For Quick Alerts
  ALLOW NOTIFICATIONS  
  For Daily Alerts

  ಮೆಗಾಸ್ಟಾರ್ ಚಿರಂಜೀವಿ ಕೆನ್ನೆಗೆ 24 ಬಾರಿ ಹೊಡೆದಿದ್ದರು ಈ ನಟಿ

  |

  ಮೆಗಾಸ್ಟಾರ್ ಚಿರಂಜೀವಿ ಯಾರಿಗೆ ಗೊತ್ತಿಲ್ಲ. ತೆಲುಗು ಸಿನಿಮಾ ರಂಗದ ಸೂಪರ್ ಸ್ಟಾರ್ ಅವರು. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಚಿರಂಜೀವಿ ಒಂದು ಕಾಲದಲ್ಲಿ ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಬಂದವರು.

  ತಮ್ಮ ಕನಸಿನ ಚಿತ್ರಕ್ಕೆ ರಶ್ಮಿಕಾ ಬೇಕು ಅಂದ್ರು ಚಿರಂಜೀವಿ | Chiranjeevi | Rashmika mandanna

  ಚಿರಂಜೀವಿ ಎಂದರೆ ಜೀವವೇ ಬಿಡುವ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಚಿರಂಜೀವಿ ಅವರಿಗೆ ನಟಿಯೊಬ್ಬರು 24 ಬಾರಿ ಕೆನ್ನೆಗೆ ಭಾರಿಸಿದ್ದರು ಎಂದರೆ ನಂಬಲೇ ಬೇಕು.

  ಹೌದು, ಹೊಸದಾಗಿ ಸಿನಿರಂಗಕ್ಕೆ ಬಂದಿದ್ದ ನಟಿ ಒಬ್ಬರು, ತಮ್ಮ ಮೊದಲ ಸಿನಿಮಾದಲ್ಲೇ ಚಿರಂಜೀವಿ ಅವರೊಂದಿಗೆ ನಟಿಸಿದ್ದ ನಟಿಯೊಬ್ಬರು ಚಿರಂಜೀವಿ ಕೆನ್ನೆಗೆ 24 ಬಾರಿ ಭಾರಿಸಿದ್ದರಂತೆ.

  ಹೌದು ಈ ಬಗ್ಗೆ ಸ್ವತಃ ನಟಿಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆ ನಟಿ ಇನ್ಯಾರೂ ಅಲ್ಲ, ಚಿರಂಜೀವಿ ಅವರೊಂದಿಗೆ ಹಲವು ಸಿನಿಮಾಗಳಲ್ಲಿ ನಟಿಸಿ ಚಿರಂಜೀವಿ ಅವರ ಯಶಸ್ವಿ ಜೋಡಿ ಎನಿಸಿಕೊಂಡಿದ್ದ ರಾಧಿಕಾ.

  ಆ ದೃಶ್ಯಕ್ಕೆ 24 ಟೇಕ್ ತೆಗೆದುಕೊಂಡಿದ್ದರಂತೆ ರಾಧಿಕಾ

  ಆ ದೃಶ್ಯಕ್ಕೆ 24 ಟೇಕ್ ತೆಗೆದುಕೊಂಡಿದ್ದರಂತೆ ರಾಧಿಕಾ

  ರಾಧಿಕಾ ಅವರು ನಾಯಕಿಯಾಗಿ ನಟಿಸಿದ್ದ ಮೊದಲ ತೆಲುಗು ಸಿನಿಮಾಕ್ಕೆ ಚಿರಂಜೀವಿ ಅವರೇ ನಾಯಕ. ಚಿರಂಜೀವಿ ಅದಾಗಲೇ ಯಶಸ್ವೀ ನಟ ಎನಿಸಿಕೊಂಡಿದ್ದರು. ದೃಶ್ಯವೊಂದರಲ್ಲಿ ರಾಧಿಕಾ-ಚಿರಂಜೀವಿ ಅವರ ಕೆನ್ನೆಗೆ ಹೊಡೆಯುವ ದೃಶ್ಯವಿತ್ತಂತೆ. ಇದಕ್ಕೆ 24 ಕೇಟ್‌ಗಳನ್ನು ತೆಗೆದುಕೊಂಡಿದ್ದರಂತೆ ಈ ನಟಿ.

  ಬರೋಬ್ಬರಿ 24 ಬಾರಿ ಹೊಡೆದಿದ್ದ ರಾಧಿಕಾ

  ಬರೋಬ್ಬರಿ 24 ಬಾರಿ ಹೊಡೆದಿದ್ದ ರಾಧಿಕಾ

  ಚಿರಂಜೀವಿ ಅವರಿಗೆ ಬರೋಬ್ಬರಿ 24 ಬಾರಿ ರಾಧಿಕಾ ಕೆನ್ನೆಗೆ ಹೊಡೆದಿದ್ದರಂತೆ. ಹೊಡೆತಕ್ಕೆ ಚಿರಂಜೀವಿ ಕೆನ್ನೆ ಕೆಂಪಾಗಿ ಹೋಗಿತ್ತಂತೆ. ಕೇಟ್ ಓಕೆ ಆದ ನಂತರ ರಾಧಿಕಾ ಹೋಗಿ ಚಿರಂಜೀವಿ ಅವರ ಕ್ಷಮೆ ಸಹ ಕೇಳಿದರಂತೆ.

  ತಮಾಷೆಯಾಗಿ ಪ್ರತಿಕ್ರಿಯಿಸಿದ್ದ ಚಿರಂಜೀವಿ

  ತಮಾಷೆಯಾಗಿ ಪ್ರತಿಕ್ರಿಯಿಸಿದ್ದ ಚಿರಂಜೀವಿ

  ಆದರೆ ರಾಧಿಕಾ ಅವರ ಕ್ಷಮಾಪಣೆಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಮೆಗಾಸ್ಟಾರ್ ಚಿರಂಜೀವಿ, 'ನೀವು ನನಗೆ ಚೆನ್ನಾಗಿ ಹೊಡೆದಿರಿ, ವೆರೆ ಗುಡ್' ಎಂದರಂತೆ. ಹೊಸದಾಗಿ ನಟಿಸುತ್ತಿದ್ದ ನಟಿಗೆ ಆತ್ಮವಿಶ್ವಾಸ ತುಂಬುವ ಪ್ರಯತ್ನವನ್ನು ಚಿರಂಜೀವಿ ಅಂದು ಮಾಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ ರಾಧಿಕಾ.

  ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು

  ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು

  ರಾಧಿಕಾ ಮತ್ತು ಚಿರಂಜೀವಿ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದರು. 'ನ್ಯಾಯಂ ಕಾವಾಲಿ, ಮೊಂಡಿ ಗತಂ, ಇದಿ ಪೆಳ್ಳಂಟಾರಾ, ಪುಲಿ ಪೆಬ್ಬುಲಿ, ಕಿರಾಯಿ ರೌಡಿ, ಪಲ್ಲೆಟೂರಿ ಮೊನಗಾಡು, ಅಭಿಲಾಶಾ, ಆರಾಧನಾ ಸೇರಿ ಇನ್ನೂ ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಇದು ಸೂಪರ್ ಹಿಟ್ ಜೋಡಿ ಆಗಿತ್ತು.

  English summary
  Heroine Radhika slapped Megastar Chiranjeevi 24 times while shooting a scene.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X