For Quick Alerts
  ALLOW NOTIFICATIONS  
  For Daily Alerts

  "ಮಕ್ಕಳು ಮಾಡಿಕೊಳ್ಳುವುದು ಅಂದ್ರೆ 20 ವರ್ಷಗಳ ಪ್ರಾಜೆಕ್ಟ್": ಉಪಾಸನಾ ಹೇಳಿಕೆ ವೈರಲ್

  |

  ತೆಲುಗು ನಟ ರಾಮ್‌ಚರಣ್ ತೇಜಾ ಹಾಗೂ ಉಪಾಸನಾ ದಂಪತಿ ತಮ್ಮ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಮದುವೆ ಆಗಿ 10 ವರ್ಷಗಳ ನಂತರ ಮನೆಗೆ ಹೊಸ ಅತಿಥಿಯ ಆಗಮನ ನಿರೀಕ್ಷೆಯಲ್ಲಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಉಪಾಸನಾ ಮಡಿಲಲ್ಲಿ ಮುದ್ದಾದ ಮಗು ನಲಿದಾಡಲಿದೆ.

  ಚಿರಂಜೀವಿ ಇತ್ತೀಚೆಗೆ ಟ್ವೀಟ್ ಮಾಡಿ ಸೊಸೆ ಉಪಾಸನಾ ಗರ್ಭಿಣಿ ಆಗಿರುವ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದರು. ಚಿರಂಜೀವಿ ಮತ್ತೆ ತಾತ ಆಗುತ್ತಿದ್ದಾರೆ, ಮೆಗಾ ಫ್ಯಾಮಿಲಿ ವಾರಸ್ದಾರ ಬಂದ ಅಂತ ಅಭಿಮಾನಿಗಳು ಸಂಭ್ರಮಾಚಣೆಯಲ್ಲಿದ್ದಾರೆ. ಹಲವು ದಿನಗಳಿಂದ ಮಕ್ಕಳ ಬಗ್ಗೆ ಉಪಾಸನಾಗೆ ಪ್ರಶ್ನೆಗಳು ಎದುರಾಗುತ್ತಲೇ ಇತ್ತು. ಆಕೆ "ಅದು ನಮ್ಮ ಪರ್ಸನಲ್ ವಿಚಾರ. ಅದರ ಬಗ್ಗೆ ಸಮಯ ಬಂದಾಗ ಮಾತನಾಡುತ್ತೇವೆ" ಎನ್ನುತ್ತಿದ್ದರು. ಇನ್ನು ಇದೇ ವಿಚಾರವನ್ನಿಟ್ಟುಕೊಂಡು ಬೇರೆ ನಟರ ಅಭಿಮಾನಿಗಳು ರಾಮ್‌ಚರಣ್‌ನ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಕೂಡ ಮಾಡುತ್ತಿದ್ದರು.

  10 ವರ್ಷಗಳಿಂದ ಅದೇ ಪ್ರಶ್ನೆ.. ಕೊನೆಗೂ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಚರಣ್-ಉಪಾಸನಾ10 ವರ್ಷಗಳಿಂದ ಅದೇ ಪ್ರಶ್ನೆ.. ಕೊನೆಗೂ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಚರಣ್-ಉಪಾಸನಾ

  ಗುಡ್ ನ್ಯೂಸ್ ಕೊಟ್ಟ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಇನ್ನು ಅಭಿಮಾನಿಗಳು ಜ್ಯೂನಿಯರ್ ಚರಣ್ ಬರ್ತಾನಾ? ಜ್ಯೂನಿಯರ್ ಉಪಾಸನಾ ಬರ್ತಾಳಾ? ಎಂದು ಚರ್ಚೆ ನಡೆಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಮಕ್ಕಳನ್ನು ಮಾಡಿಕೊಳ್ಳುವ ಬಗ್ಗೆ ಉಪಾಸನಾ ನೀಡಿದ್ದ ಹಳೇ ಹೇಳಿಕೆಗಳು ವೈರಲ್ ಆಗುತ್ತಿದೆ.

  ಮಕ್ಕಳು ಅಂದ್ರೆ 20 ವರ್ಷಗಳ ಪ್ರಾಜೆಕ್ಟ್

  ಮಕ್ಕಳು ಅಂದ್ರೆ 20 ವರ್ಷಗಳ ಪ್ರಾಜೆಕ್ಟ್

  "ಮಕ್ಕಳನ್ನು ಮಾಡಿಕೊಳ್ಳುವುದು. ತಾಯಿಯಾಗುವುದು 20 ವರ್ಷಗಳ ಪ್ರಾಜೆಕ್ಟ್. ಪೋಷಕರಾಗಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧರಾಗುವ ಅವಶ್ಯಕತೆ ಇದೆ. ಒಂದು ಜೀವವನ್ನು ಜಗತ್ತಿಗೆ ತರುವುದು ನಮ್ಮ ಮೇಲಿರುವ ದೊಡ್ಡ ಜವಾಬ್ದಾರಿ. ನಮ್ಮ ಮಕ್ಕಳಿಗೆ ಏನು ಬೇಕು? ಹೇಗೆ ಬೆಳಸಬೇಕು ? ಹೀಗೆ ಹಲವು ವಿಷಯಗಳ ಬಗ್ಗೆ ಅರಿವಿರಬೇಕು"

  'ಪುಷ್ಪ- 2' ಚಿತ್ರೀಕರಣ ಆರಂಭ.. ಮೇಕಿಂಗ್ ಸ್ಟಿಲ್ ಲೀಕ್: ಸರ್‌ಪ್ರೈಸ್ ಟೀಸರ್ ರಿಲೀಸ್ ಪ್ಲ್ಯಾನ್'ಪುಷ್ಪ- 2' ಚಿತ್ರೀಕರಣ ಆರಂಭ.. ಮೇಕಿಂಗ್ ಸ್ಟಿಲ್ ಲೀಕ್: ಸರ್‌ಪ್ರೈಸ್ ಟೀಸರ್ ರಿಲೀಸ್ ಪ್ಲ್ಯಾನ್

  5 ವರ್ಷಗಳ ಹಿಂದೆ ಉಪಾಸನಾ ಹೇಳಿಕೆ

  5 ವರ್ಷಗಳ ಹಿಂದೆ ಉಪಾಸನಾ ಹೇಳಿಕೆ

  "ನಾವು ನಾಯಿಗಳನ್ನು, ಕುದುರೆಗಳನ್ನು ಎಷ್ಟೋ ಪ್ರೀತಿಯಿಂದ ನೋಡಿಕೊಳ್ಳುತ್ತೇವೆ. ಅಂತಾದ್ದರಲ್ಲಿ ನಮ್ಮ ಮಗುವನ್ನು ಎಷ್ಟು ಜಾಗ್ರತೆಯಿಂದ ನೋಡಿಕೊಳ್ಳುತ್ತೇವೋ ಊಹಿಸಿ. ಇದು ನಮಗೆ ಬಹಳ ಮುಖ್ಯವಾದದ್ದು. ಮಗುವನ್ನು ಹೆರುವುದು ಅಷ್ಟೇ ಅಲ್ಲ. ಅವರನ್ನು ಒಳ್ಳೆ ರೀತಿಯಲ್ಲಿ ಬೆಳೆಸುವುದು ಬಹಳ ಮುಖ್ಯ. ಈ ವಿಚಾರದಲ್ಲಿ ನಮಗಂತ ಒಂದಷ್ಟು ಪ್ಲ್ಯಾನಿಂಗ್ ಇದೆ" ಎಂದು 2017ರಲ್ಲಿ ಕಾರ್ಯಕ್ರಮವೊಂದರಲ್ಲಿ ಉಪಾಸನಾ ಹೇಳಿದ್ದರು.

  ಶುಭವಾಗಲಿ ಎಂದು ಫ್ಯಾನ್ಸ್ ಕಾಮೆಂಟ್

  ಶುಭವಾಗಲಿ ಎಂದು ಫ್ಯಾನ್ಸ್ ಕಾಮೆಂಟ್

  ಈಗ ರಾಮ್‌ಚರಣ್ ಹಾಗೂ ಉಪಾಸನಾ ದಂಪತಿಯ 20 ವರ್ಷಗಳ ಪ್ರಾಜೆಕ್ಟ್ ಶುರುವಾಗುತ್ತಿದೆ. ಎಲ್ಲದಕ್ಕೂ ಉಪಾಸನಾ ಬ್ರೇಕ್ ಹಾಕಿ ತಾಯಿಯಾಗಿ ಮಗುವಿನ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಚರಣ್ ಕೂಡ ಕ್ಷಣಗಳಿಗಾಗಿ ಕಾಯುತ್ತಿದ್ದಾರೆ. ಶೀಘ್ರದಲ್ಲೇ ಚಿರಂಜೀವಿ ಮೊಮ್ಮಗನ ಜೊತೆ ಆಟ ಆಡುವ ಸಮಯ ಬರ್ತಿದೆ, ಶುಭವಾಗಲಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

  ಅಪೋಲೋ ಆಸ್ಪತ್ರೆ ಸಮೂಹದ ಒಡೆಯ ಅನಿಲ್ ಕಾಮಿನೇನಿ ಮಗಳಾಗಿರುವ ಉಪಾಸನಾ 2012ರಲ್ಲಿ ನಟ ರಾಮ್‌ಚರಣ್‌ನ ಪ್ರೀತಿಸಿ ಮದುವೆ ಆಗಿದ್ದರು. ಲಂಡನ್ ರೀಜೆಂಟ್ಸ್ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿರುವ ಉಪಾಸನಾ ಅಪೋಲೊ ಸಮೂಹದ ಅಪೋಲೊ ಲೈಫ್ ವಿಭಾಗದ ಉಪಾಧ್ಯಕ್ಷೆ ಆಗಿದ್ದಾರೆ.
  ಸಾಕಷ್ಟು ಸಾಮಾಜಿಕ ಕೆಲಸಗಳ ಮೂಲಕವೂ ಗುರ್ತಿಸಿಕೊಂಡಿದ್ದಾರೆ.

  ಚರಣ್ ನಟನೆಯ 'RRR' ಸೂಪರ್ ಹಿಟ್

  ಚರಣ್ ನಟನೆಯ 'RRR' ಸೂಪರ್ ಹಿಟ್

  ಈ ವರ್ಷ 'RRR' ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರಾಮ್‌ಚರಣ್ ತೇಜಾ ಗುರ್ತಿಸಿಕೊಂಡಿದ್ದಾರೆ. ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಚರಣ್ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಸದ್ಯ ಶಂಕರ್ ನಿರ್ದೇಶನದ ಹೊಸ ಚಿತ್ರದಲ್ಲಿ ಮೆಗಾಪವರ್ ಸ್ಟಾರ್ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್‌ನಲ್ಲಿ ಒಂದು ಹಾಡಿನ ಚಿತ್ರೀಕರಣ ಮುಗಿಸಿ ಬಂದಿದೆ ಚಿತ್ರತಂಡ. ಮತ್ತೊಂದು ಕಡೆ 'RRR' ಜಪಾನ್ ಭಾಷೆಗೆ ಡಬ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಾಲಿವುಡ್‌ನ ಪ್ರತಿಷ್ಠಿತ ಪ್ರಶಸ್ತಿಗಳಿಗೆ ರಾಮ್‌ಚರಣ್ ಆಯ್ಕೆ ಆಗುತ್ತಿದ್ದಾರೆ. 'RRR' ಸಿನಿಮಾ ಆಸ್ಕರ್ ರೇಸ್‌ನಲ್ಲಿದೆ.

  English summary
  Having Kids is a 20 Year Old Project: Ramchran Wife Upasana's old statement Goes Viral. Ram Charan and Upasana Konidela expecting their first child, Chiranjeevi announces the news. Know more.
  Wednesday, December 14, 2022, 9:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X