For Quick Alerts
  ALLOW NOTIFICATIONS  
  For Daily Alerts

  'RRR' ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಹಾಲಿವುಡ್ ಆಕ್ಷನ್ ಡೈರೆಕ್ಟರ್ ಎಂಟ್ರಿ

  |

  ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಆರ್ ಆರ್ ಆರ್ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ಸದ್ಯ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು, ಇಡೀ ಸಿನಿಮಾತಂಡ ಚಿತ್ರೀಕರಣ ಸೆಟ್ ನಲ್ಲಿ ಬೀಡುಬಿಟ್ಟಿದೆ.

  ವಿಶೇಷ ಎಂದರೆ ಆರ್ ಆರ್ ಆರ್ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಹಾಲಿವುಡ್ ನ ಖ್ಯಾತ ಸ್ಟಂಟ್ ಡೈರೆಕ್ಟರ್ ನಿಕ್ ಪೊವೆಲ್ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ನಿಕ್ ಪೊವೆಲ್ ಚಿತ್ರೀಕರಣ ಸೆಟ್ ನಲ್ಲಿರುವ ವಿಡಿಯೋವನ್ನು ಸಿನಿಮಾತಂಡ ಹಂಚಿಕೊಂಡಿದ್ದಾರೆ.

  ಏಪ್ರಿಲ್‌ನಲ್ಲಿ RRR ಹಾಡಿನ ಚಿತ್ರೀಕರಣ ಆರಂಭಿಸಲಿದ್ದಾರೆ ಆಲಿಯಾ ಭಟ್

  ಅಂದಹಾಗೆ ನಿಕ್ ಪೊವೆಲ್ ಈಗಾಗಲೇ ಭಾರತದ ಕೆಲವು ಸಿನಿಮಾಗಳ ಆಕ್ಷನ್ ದೃಶ್ಯಗಳಿದೆ ನಿರ್ದೇಶನ ಮಾಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 2.0 ಮತ್ತು ಬಾಲಿವುಡ್ ನಟಿ ಕಂಗನಾ ನಟನೆಯ ಮಣಿಕರ್ಣಿಕಾ ಹಾಗೂ ಸದ್ಯ ರಿಲೀಸ್ ಗೆ ರೆಡಿಯಾಗಿರುವ ರಾಧೆ ಶ್ಯಾಮ್ ಸಿನಿಮಾಗೂ ನಿಕ್ ಪೊವೆಲ್ ಸ್ಟಂಟ್ ಡೈರೆಕ್ಟ್ ಮಾಡಿದ್ದಾರೆ.

  ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ಗೆ ಆಕ್ಷನ್ ದೃಶ್ಯ ಹೇಳಿಕೊಡಲಿದ್ದಾರೆ. ರಾಜಮೌಳಿ ಜೊತೆ ಆಕ್ಷನ್ ದೃಶ್ಯದ ಬಗ್ಗೆ ಮಾತನಾಡುತ್ತಿರುವ ನಿಕ್ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತಿದೆ. ಆರ್ ಆರ್ ಆರ್ ಸಿನಿಮಾ ತೆಲುಗಿನ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಕತೆಯಾಗಿದೆ.

  ಆರ್ ಆರ್ ಆರ್ ಸಿನಿಮಾ ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ಮುಕ್ತಾಯವಾಗಬೇಕಿತ್ತು. ಆದರೆ ಕೊರೊನಾದಿಂದ ಮತ್ತಷ್ಟು ತಡವಾದ ಕಾರಣ ಇನ್ನು ಚಿತ್ರೀಕರಣ ಮುಕ್ತಾಯವಾಗಿಲ್ಲ.

  Yash Next Movie : ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು? | Filmibeat Kannada

  ಬಹುನಿರೀಕ್ಷೆಯ ಸಿನಿಮಾ ಅಕ್ಟೋಬರ್ 13ರಂದು ತೆರೆಗೆ ಬರುತ್ತಿದೆ. ತೆಲುಗು ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ನಾಯಕಿಯರಾಗಿ ಅಲಿಯಾ ಭಟ್, ಒಲಿವಿಯಾ ಮೋರಿಸ್ ಕಾಣಿಸಿಕೊಂಡಿದ್ದಾರೆ.

  English summary
  Hollywood famous stunt director Nick Powell joins ss rajamouli's rrr movie climax shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X