For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್‌ಗೆ ವಿಲನ್ ಆದ ಫಹಾದ್ ಫಾಸಿಲ್‌ಗೆ ಭಾರಿ ಮೊತ್ತದ ಸಂಭಾವನೆ

  |

  ದಕ್ಷಿಣ ಭಾರತದಲ್ಲಿ ತೆಲುಗು ಚಿತ್ರರಂಗ ಅತ್ಯಂತ ಶ್ರೀಮಂತ ಸಿನಿಮಾ ಉದ್ಯಮ ಎಂದು ಹೇಳಲಾಗುತ್ತದೆ. ತಮಿಳಿಗಿಂತಲೂ ಹೆಚ್ಚು ಸಿನಿಮಾಗಳು ತೆಲುಗಿನಲ್ಲಿ ನಿರ್ಮಾಣವಾಗುವ ಜೊತೆಗೆ ಹಿಟ್ ಸಹ ಆಗುತ್ತವೆ.

  ತೆಲುಗಿನಲ್ಲಿ ನಟ-ನಟಿಯರಿಗೆ ಸಂಭಾವನೆ ಸಹ ಹೆಚ್ಚು. ದಕ್ಷಿಣ ಭಾರತದ ಇತರ ಸಿನಿಮಾ ರಂಗದ ನಟ-ನಟಿಯರು ತೆಲುಗು ಚಿತ್ರರಂಗದಿಂದ ಬುಲಾವ್ ಬಂದ ಕೂಡಲೇ ಓಡಿ ಹೋಗುವುದು ಇದೇ ಕಾರಣಕ್ಕೆ. ದಕ್ಷಿಣದ ಇತರೆ ಚಿತ್ರರಂಗಗಳಿಗೆ ಹೋಲಿಸಿದರೆ ತೆಲುಗಿನಲ್ಲಿ ಹೆಚ್ಚು ಸಂಭಾವನೆ ಕೊಡಲಾಗುತ್ತದೆ.

  ಅಲ್ಲು ಅರ್ಜುನ್ ವಿರುದ್ಧ ತೊಡೆ ತಟ್ಟಲು ಸ್ಟಾರ್ ನಟನನ್ನು ಕರೆತಂದ ಸುಕುಮಾರ್ಅಲ್ಲು ಅರ್ಜುನ್ ವಿರುದ್ಧ ತೊಡೆ ತಟ್ಟಲು ಸ್ಟಾರ್ ನಟನನ್ನು ಕರೆತಂದ ಸುಕುಮಾರ್

  ಇದೀಗ ಮಲಯಾಳಂ ಸಿನಿಮಾರಂಗದ ಪ್ರತಿಭಾವಂತ ನಟ ಫಹಾದ್ ಫಾಸಿಲ್, ತೆಲುಗಿನ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಸಿನಿಮಾದಲ್ಲಿ ಖಳನ ಪಾತ್ರ ನಿರ್ವಹಿಸಲು ಫಹಾದ್ ಭಾರಿ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ.

  ಭಾರಿ ಮೊತ್ತದ ಸಂಭಾವನೆ ಪಡೆಯುತ್ತಿರುವ ಫಹಾದ್ ಫಾಸಿಲ್

  ಭಾರಿ ಮೊತ್ತದ ಸಂಭಾವನೆ ಪಡೆಯುತ್ತಿರುವ ಫಹಾದ್ ಫಾಸಿಲ್

  ಫಹಾದ್ ಫಾಸಿಲ್ ಅವರು 'ಪುಷ್ಪ' ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಫಹಾದ್ ಫಾಸಿಲ್ ಪ್ರತಿಭೆಗೆ ಈ ಮೊತ್ತ ಕಡಿಮೆಯೇ ಆದರೂ ಫಹಾದ್ ಫಾಸಿಲ್‌ಗೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಸಿನಿಮಾ ವೃತ್ತಿ ಜೀವನದಲ್ಲಿ ಇದೇ ಮೊದಲು. ಮಲಯಾಳಂನ ಕಡಿಮೆ ಬಜೆಟ್ ಸಿನಿಮಾಗಳಲ್ಲಿ ಫಹಾದ್‌ಗೆ ಇಷ್ಟೊಂದು ಸಂಭಾವನೆ ಸಿಗುತ್ತಿರಲಿಲ್ಲ.

  ಮೈತ್ರಿ ಮೂವೀಸ್‌ನಿಂದ ಸಿನಿಮಾ ನಿರ್ಮಾಣ

  ಮೈತ್ರಿ ಮೂವೀಸ್‌ನಿಂದ ಸಿನಿಮಾ ನಿರ್ಮಾಣ

  ಅಲ್ಲು ಅರ್ಜನ್ ನಟನೆಯ 'ಪುಷ್ಪಾ' ಸಿನಿಮಾವನ್ನು ಪ್ರತಿಷ್ಠಿತ ಮೈತ್ರಿ ಮೂವೀಸ್ ನಿರ್ಮಾಣ ಮಾಡುತ್ತಿದ್ದು, ಸಿನಿಮಾಕ್ಕೆ ಯಾವುದೇ ರೀತಿಯ ಕೊರತೆ ಆಗದಂತೆ ಬಂಡವಾಳ ಸುರಿಯುತ್ತಿದ್ದಾರೆ. ಹಲವು ಪ್ರತಿಭಾವಂತ ಸ್ಟಾರ್ ನಟ-ನಟಿಯರನ್ನೇ ಸಿನಿಮಾಕ್ಕೆ ಆಯ್ಕೆ ಮಾಡಲಾಗಿದೆ.

  ಅಲ್ಲು ಅರ್ಜುನ್ ಕಿಂತ ದುಬಾರಿ ಬೆಲೆಯ ಕ್ಯಾರವಾನ್ ಖರೀದಿಸಿದ ನಟ ಮಹೇಶ್ ಬಾಬುಅಲ್ಲು ಅರ್ಜುನ್ ಕಿಂತ ದುಬಾರಿ ಬೆಲೆಯ ಕ್ಯಾರವಾನ್ ಖರೀದಿಸಿದ ನಟ ಮಹೇಶ್ ಬಾಬು

  ರಕ್ತ ಚಂದನ ಕಳ್ಳಸಾಗಣೆದಾರನ ಕತೆ ಹೊಂದಿರುವ ಸಿನಿಮಾ

  ರಕ್ತ ಚಂದನ ಕಳ್ಳಸಾಗಣೆದಾರನ ಕತೆ ಹೊಂದಿರುವ ಸಿನಿಮಾ

  'ಪುಷ್ಪ' ಸಿನಿಮಾವು ರಕ್ತ ಚಂದನ ಕಳ್ಳಸಾಗಣೆದಾರನ ಕತೆಯನ್ನು ಹೊಂದಿದೆ. ಸಿನಿಮಾದ ಎರಡು ಪೋಸ್ಟರ್ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಭಾರಿ ಕುತೂಹಲ ಕೆರಳಿಸಿದೆ. ಸಿನಿಮಾದ ಚಿತ್ರೀಕರಣವು ಆಂಧ್ರ-ತೆಲಂಗಾಣದ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿದೆ. ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿದಿದೆ.

  Yuvarathna film team lands in trouble!
  ಆಗಸ್ಟ್ 13 ಕ್ಕೆ ಸಿನಿಮಾ ಬಿಡುಗಡೆ

  ಆಗಸ್ಟ್ 13 ಕ್ಕೆ ಸಿನಿಮಾ ಬಿಡುಗಡೆ

  ಸಿನಿಮಾವನ್ನು ಖ್ಯಾತ ನಿರ್ದೇಶಕ ಸುಕುಮಾರ್ ನಿರ್ದೇಶಿಸುತ್ತಿದ್ದಾರೆ. 'ಆರ್ಯಾ', 'ಆರ್ಯಾ2' ಬಳಿಕ ಅಲ್ಲು ಅರ್ಜುನ್ ಜೊತೆಗೆ ಇದು ಸುಕುಮಾರ್ ಅವರ ಮೂರನೇ ಸಿನಿಮಾ. ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿ. ತಮಿಳಿನ ಖ್ಯಾತ ನಟ ಚಿಯಾನ್ ವಿಕ್ರಂ ಸಹ ಸಿನಿಮಾದಲ್ಲಿದ್ದಾರೆ ಎನ್ನಲಾಗಿದೆ. ಸಿನಿಮಾವು ಆಗಸ್ಟ್ 13 ರಂದು ಬಿಡುಗಡೆ ಆಗಲಿದೆ.

  English summary
  Malayalam actor Fahadh Faasil playing villain character in Telugu movie Pushpa opposite Allu Arjun. Fahad receiving huge amount as remuneration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X