Don't Miss!
- Technology
ಇನ್ಮುಂದೆ ನಿಮ್ಮ ಕೆಮ್ಮು ಮತ್ತು ಗೊರಕೆಗಳನ್ನು ಕೂಡ ಟ್ರ್ಯಾಕ್ ಮಾಡಲು ಗೂಗಲ್ ಪ್ಲಾನ್!
- Automobiles
ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!
- Sports
RCB vs RR: ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ಹೀನಾಯ ಸೋಲಿಗೆ ಈ 6 ಆಟಗಾರರೇ ಕಾರಣ!
- News
ಪಂಕ್ಚರ್ ಅಂಗಡಿ ಅನಕ್ಷರಸ್ಥನಿಂದ ವರ್ಷಕ್ಕೆ 7 ಕೋಟಿ ಸಂಪಾದನೆ
- Lifestyle
Today Rashi Bhavishya: ಶನಿವಾರದ ದಿನ ಭವಿಷ್ಯ: ಈ ರಾಶಿಯ ವ್ಯಾಪಾರಿಗಳಿಗೆ ಅದೃಷ್ಟದ ದಿನ
- Finance
ಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆ
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಸರ್ಕಾರು ವಾರಿ ಪಾಟ' ಸಿನಿಮಾಕ್ಕೆ ಮಹೇಶ್ ಬಾಬು ಪಡೆದ ಸಂಭಾವನೆ ಎಷ್ಟು?
ಮಹೇಶ್ ಬಾಬು ಪಕ್ಕಾ ಕ್ಲಾಸ್ ನಟ. ಪ್ಯಾನ್ ಇಂಡಿಯಾ ಸಿನಿಮಾ ಮಾಡದೇ ಇದ್ದರೂ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಹೇಶ್ ಬಾಬುಗೆ ಅಭಿಮಾನಿಗಳಿದ್ದಾರೆ. ಅವರ ಅಂದಕ್ಕೆ ಮಾರುಹೋಗದವರ ಸಂಖ್ಯೆ ಕಡಿಮೆ.
ಮಹೇಶ್ ಬಾಬು ಪಕ್ಕಾ ಪೈಸಾ ವಸೂಲ್ ನಟ. ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗುವುದು ಬಹಳ ಅಪರೂಪ. ಇತ್ತೀಚೆಗಷ್ಟೆ ಕೇವಲ ಸಂದೇಶವುಳ್ಳ ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತಿರುವ ಮಹೇಶ್ ಬಾಬುಗೆ ಕೌಟುಂಬಿಕ ಫ್ಯಾನ್ಸ್ ಸಂಖ್ಯೆ ಮೊದಲಿಗಿಂತಲೂ ಹೆಚ್ಚಾಗಿದೆ.
ಇದೀಗ ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾ ಬಿಡುಗಡೆ ಆಗಿದ್ದು, ಮಧ್ಯಮ ವರ್ಗದ ಆರ್ಥಿಕ ಸಮಸ್ಯೆಗಳು, ಬ್ಯಾಂಕಿಂಗ್ ವ್ಯವಸ್ಥೆ, ಖಾಸಗಿ ಸಾಲ ನೀಡುವವರ ಹಿಂಸೆ ಇತರೆ ವಿಷಯಗಳ ಮೇಲೆ ಸಿನಿಮಾ ಬೆಳಕು ಚೆಲ್ಲಿದೆ. ಸಿನಿಮಾ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾದ ಬಗೆಗಿನ ಚರ್ಚೆಯ ಜೊತೆಗೆ ಈ ಸಿನಿಮಾಕ್ಕೆ ಮಹೇಶ್ ಬಾಬು ಪಡೆದ ಸಂಭಾವನೆ ಬಗ್ಗೆಯೂ ಚರ್ಚೆಗಳಾಗುತ್ತಿವೆ.
ಅತಿ ಹೆಚ್ಚು ಸಂಭಾವನೆ ಪಡೆವ ದಕ್ಷಿಣ ಭಾರತದ ನಟರಲ್ಲಿ ಮಹೇಶ್ ಬಾಬು ಸಹ ಒಬ್ಬರು. ಆದರೆ 'ಸರ್ಕಾರು ವಾರಿ ಪಾಟ' ಸಿನಿಮಾಕ್ಕೆ ಈ ಹಿಂದಿನ ಸಿನಿಮಾಗಳಿಗಿಂತಲೂ ಹೆಚ್ಚಿನ ಸಂಭಾವನೆಯನ್ನು ಮಹೇಶ್ ಬಾಬು ಪಡೆದಿದ್ದಾರೆ ಎನ್ನಲಾಗುತ್ತಿದೆ.

ಮಹೇಶ್ ಪಡೆದ ಸಂಭಾವನೆ ಏಷ್ಟು?
'ಸರ್ಕಾರು ವಾರಿ ಪಾಟ' ಸಿನಿಮಾಕ್ಕೆ ಮಹೇಶ್ ಬಾಬು, ಸುಮಾರು 45 ರಿಂದ 50 ಕೋಟಿಗಳಷ್ಟು ಸಂಭಾವನೆ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾ ವ್ಯವಹಾರ ವಿಶ್ಲೇಷಕ ರಮೇಶ್ ಬಾಲಾ ಮಾಡಿರುವ ಟ್ವೀಟ್ ಪ್ರಕಾರ, ಸಾಮಾನ್ಯ ಸಿನಿಮಾಗಳಿಗೆ ಮಹೇಶ್ ಬಾಬು 35 ಕೋಟಿ ಪಡೆಯುತ್ತಾರೆ. ಅವರ ಸಂಭಾವನೆ 35 ರಿಂದ 50 ಕೋಟಿ ನಡುವಲ್ಲಿ ಇದೆ ಎಂದಿದ್ದಾರೆ.

ಜಾಹೀರಾತುಗಳಿಂದ ದೊಡ್ಡ ಮೊತ್ತದ ಸಂಭಾವನೆ
ಸಿನಿಮಾಗಳ ಜೊತೆಗೆ ಜಾಹೀರಾತುಗಳಲ್ಲಿ ಸಹ ಮಹೇಶ್ ಬಾಬು ನಟಿಸುತ್ತಾರೆ. ಜಾಹೀರಾತುಗಳಿಂದಲೂ ದೊಡ್ಡ ಮೊತ್ತದ ಸಂಭಾವನೆಯನ್ನೇ ಮಹೇಶ್ ಬಾಬು ಪಡೆಯುತ್ತಾರೆ. ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದಂತೆ ಕೇವಲ ಜಾಹೀರಾತುಗಳಲ್ಲಿ ನಟಿಸಿ ಅದರಿಂದ ಬಂದ ಸಂಭಾವನೆಯಿಂದಲೇ ದೊಡ್ಡ ಆಸ್ತಿಯೊಂದನ್ನು ಮಹೇಶ್ ಬಾಬು ಖರೀದಿಸಿದ್ದರಂತೆ.

ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಮಹೇಶ್
ಮಹೇಶ್ ಬಾಬು ಸಮಾಜ ಸೇವೆಯಲ್ಲಿ ಸಹ ತೊಡಗಿಕೊಂಡಿದ್ದಾರೆ. ಹಸುಗೂಸುಗಳ ರಕ್ಷಣೆಗೆ ಮಹೇಶ್ ಬಾಬು ಹಾಗೂ ಪತ್ನಿ ನಮ್ರತಾ ಶಿರೋಡ್ಕರ್ ಟೊಂಕಕಟ್ಟಿದ್ದಾರೆ. ಈ ದಂಪತಿಯ ಮೊದಲ ಮಗು ಸಹ ಹುಟ್ಟಿದಾಗ ಹಲವು ಸಮಸ್ಯೆಗಳನ್ನು ಅನುಭವಿಸಿತ್ತಂತೆ ಹಾಗಾಗಿಯೇ ಬಡ ಮಕ್ಕಳ ಜೀವ ಉಳಿಸುವ ಕಾರ್ಯದಲ್ಲಿ ಮಹೇಶ್ ಬಾಬು ಹಾಗೂ ನಮ್ರತಾ ತೊಡಗಿಕೊಂಡಿದ್ದಾರೆ. ಜೊತೆಗೆ ನೆಲ್ಲೂರು ಬಳಿ ಹಳ್ಳಿಯೊಂದನ್ನು ದತ್ತಿಗೆ ತೆಗೆದುಕೊಂಡಿರುವ ಮಹೇಶ್ ಬಾಬು ಅಲ್ಲಿನ ಜನರಿಗೆ ಕುಡಿಯುವ ನೀರು, ಆರೋಗ್ಯ ವ್ಯವಸ್ಥೆ, ಶಿಕ್ಷಣ ಇತರೆಗಳ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ರಾಜಮೌಳಿ ಜೊತೆ ಸಿನಿಮಾ
'ಸರ್ಕಾರು ವಾರಿ ಪಾಟ' ಸಿನಿಮಾ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಈ ಸಿನಿಮಾದ ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗೆ ಹೊಸ ಸಿನಿಮಾ ಒಂದರಲ್ಲಿ ಮಹೇಶ್ ಬಾಬು ನಟಿಸಲಿದ್ದಾರೆ. ಆ ಬಳಿಕ ರಾಜಮೌಳಿ ನಿರ್ದೇಶನದ ಹೊಸ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸಲಿದ್ದಾರೆ. ರಾಜಮೌಳಿ ನಿರ್ದೇಶಿಸಲಿರುವ ಸಿನಿಮಾದಲ್ಲಿ ಮಹೇಶ್ ಬಾಬು ಬಾಂಡ್ ಪಾತ್ರದಲ್ಲಿ ನಟಿಸಲಿದ್ದಾರಂತೆ.