For Quick Alerts
  ALLOW NOTIFICATIONS  
  For Daily Alerts

  ಮತ್ತೆ ಕೋಟಿ ಆಫರ್ ತಿರಸ್ಕರಿಸಿದ 'ಪ್ರೇಮಂ' ಸುಂದರಿ: ಕಾರಣ ಇಲ್ಲಿದೆ

  |

  ಸೌತ್ ಸಿನಿ ಇಂಡಸ್ಟ್ರಿಯ ಖ್ಯಾತ ನಟಿ ಸಾಯಿ ಪಲ್ಲವಿ ಅಭಿಮಾನಿಗಳ ಮುಂದೆ ಬರದೆ ತಿಂಗಳುಗಳೆ ಆಗಿದೆ. ಕೊನೆಯದಾಗಿ ಸೂರ್ಯ ಜೊತೆ ಕಾಣಿಸಿಕೊಂಡಿದ್ದ ನಟಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಯಿ ಒಂದು ಕೋಟಿ ಆಫರ್ ಅನ್ನು ರಿಜೆಕ್ಟ್ ಮಾಡಿ ಮತ್ತೆ ಚರ್ಚೆಯಲ್ಲಿದ್ದಾರೆ.

  ಕಡಿಮೆ ಅವಧಿಯಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಸಾಯಿ ಸದ್ಯ ಮಲಯಾಳಂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಸಾಯಿಯ ಕೋಟಿ ಕತೆ ಮತ್ತೆ ಸದ್ದು ಮಾಡುತ್ತಿದೆ. ಹೌದು, ಸಾಯಿ ಪಲ್ಲವಿ ಒಂದು ಕೋಟಿಯ ಜಾಹಿರಾತೊಂದನ್ನು ರಿಜೆಕ್ಟ್ ಮಾಡಿದ್ದಾರಂತೆ.

  2 ಕೋಟಿ ಆಫರ್ ತಿರಸ್ಕರಿಸಿದ ಸಾಯಿ ಪಲ್ಲವಿ.! ಕಾರಣ ಇಲ್ಲಿದೆ2 ಕೋಟಿ ಆಫರ್ ತಿರಸ್ಕರಿಸಿದ ಸಾಯಿ ಪಲ್ಲವಿ.! ಕಾರಣ ಇಲ್ಲಿದೆ

  ಬಟ್ಟೆ ಶಾಪಿಂಗ್ ಮಾಲ್ ಒಂದಕ್ಕೆ ಬ್ರಾಂಡ್ ಅಂಬಾಸಿಡರ್ ಆಗುವಂತೆ ಆಫರ್ ಬಂದಿದೆಯಂತೆ. ಬರೋಬ್ಬರಿ 1 ಕೋಟಿ ಆಫರ್ ನೀಡಲಾಗಿದೆಯಂತೆ. ಆದರೆ ಸಾಯಿ ಪಲ್ಲವಿ ಇದನ್ನು ಮುಲಾಜಿಲ್ಲದೆ ರಿಜೆಕ್ಟ್ ಮಾಡಿದ್ದಾರಂತೆ. ಸಾಯಿ ಪಲ್ಲವಿಗೆ ಇಂತಹ ವಿಚಾರದಲ್ಲಿ ನಂಬಿಕೆ ಇಲ್ಲವಂತೆ ಹಾಗಾಗಿ ಕೋಟಿ ಆಫರ್ ಅನ್ನು ರಿಜೆಕ್ಟ್ ಮಾಡಿ ಮತ್ತೆ ಸುದ್ದಿಯಲ್ಲಿದ್ದಾರೆ.

  ಈ ಹಿಂದೆ ಕೂಡ ಸಾಯಿ 2 ಕೋಟಿ ಆಫರ್ ಅನ್ನು ತಿರಸ್ಕರಿಸಿದ್ದರು. ಫೇರ್ ನೆಸ್ ಕ್ರೀಮ್ ಜಾಹಿರಾತಿಗಾಗಿ 2 ಕೋಟಿ ಆಫರ್ ಮಾಡಲಾಗಿತ್ತು. ಆದರೆ ನ್ಯೂಚುರಲ್ ಬ್ಯೂಟಿ ಕೋಟಿಯನ್ನು ತಿರಸ್ಕರಿಸಿ ಜಾಹಿರಾತಿನಿಂದ ದೂರ ಉಳಿದಿದ್ದರು. ಸಾಯಿಯ ಈ ನಿರ್ಧಾರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಮತ್ತದೆ ನಿರ್ಧಾರ ಕೈಗೊಂಡಿದ್ದಾರೆ.

  ಸಾಯಿ ಪಲ್ಲವಿ ಸದ್ಯ ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆಲ್ಲುವ ಸಾಯಿಯ ಸರಳತೆ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

  English summary
  South Indian famous actress Sai Pallavi recent 1 crore clothing ad for a shopping mall.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X