For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ ಗಾಗಿ ಮತ್ತೆ ತೆಲುಗಿಗೆ ಬಂದ ತಮಿಳು ಹಿಟ್ ನಿರ್ದೇಶಕ

  |

  ತಮಿಳಿನಲ್ಲಿ ವಾಸುದೇವ್ ಮೆನನ್ ಸಿನಿಮಾಗಳಿಗೆ ದೊಡ್ಡ ಅಭಿಮಾನಿ ವರ್ಗವೇ ಇದೆ. ನಿಜ ಜೀವನಕ್ಕೆ ಹೆಚ್ಚು ಹತ್ತಿರವಾದ ಕಮರ್ಶಿಯಲ್ ಮಾದರಿಯ ಸಿನಿಮಾಗಳಿಗೆ ಖ್ಯಾತರು ಗೌತಮ್ ವಾಸುದೇವ್ ಮೆನನ್.

  ಈಗಾಗಲೇ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಗೌತಮ್ ವಾಸುದೇವ್ ಮೆನನ್ ಅಲ್ಲು ಅರ್ಜುನ್‌ ಜೊತೆ ಸಿನಿಮಾ ಮಾಡುವ ಉಮೇದಿನಲ್ಲಿದ್ದಾರೆ.

  ಚಿಯಾನ್ ವಿಕ್ರಂ ನಟನೆಯ 'ಧ್ರುವ ನಚ್ಚತ್ತಿರಮ್' ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವ ಗೌತಮ್ ವಾಸುದೇವ್ ಮೆನನ್ ಆ ಸಿನಿಮಾದ ಬಳಿಕ ಅಲ್ಲು ಅರ್ಜುನ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.

  ಅಲ್ಲು ಅರ್ಜುನ್ ಪ್ರಸ್ತುತ 'ಪುಷ್ಪಾ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ವಾಸುದೇವ್ ಮೆನನ್ ಅಲ್ಲು ಅರ್ಜುನ್‌ಗೆ ಕತೆ ಹೇಳಿದ್ದಾರೆ ಎನ್ನಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಸಿನಿಮಾ ಘೋಷಿಸುವ ಸಾಧ್ಯತೆ ಇದೆ. ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಸಿನಿಮಾ ಸೆಟ್ಟೇರಲಿದೆ ಎಂಬ ಸುದ್ದಿಯೂ ಇದೆ.

  ತಮಿಳುನಾಡಿನಲ್ಲಿ ಅಲ್ಲು ಅರ್ಜುನ್‌ಗೆ ಹಲವಾರು ಮಂದಿ ಅಭಿಮಾನಿಗಳಿದ್ದು, ಗೌತಮ್ ಮೆನನ್ ನಿರ್ದೇಶಿಸಲಿರುವ ಸಿನಿಮಾ ಒಟ್ಟಿಗೆ ತೆಲುಗು-ತಮಿಳು ಭಾಷೆಗಳಲ್ಲಿ ತಯಾರಾಗಲಿದೆ. ಗೌತಮ್ ಅವರ ಹಲವು ಸಿನಿಮಾಗಳು ಹೀಗೆ ಒಟ್ಟಿಗೆ ತೆಲುಗು-ತಮಿಳು ಭಾಷೆಗಳಲ್ಲಿ ನಿರ್ಮಾಣಗೊಂಡಿವೆ.

  ದೇವರಾಣೆ ನಾನು ಇದನ್ನೆಲ್ಲ ಮಾಡಿಲ್ಲ ಎಂದ ವಿವಾದಿತ ನಿರ್ಮಾಪಕ | Filmibeat Kannada

  ವರ್ನಂ ಆಯರಂ, ಏ ಮಾಯ ಚೇಸಾವೆ, ಕಾಕ-ಕಾಖ, ಘರ್ಷಣ, ರೆಹನಾ ಹೈ ತೆರೆ ದಿಲ್‌ ಮೇ, ವೇಟ್ಟೆಯಾಡು-ವಿಲೆಯಾಡು, ವಿನ್ನೈತಾಂಡಿ ವರುವಾಯ ಇನ್ನೂ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ಗೌತಮ್ ಮೆನನ್. ಅವರು ನಟನಾಗಿಯು ಇತ್ತೀಚೆಗೆ ಸಾಕಷ್ಟು ಯಶಸ್ಸು ಗಳಿಸಿದ್ದಾರೆ.

  English summary
  Director Gautham Vasudev Menon planning to do movie with Allu Arjun soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X