For Quick Alerts
  ALLOW NOTIFICATIONS  
  For Daily Alerts

  'RRR' ಸಿನಿಮಾದ Jr.NTR ಟೀಸರ್ ಔಟ್: ಕೋಮರಂ ಭೀಮ್ ಪಾತ್ರ ಹೇಗಿದೆ ನೋಡಿ

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಆರ್ ಆರ್ ಆರ್ ಸಿನಿಮಾ ಕೂಡ ಒಂದು. ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆರ್ ಆರ್ ಆರ್ ಸಿನಿಮಾದಿಂದ ಜೂ.ಎನ್ ಟಿ ಆರ್ ಟೀಸರ್ ರಿಲೀಸ್ ಆಗಿದೆ. ಇಂದು ಚಿತ್ರದ ಟೀಸರ್ ರಿಲೀಸ್ ಮಾಡುವುದಾಗಿ ಸಿನಿಮಾತಂಡ ಅನೌನ್ಸ್ ಮಾಡಿತ್ತು. ಈ ದಿನಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಚಿತ್ರದ ಟೀಸರ್ ರಿಲೀಸ್ ಆಗಿದೆ.

  ಅಂದ್ಹಾಗೆ ಈ ಟೀಸರ್ ಜೂ.ಎನ್ ಟಿ ಆರ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಲಾಕ್ ಡೌನ್ ನಿಂದ ಹುಟ್ಟುಹಬ್ಬಕ್ಕೆ ರಿಲೀಸ್ ಮಾಡಲು ಸಾಧ್ಯವಾಗಿರಲ್ಲ. ಈಗಾಗಲೇ ನಟ ರಾಮ್ ಚರಣ್ ಪಾತ್ರದ ಟೀಸರ್ ರಿಲೀಸ್ ಮಾಡಲಿದೆ. ಇದೀಗ ಮೊದಲ ಬಾರಿಗೆ ಜೂ.ಎನ್ ಟಿ ಆರ್ ಪಾತ್ರವನ್ನು ರಿವೀಲ್ ಮಾಡಲಾಗಿದೆ.

  ಟೀಸರ್ ವಿಷಯವಾಗಿ ಪರಸ್ಪರ ಕಾಲೆಳೆದುಕೊಂಡ ಜೂ.ಎನ್‌ಟಿಆರ್-ರಾಮ್ ಚರಣ್ಟೀಸರ್ ವಿಷಯವಾಗಿ ಪರಸ್ಪರ ಕಾಲೆಳೆದುಕೊಂಡ ಜೂ.ಎನ್‌ಟಿಆರ್-ರಾಮ್ ಚರಣ್

  ಸದ್ಯ ರಿಲೀಸ್ ಆಗಿರುವ ಟೀಸರ್ ಗೆ ಅಭಿಮಾನಿಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಮತ್ತೆ ಮತ್ತೆ ಟೀಸರ್ ನೋಡುತ್ತಿರುವುದಾಗಿ ಅಭಿಮಾನಿಗಳು ಕಾಮೆಂಟ್ಸ್ ಮಾಡುತ್ತಿದ್ದಾರೆ. ಅಂದ್ಹಾಗೆ ರಾಮ್ ಚರಣ್ ಈ ಟೀಸರ್ ಅನ್ನು ಶೇರ್ ಮಾಡಿ, 'ಕೊನೆಗೂ ಪ್ರಬಲ ಭೀಮ್ ಲುಕ್ ರಿಲೀಸ್ ಆಗಿದೆ. ನನ್ನ ಪ್ರೀತಿಯ ಸಹೋದರ ಜೂ.ಎನ್ ಟಿ ಅರ್ ಉತ್ತಮವಾದ ಉಡುಗೊರೆ' ಎಂದು ಬರೆದುಕೊಂಡಿದ್ದಾರೆ.

  ಚಿತ್ರದಲ್ಲಿ ಜೂ.ಎನ್ ಟಿ ಆರ್ ಕೋಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ನಟ ರಾಮ್ ಚರಣ್ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಭಾರಿ ನಿರೀಕ್ಷೆ ಮೂಡಿಸಿರುವ ಆರ್ ಆರ್ ಆರ್ ಸಿನಿಮಾ ಮುಂದಿನ ವರ್ಷ ತೆರೆಗೆ ಬರುತ್ತಿದೆ.

  English summary
  First look teaser of Jr. NTR from RRR movie out now. Jr. NTR playing Komaran Bheem role in this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X