Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜೂ ಎನ್‌ಟಿಆರ್ ತೊಟ್ಟಿರುವ ಗಡಿಯಾರದ ಬೆಲೆ ಎಷ್ಟು ಕೋಟಿ ಗೊತ್ತೆ?
RRR ಸಿನಿಮಾ ಬಳಿಕ ಜೂ ಎನ್‌ಟಿಆರ್ ಜನಪ್ರಿಯತೆ ಹಾಲಿವುಡ್ ಅನ್ನು ತಲುಪಿದೆ. ಮಾರ್ವೆಲ್ ಕಡೆಯಿಂದಲೂ ಎನ್‌ಟಿಆರ್‌ಗೆ ಆಫರ್ ಬರುವ ಸಾಧ್ಯತೆ ಇದೆ ಎಂದು ಹಾಲಿವುಡ್ ವರದಿಗಾರರೇ ಹೇಳಿದ್ದಾರೆ.
'RRR' ಬಿಡುಗಡೆಗೆ ಮುನ್ನವೂ ಸಹ ಜೂ ಎನ್‌ಟಿಆರ್ ದಕ್ಷಿಣ ಭಾರತದ ಬ್ಯುಸಿ ನಟರಲ್ಲೊಬ್ಬರು. ದುಬಾರಿ ಸಂಭಾವನೆ ಪಡೆವ ಜೊತೆಗೆ ಹಲವು ಬ್ಯುಸಿನೆಸ್‌ಗಳಲ್ಲಿ ಬಂಡವಾಳ ಹೂಡಿರುವ ಉದ್ಯಮಿ ಸಹ ಹೌದು.
ಸಂಭಾವನೆ ಪಡೆವುದಷ್ಟೆ ಅಲ್ಲದೆ ಅದನ್ನು ಅಷ್ಟೆ ಚೆನ್ನಾಗಿ ಖರ್ಚು ಸಹ ಮಾಡುತ್ತಾರೆ ಜೂ ಎನ್‌ಟಿಆರ್. ಅವರ ಐಶಾರಾಮಿ ಮನೆ, ಅವರು ತೊಡುವ ಡಿಸೈನರ್ ಬಟ್ಟೆಗಳು, ಅವರ ಬಳಿ ಇರುವ ಐಶಾರಾಮಿ ಕಾರುಗಳ ಸಂಗ್ರಹವನ್ನು ಗಮನಿಸಿದವರಿಗೆ ಜೂ ಎನ್‌ಟಿಆರ್ ಲಿವಿಂಗ್ ಲೈಫ್ ಇನ್ ಕಿಂಗ್ ಸೈಜ್ ಎನ್ನಿಸದೇ ಇರದು.
ಜೂ ಎನ್‌ಟಿಆರ್ ಅವರ ದುಬಾರಿ ಕಾರು, ಬಂಗ್ಲೆಗಳು ಈಗಾಗಲೇ ಗಮನ ಸೆಳೆದಿದ್ದವು. ಇದೀಗ ಜೂ ಎನ್‌ಟಿಆರ್ ಧರಿಸಿರುವ ವಾಚು ಫ್ಯಾಷನ್ ಪ್ರಿಯರ ಹಾಗೂ ಅಭಿಮಾನಿಗಳ ಗಮನ ಸೆಳೆದಿದೆ. ಇದೇ ವರದಿಯ ಚಿತ್ರದಲ್ಲಿ ಜೂ ಎನ್‌ಟಿಆರ್ ಧರಿಸಿರುವ ವಾಚಿನ ಬೆಲೆ ಬರೋಬ್ಬರಿ 8 ಕೋಟಿ ರು! ಒಬ್ಬ ಮಧ್ಯಮವರ್ಗದ ವ್ಯಕ್ತಿಯ ಎರಡು ಮೂರು ತಲೆಮಾರುಗಳನ್ನು ಸೆಟಲ್ ಮಾಡಬಹುದಾದಷ್ಟು ದೊಡ್ಡ ಮೊತ್ತದ ಹಣವನ್ನು ಕೇವಲ ಒಂದು ಸಣ್ಣ ಕೈಗಡಿಯಾರಕ್ಕೆ ತೆತ್ತಿದ್ದಾರೆ ಜೂ ಎನ್‌ಟಿಆರ್.

ವಾಚ್‌ನ ವಿಶೇಷತೆ ಏನು?
ಚಿತ್ರದಲ್ಲಿ ಜೂ ಎನ್‌ಟಿಆರ್ ಕಟ್ಟಿಕೊಂಡಿರುವುದು ಸಾಮಾನ್ಯ ವಾಚ್ ಅನ್ನಲ್ಲ. ಈ ವಾಚ್ ಬಹಳ ವಿಶೇಷವಾದುದು. ವಾಚ್‌ನ ಸಂಸ್ಥೆಯ ಪ್ರಕಾರ ಈ ರೀತಿಯ ಕೇವಲ 109 ವಾಚ್‌ಗಳನ್ನಷ್ಟು ಈ ವರೆಗೆ ತಯಾರಿಸಲಾಗಿದೆ. ಜೂ ಎನ್‌ಟಿಆರ್ ಧರಿಸಿರುವುದು ಹ್ಯೂಟೆಲ್ ಲಕ್ಷುರಿ ವಾಚ್ ಸರಣಿಯ ಒಂದು ವಿಶೇಷ ವಾಚನ್ನು. ಇದೊಂದೆ ಅಲ್ಲದೆ ಇನ್ನೂ ಕೆಲವು ಇದೇ ಬ್ರ್ಯಾಂಡ್‌ನ ಲಕ್ಷುರಿ ವಾಚ್‌ಗಳು ಜೂ ಎನ್‌ಟಿಆರ್ ಬಳಿ ಇವೆ. ಈ ವಾಚುಗಳ ಬೆಲೆ ಕೋಟಿಗೆ ಕಡಿಮೆ ಯಾವುದೂ ಇಲ್ಲ!

ವಾಚು ಸಂಗ್ರಹದ ಬಗ್ಗೆ ಆಸಕ್ತಿ
ವಾಚಿನ ಬೇಸ್‌ಪ್ಲೇಟ್ ಮತ್ತು ಕೆಲವು ಕೊಂಡಿಗಳನ್ನು ಗ್ರೇಡ್ 5 ಟೈಟಾನಿಯಂನಿಂದ ತಯಾರಿಸಲಾಗಿದೆ. ತುಕ್ಕು ನಿರೋಧಕವಾಗಿದ್ದು ಜೊತೆಗೆ ಕಠಿಣವಾದ ಮಿಶ್ರಲೋಹಗಳನ್ನು ಬಳಸಿ ವಾಚನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಅತ್ಯುತ್ತಮವಾದ ತಂತ್ರಜ್ಞಾನವನ್ನು ಸಹ ಬಳಸಲಾಗಿದೆ ಎಂದು ವಾಚಿನ ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ವಾಚ್ ಬಗ್ಗೆ ಹೇಳಿಕೊಂಡಿದೆ. ಜೂ ಎನ್‌ಟಿಆರ್ ಈ ಹಿಂದೆ ಧರಿಸುತ್ತಿದ್ದ ಆರೆಂಜ್ ಬಣ್ಣದ ಬೆಲ್ಟ್ ಹೊಂದಿದ್ದ ವಾಚ್ ಸಹ ಇದೇ ಬ್ರ್ಯಾಂಡ್‌ನ ವಾಚ್ ಆಗಿತ್ತು. ಆ ವಾಚ್‌ನ ಬೆಲೆ 2.50 ಕೋಟಿ ರುಪಾಯಿಗಳು.

ಐಶಾರಾಮಿ ಕಾರುಗಳ ಸಂಗ್ರಹ ಜೂ ಎನ್‌ಟಿಆರ್ ಬಳಿ ಇದೆ
ಜೂ ಎನ್‌ಟಿಆರ್ ವಾಚುಗಳು ಮಾತ್ರವಲ್ಲ ಕಾರುಗಳ ಬಗ್ಗೆಯೂ ವಿಶೇಷ ಆಸಕ್ತಿಯುಳ್ಳವರು. ಕಾರುಗಳ ಬಗ್ಗೆ ಹಾಗೂ ಅವುಗಳ ಸಂಖ್ಯೆಗಳ ಬಗ್ಗೆಯೂ ವಿಶೇಷ ಕಾಳಜಿಯುಳ್ಳ ಜೂ ಎನ್‌ಟಿಆರ್ ಬಳಿ ಆಸ್ಟನ್ ಮಾರ್ಟಿನ್, ಲ್ಯಾಂಬೊರ್ಗಿನಿ ಉರುಸ್, ಬೆಂಜ್, ಬಿಎಂಡಬ್ಲು, ಆಡಿ ಸೇರಿದಂತೆ ಹಲವು ಐಶಾರಾಮಿ ಕಾರುಗಳಿವೆ. ತಮ್ಮ ಕಾರುಗಳಿಗೆ ಬಹಳ ಫ್ಯಾನ್ಸಿ ಸಂಖ್ಯೆಯನ್ನು ಸಹ ಜೂ ಎನ್‌ಟಿಆರ್ ಹಾಕಿಸುತ್ತಾರೆ. ಪ್ರಸ್ತುತ ಜೂ ಎನ್‌ಟಿಆರ್ ಹೆಚ್ಚಾಗಿ ತಮ್ಮ ಲ್ಯಾಂಬೊರ್ಗಿನಿ ಉರುಸ್ ಕಾರಿನಲ್ಲಿ ಕಾಣಿಸಿಕೊಳ್ಳುತ್ತಾರೆ.

ಐಶಾರಾಮಿ ಮನೆ ಹೊಂದಿರುವ ಎನ್‌ಟಿಆರ್
ಆಂಧ್ರ-ತೆಲಂಗಾಣ ಸೇರಿದಂತೆ ಹಲವು ಕಡೆಗಳಲ್ಲಿ ರಿಯಲ್ ಎಸ್ಟೇಟ್ ಮೇಲೆ ಬಂಡವಾಳ ಹೂಡಿರುವ ಜೂ ಎನ್‌ಟಿಆರ್. ಹೈದರಾಬಾದ್‌ನಲ್ಲಿ ಭವ್ಯವಾದ ಮನೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ವರ್ಷಗಳ ಹಿಂದೆಯೇ ಈ ಬಂಗಲೆಗೆ ಸುಮಾರು 25 ರಿಂದ ಮೂವತ್ತು ಕೋಟಿ ರುಪಾಯಿ ಹಣ ಖರ್ಚು ಮಾಡಿದ್ದರಂತೆ ಜೂ ಎನ್‌ಟಿಆರ್, ಖಾಸಗ ಜಿಮ್, ಸ್ವಿಮ್ಮಿಂಗ್ ಫೂಲ್, ಮಿನಿ ಥಿಯೇಟರ್ ಇನ್ನೂ ಹಲವು ಐಶಾರಾಮಿ ಸೌಲಭ್ಯಗಳನ್ನು ಈ ಮನೆ ಒಳಗೊಂಡಿದೆ.