For Quick Alerts
  ALLOW NOTIFICATIONS  
  For Daily Alerts

  ವಿಜಯ್ ದೇವರಕೊಂಡರ BMW ಕಾರ್ ನಂಬರ್ ವಿಶೇಷತೆ ಏನು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

  |

  ದಕ್ಷಿಣ ಭಾರತದ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಸದ್ಯ ಲೈಗರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಮತ್ತು ಹಿಂದಿಯಲ್ಲಿ ತಯಾರಾಗುತ್ತಿರುವ ಲೈಗರ್ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು, ಚಿತ್ರದ ಬಗ್ಗೆ ಭಾರಿ ಕುತೂಹಲ ಮೂಡಿದೆ.

  ವಿಜಯ್ ದೇವರಕೊಂಡ ಸಿನಿಮಾ ಮಾತ್ರವಲ್ಲ ತನ್ನ ಸ್ಟೈಲಿಶ್ ಲುಕ್ ಮೂಲಕವೂ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಸದಾ ಸುದ್ದಿಯಲ್ಲಿರುವ ನಟ ವಿಜಯ್ ದೇವರಕೊಂಡ ಅವರ ಬಿಎಂಡಬ್ಲ್ಯೂ ಕಾರ್ ನಂಬರ್ ಕೂಡ ಅಷ್ಟೇ ವಿಶೇಷವಾಗಿದೆ. ವಿಜಯ್ ದೇವರಕೊಂಡ ಬಳಿ ಅನೇಕ ಐಷಾರಾಮಿ ಕಾರುಗಳಿವೆ. ಅದರಲ್ಲಿ ಬಿಎಂಡಬ್ಲ್ಯೂ 5 ಸೆಡಾನ್ ಕೂಡ ಒಂದು. ಮುಂದೆ ಓದಿ...

  ದೇವರಕೊಂಡ ಕಾರ್ ನಂಬರ್ ನಲ್ಲಿದೆ ವಿಶೇಷತೆ

  ದೇವರಕೊಂಡ ಕಾರ್ ನಂಬರ್ ನಲ್ಲಿದೆ ವಿಶೇಷತೆ

  ಫ್ಯಾನ್ಸಿ ನಂಬರ್ ಹೊಂದಿರುವ ದೇವರಕೊಂಡ ಅವರ ಬಿಎಂಡಬ್ಲ್ಯೂ 5 ಸೆಡಾನ್ ಕಾರ್ ನಂಬರ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಂದಹಾಗೆ ವಿಜಯ್ ದೇವರಕೊಂಡ ಕಾರ್ ನಂಬರ್ 1116. ಈ ನಂಬರ್ ನ ಮೊತ್ತವು ಒಟ್ಟು 9 ಆಗುತ್ತೆ. 9 ಸಂಖ್ಯೆ ನಟ ವಿಜಯ್ ದೇವರಕೊಂಡ ಅವರಿಗೆ ತುಂಬಾ ವಿಶೇಷ. ಯಾಕೆಂದ್ರೆ ಮೇ 9 ದೇವರಕೊಂಡ ಹುಟ್ಟಿದ ದಿನ. ಅವರ ಕಾರ್ ನಂಬರ್ ಕೂಡ 9.

  60 ಲಕ್ಷ ರೂ. ಬೆಲೆಯ ಕಾರು

  60 ಲಕ್ಷ ರೂ. ಬೆಲೆಯ ಕಾರು

  ಅಂದಹಾಗೆ ಬಿಎಂಡಬ್ಲ್ಯೂ 5 ಸೆಡಾನ್ ಕಾರ್ ವಿಜಯ್ ದೇವರಕೊಂಡ ಬಳಿ ಇರುವ ಅನೇಕ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನ ಬೆಲ ಸುಮಾರು 60 ಲಕ್ಷ ರೂ. ಬಹುತೇಕ ಸೆಲೆಬ್ರಿಟಿಗಳ ನೆಚ್ಚಿನ ಕಾರುಗಳಲ್ಲಿ ಇದು ಕೂಡ ಒಂದು.

  ಹೊಸ ಮನೆ ಖರೀದಿಸಿದ್ದ ದೇವರಕೊಂಡ

  ಹೊಸ ಮನೆ ಖರೀದಿಸಿದ್ದ ದೇವರಕೊಂಡ

  ವಿಜಯ್ ದೇವರಕೊಂಡ ಕಳೆದ ವರ್ಷ ಹೈದರಾಬಾದ್ ನ ಜುಬ್ಲಿ ಹಿಲ್ಸ್ ನಲ್ಲಿ ಐಷಾರಾಮಿ ಮನೆ ನಿರ್ಮಾಣ ಮಾಡಿದ್ದಾರೆ. ಸುಮಾರು 15 ಕೋಟಿ ರೂ. ಬೆಲೆ ಬಾಳುವ ಮನೆ ಇದಾಗಿದೆ ಎನ್ನಲಾಗುತ್ತಿದೆ. ಹೊಸ ಮನೆ ನಿರ್ಮಾಣ ಮಾಡಿದ ಬಗ್ಗೆ ವಿಜಯ್ ದೇವರಕೊಂಡ ತುಂಬಾ ಸಂತೋಷ ಪಟ್ಟಿದ್ದರು.

  ಅರ್ಜುನ್ ರೆಡ್ಡಿಯಿಂದ ಪ್ರಾರಂಭವಾದ ಯಶಸ್ಸು

  ಅರ್ಜುನ್ ರೆಡ್ಡಿಯಿಂದ ಪ್ರಾರಂಭವಾದ ಯಶಸ್ಸು

  ಅರ್ಜುನ್ ರೆಡ್ಡಿ ಸಿನಿಮಾದಿಂದ ಪ್ರಾರಂಭವಾದ ದೇವರಕೊಂಡ ಯಶಸ್ಸು ಈಗಲು ಮುಂದುವರೆದಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ದೇವರಕೊಂಡ ಸದ್ಯ ಲೈಗರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿದ್ದಾರೆ. ಚಿತ್ರದಲ್ಲಿ ವಿಜಯ್ ಗೆ ನಾಯಕಿಯಾಗಿ ಅನನ್ಯಾ ಪಾಂಡೆ ಕಾಣಿಸಿಕೊಂಡಿದ್ದಾರೆ.

  ಪಾಕ್ ನಿರ್ಮಾಪಕರಿಗೆ ವಾರ್ನಿಂಗ್ ಕೊಟ್ಟ ಇಮ್ರಾನ್ ಖಾನ್ | Filmibeat Kannada
  ಭಾರಿ ನಿರೀಕ್ಷೆ ಮೂಡಿಸಿರುವ ಲೈಗರ್

  ಭಾರಿ ನಿರೀಕ್ಷೆ ಮೂಡಿಸಿರುವ ಲೈಗರ್

  ಲೈಗರ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ವಿಜಯ್ ದೇವರಕೊಂಡ ಈ ಸುದ್ದಿಯನ್ನು ತಳ್ಳಿಹಾಕುವ ಮೂಲಕ ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

  English summary
  Do you know Specialization of Actor Vijay Devarakonda's BMW car number.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X