For Quick Alerts
  ALLOW NOTIFICATIONS  
  For Daily Alerts

  RRR ಚಿತ್ರದ ಹಳ್ಳಿ ಘಾಟು ಹಾಡಿಗೆ ಸಿಗ್ನಲ್‌ನಲ್ಲಿ ಕುಣಿದ ಅಭಿಮಾನಿ, ಹಾಡಿಗೆ ಸಿಗ್ತಿದೆ ಉತ್ತಮ ರೆಸ್ಪಾನ್ಸ್

  |

  ಟಾಲಿವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲಿ RRR ಸಿನಿಮಾ ಕೂಡ ಒಂದು. ಚಿತ್ರ ಸೆಟ್ಟೇರಿದಾಗಿನಿಂದಲೂ ಚಿತ್ರದ ಪ್ರತಿಯೊಂದೂ ಅಪ್‌ಡೇಟ್ಸ್ ಕೂಡ ಬಾರಿ ಸಂಚಲನ ಮೂಡಿಸುತ್ತಿದೆ. ಅದರಲ್ಲೂ ಸಿನಿಮಾವನ್ನು ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಡೈರೆಕ್ಟ್ ಮಾಡುತ್ತಿರುವುದು ಜನರಲ್ಲಿ ಸಿನಿಮಾದ ಬಗ್ಗೆ ಮತ್ತಷ್ಟು ನಿರೀಕ್ಷೆ ಮೂಡಿಸುತ್ತಿದೆ. ಸದ್ಯ ರಿಲೀಸ್‌ಗೆ ಸಜ್ಜಾಗಿರೋ ಈ ಸಿನಿಮಾ ಜನವರಿ 7ಕ್ಕೆ ದೊಡ್ಡಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಇದರ ಬೆನ್ನಲ್ಲೇ ಚಿತ್ರದ ನಾಟು ನಾಟು ಹಾಡು ರಿಲೀಸ್ ಆಗಿ ಸಾಕಷ್ಟು ವೈರಲ್ ಆಗುತ್ತಿದೆ. ಹಾಡಿನ ಲಿರಿಕ್ಸ್ ಜೊತೆಗೆ ಜೂನಿಯರ್ ಎನ್‌ಟಿಆರ್ ರಾಮ್‌ ಚರಣ್ ಸ್ಟೆಪ್ ಯುವ ಜನತೆಗೆ ಕ್ರೇಜ್ ಹುಟ್ಟಿಸಿದೆ.

  ಈ ಹಾಡಿಗೆ ಈಗಾಗಲೇ ಸಾಕಷ್ಟು ಮಂದಿ ಕವರ್ ಸಾಂಗ್‌ಗಳನ್ನು ಕ್ರಿಯೇಟ್ ಮಾಡುತ್ತಿದ್ದು, ರೀಲ್ಸ್, ಮೋಜೊ, ಜೋಶ್ ಸೇರಿದಂತೆ ಸಾಕಷ್ಟು ಕಡೆ ಹಾಡು ವೈರಲ್ ಆಗುತ್ತಿದೆ. ಈ ಹಾಡಿನಲ್ಲಿ ನಾಟು ನಾಟು ಲೈನಿಗೆ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಹಾಕಿರುವ ಸ್ಟೆಪ್ ಕೂಡ ವಿಭಿನ್ನವಾಗಿದ್ದು ಅದರ ರಿಕ್ರೀಯೇಟ್ ಟ್ರೆಂಡ್ ಕೂಡ ಜೋರಾಗಿದೆ. ಸದ್ಯ ಇಲ್ಲೊಬ್ಬ ಅಭಿಮಾನಿ ನಾಟು ನಾಟು ಹಾಡಿದೆ ಸಿಗ್ನಲ್‌ನಲ್ಲಿ ನಿಂತು ಡ್ಯಾನ್ಸ್ ಮಾಡಿದ್ದಾರೆ. ಬೈಕ್‌ನಲ್ಲಿ ಬಂದ ಸಂದರ್ಭದಲ್ಲಿ ಸಿಗ್ನಲ್ ಬೀಳುತ್ತೆ. ಈ ಸಂದರ್ಭದಲ್ಲಿ ಬೈಕ್‌ನಿಂದ ಇಳಿದು ನೇರವಾಗಿ ಮುಂದಕ್ಕೆ ಬರುವ ಈತ ನಾಟು ನಾಟು ಹಾಡಿಗೆ ಕುಣಿದು ಕುಪ್ಪಳಿಸಿದ್ದಾನೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ. ಹೆಲ್ಮೆಟ್ ಹಾಕಿಕೊಂಡೆ ಕುಣಿದಿರೋ ಈತ ಯಾರು ಅಂತ ಮಾತ್ರ ಇನ್ನೂ ತಿಳಿದು ಬಂದಿಲ್ಲ.

  ಕೇವಲ ಈತ ಮಾತ್ರ ಅಲ್ಲ. ಈ ಹಾಡಿಗೆ ಸೆಲೆಬ್ರೆಟಿಗಳು ಕೂಡ ರೀಲ್ಸ್ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಕನ್ನಡ ನಟ ಅನಿರುಧ್ ಹಾಗೂ ಅವರ ಮಕ್ಕಳಾದ ಜ್ಯೇಷ್ಠವರ್ಧನ್ ಮತ್ತು ಶ್ಲೋಕ ಕೂಡ ರೀಲ್ಸ್ ಮಾಡಿದ್ದರು. ಇದು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಹಾಡು ಕನ್ನಡ, ಹಿಂದಿ,ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಅಗಿದೆ. ತೆಲುಗಿನ ಹಾಡು 15 ಮಿಲಿಯನ್ ವೀವ್ಸ್ ಪಡೆದಿದೆ. ಹಾಗೂ ಕನ್ನಡದ ಹಳ್ಳಿ ಘಾಟು 3.7 ಮಿಲಿಯನ್ ವೀವ್ಸ್ ಪಡೆದುಕೊಂಡು ಮುನ್ನುಗ್ತಾ ಇದೆ. ಅಜಾದ್ ವರದರಾಜ್ ಕನ್ನಡ ವರ್ಷನ್‌ಗೆ ಸಾಹಿತ್ಯ ರಚಿಸಿದ್ದು, ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಕನ್ನಡದ ಹಾಡಿಗೆ ದನಿ ನೀಡಿದ್ದಾರೆ. ಹಾಗೇ ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ RRR ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

  RRR ಸಿನಿಮಾ ಕನ್ನಡ, ಹಿಂದಿ,ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ತಯಾರಾಗುತ್ತಿದ್ದು, RRR ಸಿನಿಮಾದಲ್ಲಿ ದೊಡ್ಡ ದೊಡ್ಡ ತಾರಾಬಳಗವೇ ಇದ್ದು, ಜ್ಯೂನಿಯರ್ ಎನ್‌ಟಿಆರ್, ರಾಮ್‌ ಚರಣ್ ತೇಜ, ಅಜಯ್ ದೇವಗನ್, ಸಮುದ್ರಖಣಿ, ಆಲಿಯಾ ಭಟ್‌ರಂತಹ ಸ್ಟಾರ್ ನಟರು ಈ ಸಿನಿಮಾದಲ್ಲಿ ನಟಿಸುತ್ತಿರೋದು ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಈಗಾಗಲೇ ಜ್ಯೂನಿಯರ್ ಎನ್‌ಟಿಆರ್, ರಾಮ್‌ಚರಣ್ ತೇಜ ಪಾತ್ರದ ಲುಕ್ ನೋಡಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಕೊಮರಾಮ್‌ ಭೀಮ್‌ ಪಾತ್ರದಲ್ಲಿ ಎನ್‌ಟಿಆರ್ ಕಾಣಿಸಿಕೊಂಡರೆ, ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್‌ ಚರಣ್ ತೇಜ ಕಾಣಿಸಿಕೊಂಡಿದ್ದಾರೆ

  Fan Dance for RRR naatu naatu songs Traffic Signal Goes Viral

  ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿರುವ 'ಆರ್‌ಆರ್‌ಆರ್‌' ಚಿತ್ರವು ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್‌ ಭಾಷೆಗಳಿಗೆ ಡಬ್ ಆಗಲಿದೆ. ಡಿವಿವಿ ದಾನಯ್ಯ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ನೀಡಿದ್ದಾರೆ. 400 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ, ಬಿಡುಗಡೆಗೂ ಮುನ್ನವೇ 900 ಕೋಟಿ ರೂಪಾಯಿ ಬಿಸಿನೆಸ್ ಮಾಡಿದೆ ಎಂದು ಈ ಹಿಂದೆ ವರದಿಯಾಗಿತ್ತು.

  English summary
  naatu naatu song, fan dance for naatu naatu song at traffic signal, fan dance for naatu naatu song at traffic signal video, Fan danced to the tune of RRR Movie's Natu Natu Veera at traffic signal

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X