ್ನಡ ಸಿನಿಮಾಗಳಲ್ಲೂ ನಟನೆ!

  ಕನ್ನಡ ಸಿನಿಮಾಗಳಲ್ಲೂ ನಟನೆ!

  ಮೂಲತಃ ತೆಲುಗು ಆಗಿದ್ದರೂ ಕನ್ನಡಕ್ಕೆ ಶ್ರೀಹರಿ ಚಿರಪರಿಚಿತ. ಓ ಪ್ರೇಮವೇ, ಒಂದಾಗೋಣ ಬಾ, ಕೋ ಕೋ ಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಿಂದಿಯಲ್ಲಿ ಆರ್ ರಾಜ್ ಕುಮಾರ್ ಸಿನಿಮಾದಲ್ಲಿ ಅಭಿನಯಿಸಿದ್ದರು.

  English summary
  Telugu actress Disco Shanti set to make her husband srihari Biopic. might be srihari son Meghamsh playing lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X