For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಪ್ರಚಂಡ ಕುಳ್ಳ ದ್ವಾರಕೀಶ್ ಹುಟ್ಟುಹಬ್ಬ ಆಚರಣೆ

  |
  <ul id="pagination-digg"><li class="next"><a href="/news/dwarakish-birthday-19th-august-aptamitra-charulatha-067414.html">Next »</a></li></ul>

  ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ ಖ್ಯಾತಿಯ ನಟ, ನಿರ್ಮಾಪಕ ದ್ವಾರಕೀಶ್ ಇಂದು ತಮ್ಮ 70ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 1942 ಆಗಸ್ಟ್ 19 ರಂದು ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಬಂಗ್ಲೆ ಶಾಮ ರಾವ್ ಹಾಗೂ ಜಯಮ್ಮ ದಂಪತಿಗಳಿಗೆ ಜನಿಸಿದ ದ್ವಾರಕಾನಾಥ್, ಕನ್ನಡ ಚಿತ್ರರಂಗದಲ್ಲಿ 'ದ್ವಾರಕೀಶ್' ಎಂಬ ಹೆಸರಿನಿಂದ ಪ್ರಸಿದ್ಧರಾದರು. ನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟ ದ್ವಾರಕೀಶ್, ನಂತರ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಅಚ್ಚರಿ ಹುಟ್ಟಿಸುವಂತೆ ಬೆಳೆದಿದ್ದಾರೆ.

  1963 ರಲ್ಲಿ ಕನ್ನಡ ಚಿತ್ರಗಳಲ್ಲಿ ಬಣ್ಣಹಚ್ಚಲು ಪ್ರಾರಂಭಿಸಿದ ಕುಳ್ಳ ದ್ವಾರಕೀಶ್, ಬಹುತೇಕ ಹಾಸ್ಯ ಪಾತ್ರಗಳಲ್ಲೇ ಹೆಚ್ಚು ನಟಿಸಿ ಹಾಸ್ಯನಟರೆಂದೇ ಪ್ರಸಿದ್ಧರಾದರು. 1969 ರಲ್ಲಿ 'ದ್ವಾರಕಾ ಫಿಲಂಸ್' ಬ್ಯಾನರ್ ಅಡಿಯಲ್ಲಿ ಮೇಯರ್ ಮುತ್ತಣ್ಣ ಚಿತ್ರವನ್ನು ನಿರ್ಮಿಸುವ ಮೂಲಕ ಸ್ವತಂತ್ರ ನಿರ್ಮಾಪಕರಾದರು. ಡಾ ರಾಜ್ ಕುಮಾರ್ ಹಾಗೂ ಭಾರತಿ ಜೋಡಿಯ ಈ ಚಿತ್ರ, ಸೂಪರ್ ಹಿಟ್ ದಾಖಲಿಸಿತ್ತು. ಮುಂದಿನ ಎರಡು ದಶಕಗಳ ಕಾಲ ದ್ವಾರಕೀಶ್ ಯಶಸ್ವಿ ನಿರ್ಮಾಪಕರು ಎನಿಸಿಕೊಂಡಿದ್ದರು.

  ಆದರೆ ನಂತರದ ಕೆಲವು ವರ್ಷಗಳಲ್ಲಿ ಬಂದಿದ್ದ ಅವರ ನಿರ್ಮಾಣದ ಚಿತ್ರಗಳು ಸತತ ಸೋಲು ಕಂಡು ದ್ವಾರ್ಕಿ ಸೋಲಿನ ಸರದಾರ ಎನಿಸಿಬಿಟ್ಟರು. ಆದರೆ ಧೃತಿಗೆಡದ ದ್ವಾರಕೀಶ್, 2004 ರಲ್ಲಿ ವಿಷ್ಣುವರ್ಧನ್-ಸೌಂದರ್ಯಾ ಜೋಡಿಯ 'ಆಪ್ತಮಿತ್ರ' ಚಿತ್ರ ನಿರ್ಮಾಣದ ಮೂಲಕ ಮತ್ತೆ ಯಶಸ್ಸಿನ ಸವಿ ಉಂಡರು. ನಂತರ ದ್ವಾರಕೀಶ್ ಎಂದೂ ತಮ್ಮ ಲೆಕ್ಕಾಚಾರ ತಪ್ಪದೇ ನಿರಂತರವಾಗಿ ಯಶಸ್ಸಿನ ಪಯಣದಲ್ಲಿ ಸಾಗುತ್ತಿದ್ದಾರೆ.

  ಈ ಮಧ್ಯೆ, 1984 ರಲ್ಲಿ 'ನೀ ಬರೆದ ಕಾದಂಬರಿ' ಚಿತ್ರ ನಿರ್ದೇಶಿಸುವ ಮೂಲಕ ಸಿನಿಮಾ ನಿರ್ದೇಶನಕ್ಕೂ ಕೈಹಾಕಿದ ಕುಳ್ಳ ದ್ವಾರಕೀಶ್, ಅಲ್ಲಿಯೂ ಯಶಸ್ಸು ಕಂಡವರು. 'ನೀ ಬರೆದ ಕಾದಂಬರಿ' ಯಶಸ್ಸಾದ ನಂತರ 'ಡಾನ್ಸ್ ರಾಜಾ ಡಾನ್ಸ್', 'ಶ್ರುತಿ', 'ಶ್ರುತಿ ಹಾಕಿದ ಹೆಜ್ಜೆ', 'ರಾಯರುಬಂದರು ಮಾವನ ಮನೆಗೆ' ಹಾಗೂ 'ಕಿಲಾಡಿಗಳು' ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಚಿತ್ರರಂಗದ ಬಹಳಷ್ಟು ವಿಭಾಗಗಳಲ್ಲಿ ಕೆಲಸ ಮಾಡುವ ಮೂಲಕ ಚಿತ್ರರಂಗಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರು.ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/dwarakish-birthday-19th-august-aptamitra-charulatha-067414.html">Next »</a></li></ul>
  English summary
  Actor, Producer and Director Dwarakish is Celebrating his 70th Birthday today on 19th August 2012. Dwaralish produced 'Charulatha' Movie to releases on 6th September 2012 in Kannada, Tamil and Telugu languages at a time. Here is 'Oneindia wishes' to Dwarakish. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X