For Quick Alerts
  ALLOW NOTIFICATIONS  
  For Daily Alerts

  ಕೋಡಿ ಚಿತ್ರದ ರಮ್ಯಾ 'ರೋಲ್' ಗುಟ್ಟು ಬಯಲು!

  |

  ಕನ್ನಡದ ಗೋಲ್ಡನ್ ಗರ್ಲ್ ಹಾಗೂ ಲಕ್ಕಿ ಸ್ಟಾರ್ ರಮ್ಯಾ ಹೊಸ 'ಸಾಹಸ'ವೊಂದನ್ನು ಮಾಡಿದ್ದಾರೆ. ಈಗಾಗಲೇ ರಮ್ಯಾ ಸಿನಿಮಾಗಳಲ್ಲಿ ಸಾಕಷ್ಟು ಪಾತ್ರಗಳನ್ನು ಮಾಡಿರುವ ನಟಿ. ಆದರೆ ಮಾಡದಿರುವ ಪಾತ್ರವೊಂದರಲ್ಲಿ ರಮ್ಯಾ ಇತ್ತೀಚಿಗೆ ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ. ಅದು ಕೋಡಿ ರಾಮಕೃಷ್ಣ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ರಮ್ಯಾ ಮಾಡಿದ್ದಾರೆ ಎನ್ನಲಾದ ಆಕ್ಷನ್ ಪಾತ್ರ.

  ಪುನೀತ್ ರಾಜ್ ಕುಮಾರ್ ನಾಯಕತ್ವದ 'ಅಭಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಸಿನಿಪಯಣ ಆರಂಭಿಸಿದ ರಮ್ಯಾ, ಬಹಳಷ್ಟು ಚಿತ್ರಗಳ ಮೂಲಕ ಹಲವಾರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ರಮ್ಯಾ ಇನ್ನೂ ಆಕ್ಷನ್ ಪಾತ್ರದಲ್ಲಿ ಪ್ರೇಕ್ಷಕರಿಗೆ ದರ್ಶನ ನೀಡಿರಲಿಲ್ಲ. ಈಗ ಅದನ್ನೂ ಮಾಡುವ ಮೂಲಕ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ ನಟಿ ರಮ್ಯಾ.

  ಕೋಡಿ ಚಿತ್ರಗಳೆಂದರೆ ದೇವರು, ದೆವ್ವಗಳ ಸುತ್ತ ಕಥೆ ಇರುವುದು ಸಾಮಾನ್ಯ. ಅವರು ತಮ್ಮ ಚಿತ್ರಗಳಲ್ಲಿ ಮಾಟ-ಮಂತ್ರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಅದರಂತೆ, ಈ ಚಿತ್ರದಲ್ಲೂ ಅದೇ ಕಥೆ ಮುಂದುವರಿಸಿರಬಹುದು ಎಂಬುದು ಎಲ್ಲರ ಅನಿಸಿಕೆ. ಕಾರಣ, ನಿರ್ದೇಶಕ ಕೋಡಿ ರಾಮಕೃಷ್ಣ ಅವರು ಎಲ್ಲೂ ತಮ್ಮ ಚಿತ್ರದ ಕಥೆಯ ಗುಟ್ಟು ರಟ್ಟು ಮಾಡಿಲ್ಲ. ಆದರೂ ತುಂಬಾ ಜನರ ಅಭಿಪ್ರಾಯದಂತೆ ಆ ಚಿತ್ರದಲ್ಲಿ ರಮ್ಯಾ 'ನಾಗಕನ್ಯೆ' ಪಾತ್ರ ಮಾಡುತ್ತಿದ್ದಾರೆ.

  ಸುದ್ದಿಮೂಲಗಳ ಪ್ರಕಾರ ನಾಯಕ ದಿಗಂತ್ ಈ ಚಿತ್ರದಲ್ಲಿ ರಾಕ್ ಸ್ಟಾರ್ ಪಾತ್ರವನ್ನು ಪೋಷಿಸಿದ್ದಾರೆ. ಚಿತ್ರದ ಗುಟ್ಟನ್ನು ಯಾರಿಗೂ ಬಿಟ್ಟುಕೊಡಬೇಡಿ ಎಂಬ ಕೋಡಿ ಕಟ್ಟಾಜ್ಞೆ ಮೇರೆಗೆ ಚಿತ್ರತಂಡದ ಯಾರೂ ಚಿತ್ರದ ಕಥೆಯ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ. ಆದರೆ ರಮ್ಯಾ ಈ ಚಿತ್ರದಲ್ಲಿ 'ಸಾಹಸ' ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದು ಈಗ ಜಗಜ್ಜಾಹೀರಾಗಿದೆ.ರಮ್ಯಾ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

  ಒಟ್ಟಿನಲ್ಲಿ ಇದಕ್ಕೂ ಮೊದಲು ನಾಯಕ ಅಥವಾ ವಿಲನ್ ಕೆನ್ನೆಗೊಂದು ಏಟು ಮಾತ್ರ ಕೊಟ್ಟಿದ್ದ ರಮ್ಯಾ ಇದರಲ್ಲಿ ಯಾವ ರೀತಿ ಆಕ್ಷನ್ ರೋಲ್ ಮಾಡಿರಬಹುದು ಎಂಬ ಪ್ರಶ್ನೆಯೀಗ ರಮ್ಯಾ ಅಭಿಮಾನಿಗಳನ್ನು ಕಾಡುತ್ತಿದೆ. ಇದಕ್ಕೆ ಉತ್ತರ, ಚಿತ್ರದ ಬಿಡುಗಡೆ ನಂತರವೇ ತಿಳಿದರೂ ಅಚ್ಚರಿಯೇನಿಲ್ಲ. ಕಾರಣ, ಕೋಡಿ ರಾಮಕೃಷ್ಣ ಅವರು ಚಿತ್ರದ ಬಗೆಗಿನ ಗುಟ್ಟನ್ನು ಮೆಂಟೇನ್ ಮಾಡುತ್ತಿರುವ ರೀತಿ ಅಷ್ಟೇ! (ಒನ್ ಇಂಡಿಯಾ ಕನ್ನಡ)

  English summary
  Kannada actress, Golden Girl Ramya acted in 'Action Role' in upcoming untitled Kodi Ramakrishna Movie. Ramya and Diganth are in Lead Role in this movie which is in shooting stage. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X