ಪ್ರಭಾಸ್ ಸಿನಿಮಾ ಖರೀದಿಸಲು ವಿತರಕರ ಹಿಂದೇಟು: ಕಾರಣವೇನು?
ನಟ ಪ್ರಭಾಸ್ ಭಾರತದ ಬೇಡಿಕೆಯ ನಟರಲ್ಲೊಬ್ಬರು. ಬಾಹುಬಲಿ ಸಿನಿಮಾದ ನಂತರವಂತೂ ಅವರ ಬೇಡಿಕೆ ಹೆಚ್ಚಾಗಿದೆ. ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಪ್ರಭಾಸ್‌ಗೆ ಮಾರುಕಟ್ಟೆ ಇದೆ.
Recommended Video
ಹಾಗಾಗಿಯೇ ಪ್ರಭಾಸ್ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರೆ. ಪ್ರಭಾಸ್ ಇದ್ದರೆ ಸಿನಿಮಾಕ್ಕೆ ಹೂಡಿದ ಬಂಡವಾಳ ದ್ವಿಗುಣವಾಗಿ ಹಿಂಬರುತ್ತದೆಂಬ ನಂಬಿಕೆ ನಿರ್ಮಾಪಕರದ್ದು. ಆದರೆ ಯಾಕೋ ಏನೋ ಪ್ರಭಾಸ್ ಅವರ ಹೊಸ ಸಿನಿಮಾವನ್ನು ಖರೀದಿಸಲು ವಿತರಕರು ಮೀನಾ-ಮೇಷ ಎಣಿಸುತ್ತಿದ್ದಾರೆ. ಇದಕ್ಕೆ ಪ್ರಬಲ ಕಾರಣವೂ ಇದೆ.
ಪ್ರಭಾಸ್, ಪೂಜಾ ಹೆಗ್ಡೆ ನಟಿಸಿರುವ ಹೊಸ ಸಿನಿಮಾ ರಾಧೆ-ಶ್ಯಾಮ್ ಸಿನಿಮಾವನ್ನು ಖರೀದಿಸಲು ವಿತರಕರು ಹಿಂದೇಟು ಹಾಕುತ್ತಿದ್ದಾರಂತೆ. ಮೂರು ಪ್ರಮುಖ ಕಾರಣಗಳು ವಿತರಕರು ಸಿನಿಮಾ ಖರೀದಿಸಲು ಹಿಂದಡಿ ಇಡಲು ಪ್ರೇರೇಪಿಸುತ್ತಿದೆ.

ದೊಡ್ಡ ಮೊತ್ತದ ಹಣ ಕೇಳುತ್ತಿದ್ದಾರೆ
ರಾಧೆ ಶ್ಯಾಮ್ ನಿರ್ಮಾಪಕರು ಕೇಳುತ್ತಿರುವ ದೊಡ್ಡ ಮೊತ್ತದ ಹಣ ವಿತರಕರನ್ನು ಭೀತಿಗೊಳಿಸಿದೆ. ವಿತರಣೆ ಹಕ್ಕಿಗೆ ಭಾರಿ ಮೊತ್ತದ ಹಣಕ್ಕೆ ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ಸ್ ಬೇಡಿಕೆ ಇಟ್ಟಿದೆ. ದೊಡ್ಡ ಮೊತ್ತ ಪಾವತಿಸಲು ವಿತರಕರು ಹಿಂದಡಿ ಇಡುತ್ತಿದ್ದಾರೆ.

ವಿತರಕರ ನೀರಸ ಪ್ರತಿಕ್ರಿಯೆ
ರಾಧೆ-ಶ್ಯಾಮ್ ಸಿನಿಮಾದ ಹಿಂದಿ, ತಮಿಳು, ಮಲಯಾಳಂ ಡಬ್ಬಿಂಗ್ ವಿತರಣೆ ಹಕ್ಕುಗಳಿಗೆ ಬೇಡಿಕೆ ಅಷ್ಟಾಗಿ ಇಲ್ಲದಾಗಿದೆಯಂತೆ. ಸಾಹೋ ಸಿನಿಮಾಕ್ಕೆ ಬಂದ ಋಣಾತ್ಮಕ ವಿಮರ್ಶೆಗಳಿಂದಾಗಿ ರಾಧೆ-ಶ್ಯಾಮ್ ಸಿನಿಮಾ ಕೊಳ್ಳಲು ವಿತರಕರು ಹಿಂದಡಿ ಇಡುತ್ತಿದ್ದಾರೆ.


Click it and Unblock the Notifications











