Just In
Don't Miss!
- Finance
ಫಾಸ್ಟ್ಟ್ಯಾಗ್ ಟೋಲ್ ಕಲೆಕ್ಷನ್: ಒಂದು ದಿನಕ್ಕೆ 104 ಕೋಟಿ ರೂಪಾಯಿ
- Automobiles
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬಗ್ಗೆ ಸುಳಿವು ನೀಡಿದ ಪೆಟ್ರೋಲಿಯಂ ಸಚಿವ
- Lifestyle
ಮಾರ್ಚ್ ತಿಂಗಳಲ್ಲಿ ವಿವಾಹವಾಗಲು ಇಲ್ಲಿದೆ ಶುಭದಿನಾಂಕಗಳು
- News
ರೈತರ ಕಲ್ಯಾಣಕ್ಕಾಗಿ ಅರ್ಪಿಸಿಕೊಂಡವರು: ಜನ್ಮದಿನದಂದು ಯಡಿಯೂರಪ್ಪಗೆ ಮೋದಿ ಶುಭಾಶಯ
- Sports
ಮೊಟೆರಾ ಪಿಚ್ ಬಗ್ಗೆ ವಿರಾಟ್ ಕೊಹ್ಲಿ ಹೇಳಿಕೆಗೆ ಅಲಾಸ್ಟೇರ್ ಕುಕ್ ಕಿಡಿ
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆ ಆದ ಎರಡೇ ದಿನಕ್ಕೆ ತೆಲುಗಿಗೆ ರೀಮೇಕ್ ಆಗಲು ಸಜ್ಜಾದ 'ದೃಶ್ಯಂ 2'
ಏಳು ವರ್ಷದ ಹಿಂದೆ ಬಿಡುಗಡೆ ಆಗಿದ್ದ ಮೋಹನ್‌ಲಾಲ್ ನಟಿಸಿ, ಜೀತು ಜೋಸೆಫ್ ನಿರ್ದೇಶಿಸಿದ್ದ ಮಲಯಾಳಂ ನ 'ದೃಶ್ಯಂ' ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು. ಅದರಲ್ಲಿ ಮುಖ್ಯವಾದುದು, ಅತಿ ಹೆಚ್ಚು ಭಾಷೆಗೆ ರೀಮೇಕ್ ಆದ ಭಾರತದ ಸಿನಿಮಾ ಎಂಬ ಖ್ಯಾತಿ ಗಳಿಸಿಕೊಂಡಿತು 'ದೃಶ್ಯಂ'
ಇದೀಗ 'ದೃಶ್ಯಂ2' ಸಿನಿಮಾ ಬಿಡುಗಡೆ ಆಗಿದ್ದು, ಬಿಡುಗಡೆ ಆದ ಎರಡೇ ದಿನಕ್ಕೆ ರೀಮೇಕ್ ಗೊಳ್ಳಲು ಸಕಲ ಸಜ್ಜಾಗಿದೆ. 'ದೃಶ್ಯಂ' ಸಿನಿಮಾವನ್ನು ಅದೇ ಹೆಸರಲ್ಲಿ ತೆಲುಗಿಗೆ ರೀಮೇಕ್ ಮಾಡಲಾಗಿತ್ತು, ಅದರಲ್ಲಿ ವೆಂಕಟೇಶ್ ನಟಿಸಿದ್ದರು, ಈಗ ಮತ್ತೆ 'ದೃಶ್ಯಂ 2' ರೀಮೇಕ್ ನಲ್ಲಿಯೂ ಅವರೇ ನಟಿಸುತ್ತಿದ್ದಾರೆ.
ಕಳೆದ ಬಾರಿ ತೆಲುಗು 'ದೃಶ್ಯಂ' ಅನ್ನು ಶ್ರೀಪ್ರಿಯಾ ನಿರ್ದೇಶಿಸಿದ್ದರು, ಈ ಬಾರಿ ಮೂಲ ಸಿನಿಮಾದ ನಿರ್ದೇಶಕರಾಗಿರುವ ಜೀತು ಜೂಸೆಫ್ ಅವರೇ ತೆಲುಗು ರೀಮೇಕ್ ಅನ್ನು ನಿರ್ದೇಶಿಸಲಿದ್ದಾರೆ.
ಜೀತು ಜೋಸೆಫ್ ಈಗಾಗಲೇ ತೆಲಂಗಾಣದಲ್ಲಿ ಲೊಕೇಶನ್ ಹುಡುಕಾಟ ಆರಂಭಿಸಿದ್ದು, ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ. ಜೀತು ಜೋಸೆಫ್ ಅವರೇ ರೀಮೇಕ್ ನಿರ್ದೇಶನ ಮಾಡುತ್ತಿರುವ ಕಾರಣ ಕತೆಯಲ್ಲಿ ತುಸು ಬದಲಾವಣೆ ಮಾಡುವ ನಿರೀಕ್ಷೆ ಇದೆ.
ಮೊದಲ 'ದೃಶ್ಯಂ' ಸಿನಿಮಾವು ಕನ್ನಡ, ತೆಲುಗು, ತಮಿಳು, ಹಿಂದಿ, ಸಿಂಹಳಿ ಭಾಷೆ, ಚೈನೀಸ್ ಭಾಷೆಗೆ ರೀಮೇಕ್ ಆಗಿತ್ತು. ಎಲ್ಲ ಭಾಷೆಗಳಲ್ಲಿಯೂ ಹಿಟ್ ಸಿನಿಮಾ ಎನಿಸಿಕೊಂಡಿತ್ತು. ಇದೀಗ ದೃಶ್ಯಂ 2 ಸಿನಿಮಾ ಬಿಡುಗಡೆ ಆಗಿದ್ದು, ಅದೂ ಸಹ ಹಿಟ್ ಎನಿಸಿಕೊಂಡಿದೆ, ಆ ಸಿನಿಮಾದ ರೀಮೇಕ್ ಸಹ ಹಲವು ಭಾಷೆಗಳಲ್ಲಿ ಬರುವ ನಿರೀಕ್ಷೆ ಇದೆ.
ದೃಶ್ಯಂ 2 ಮಲಯಾಳಂ ಸಿನಿಮಾ ಅಮೆಜಾನ್ ಪ್ರೈಂ ನಲ್ಲಿ ಫೆಬ್ರವರಿ 19 ರಂದು ಬಿಡುಗಡೆ ಆಗಿದ್ದು, ಸಿನಿಮಾ ಬಗ್ಗೆ ಧನಾತ್ಮಕ ವಿಮರ್ಶೆಗಳು ಕೇಳಿಬಂದಿವೆ. ದೃಶ್ಯಂ 2 ಅನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.