For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣದಲ್ಲಿ ರಕುಲ್ ಹೆಸರು, ಹಳೇ ಫೋಟೋ ವೈರಲ್, ಟಾಲಿವುಡ್‌ಗೂ ಆತಂಕ!

  |

  ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್‌ಸಿಬಿ ಬಂಧನದಲ್ಲಿರುವ ನಟಿ ರಿಯಾ ಚಕ್ರವರ್ತಿ, 25 ಜನರು ಹೆಸರು ಸೂಚಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಪಟ್ಟಿಯಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ಸಾರಾ ಅಲಿ ಖಾನ್ ಅವರ ಹೆಸರು ಪ್ರಮುಖವಾಗಿದೆ.

  ಡ್ರಗ್ಸ್ ಸುಳಿಯಲ್ಲಿ ರಕುಲ್ ಪ್ರೀತ್ ಸಿಂಗ್ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆ, ಕೆಲವು ಹಳೆಯ ಫೋಟೋಗಳು, ವಿಡಿಯೋಗಳು, ಸಂದರ್ಶನಗಳು ವೈರಲ್ ಆಗಿದೆ. ರಕುಲ್ ಹೆಸರು ಎನ್‌ಸಿಬಿ ಪಟ್ಟಿಯಲ್ಲಿದೆ ಎನ್ನುತ್ತಿದ್ದಂತೆ ಈ ಕಡೆ ಟಾಲಿವುಡ್ ಇಂಡಸ್ಟ್ರಿಗೂ ಆತಂಕ ಹೆಚ್ಚಾಗಿದೆ. ಮುಂದೆ ಓದಿ.....

  ಡ್ರಗ್ಸ್‌ ಪ್ರಕರಣ: ಇಬ್ಬರು ಟಾಪ್ ನಟಿಯರ ಹೆಸರು ಹೇಳಿದ ರಿಯಾ ಚಕ್ರವರ್ತಿ?ಡ್ರಗ್ಸ್‌ ಪ್ರಕರಣ: ಇಬ್ಬರು ಟಾಪ್ ನಟಿಯರ ಹೆಸರು ಹೇಳಿದ ರಿಯಾ ಚಕ್ರವರ್ತಿ?

  ಡ್ರಗ್ಸ್ ಬೇಡ ಎಂದು ಪ್ರಚಾರ ಮಾಡಿದ್ದ ರಕುಲ್

  ಡ್ರಗ್ಸ್ ಬೇಡ ಎಂದು ಪ್ರಚಾರ ಮಾಡಿದ್ದ ರಕುಲ್

  2017ರಲ್ಲಿ ಹೈದರಾಬಾದ್ ಪೊಲೀಸರು ಹಮ್ಮಿಕೊಂಡಿದ್ದ ಡ್ರಗ್ಸ್ ವಿರೋಧಿ ಅಭಿಯಾನದಲ್ಲಿ (#SayNoToDrugs) ನಟಿ ರಕುಲ್ ಪ್ರೀತ್ ಸಿಂಗ್ ಪ್ರಚಾರ ಮಾಡಿದ್ದರು. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಕುಲ್ ಟ್ರೋಲ್‌ಗೆ ಗುರಿಯಾಗಿದ್ದಾರೆ.

  ಡ್ರಗ್ಸ್ ಅಪಾಯ ಎಂದಿದ್ದ ನಟಿ

  ಡ್ರಗ್ಸ್ ಅಪಾಯ ಎಂದಿದ್ದ ನಟಿ

  ರಕುಲ್ ಪ್ರೀತ್ ಸಿಂಗ್ ಟಿವಿ ಸಂದರ್ಶನಗಳಲ್ಲಿ ಭಾಗಿಯಾಗಿದ್ದ ವೇಳೆ ಡ್ರಗ್ಸ್ ಜೀವನಕ್ಕೆ ಅಪಾಯ ಎಂದಿರುವ ವಿಡಿಯೋ ತುಣುಕು ಸಹ ವೈರಲ್ ಆಗಿದೆ. ಫಿಟ್ನೆಸ್ ಬಗ್ಗೆ ಸಲಹೆ ರಕುಲ್ ಸಲಹೆ ನೀಡಿರುವ ವಿಡಿಯೋ ಸಹ ಟ್ರೋಲ್ ಆಗ್ತಿದೆ.

  ಟಾಲಿವುಡ್‌ಗೆ ಹೆಚ್ಚಿದ ಆತಂಕ!

  ಟಾಲಿವುಡ್‌ಗೆ ಹೆಚ್ಚಿದ ಆತಂಕ!

  ರಕುಲ್ ಪ್ರೀತ್ ಸಿಂಗ್ ಬಾಲಿವುಡ್‌ ಇಂಡಸ್ಟ್ರಿಗಿಂತ ತೆಲುಗು ಚಿತ್ರರಂಗದಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ಹೀಗಾಗಿ, ಡ್ರಗ್ಸ್ ಕರಿ ನೆರಳು ಟಾಲಿವುಡ್‌ಗೂ ಬರಲಿದೆಯಾ ಎಂಬ ಆತಂಕ ತೆಲುಗು ಮಂದಿಯನ್ನು ಕಾಡುತ್ತಿದೆ. ಈ ಹಿಂದೆ ತೆಲುಗು ಇಂಡಸ್ಟ್ರಿಯಲ್ಲಿ ಡ್ರಗ್ಸ್ ಜಾಲದ ತನಿಖೆ ಬಹಳ ದೊಡ್ಡ ಮಟ್ಟದಲ್ಲಿ ನಡೆದಿತ್ತು.

  Rakesh Adiga spiritual Rap , ಕನ್ನಡಧ Rapperಗಳಿಗೆ ಕಿವಿಮಾತು | Rakesh Adiga | Filmibeat Kannada
  ಎನ್‌ಸಿಬಿಯಿಂದ ನೋಟಿಸ್!

  ಎನ್‌ಸಿಬಿಯಿಂದ ನೋಟಿಸ್!

  ರಿಯಾ ಚಕ್ರವರ್ತಿ ಹೇಳಿಕೆ ನೀಡಿರುವ ಪಟ್ಟಿಯಲ್ಲಿ ರಕುಲ್ ಪ್ರೀತ್ ಸಿಂಗ್ ಹೆಸರಿದೆ ಎಂದು ಹೇಳಲಾಗಿದೆ. ಈ ಸಂಬಂಧ ಎನ್‌ಸಿಬಿ ಅಧಿಕಾರಿಗಳಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ರಕುಲ್, ಸಾರಾ ಅಲಿ ಖಾನ್ ಸೇರಿದಂತೆ ಇತರರಿಗೆ ಎನ್‌ಸಿಬಿ ಇಲಾಖೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡುವ ಸಾಧ್ಯತೆ ಹೆಚ್ಚಿದೆ.

  English summary
  Hyderabad Police promoted #SayNoToDrugs with Rakul Preet Singh in 2017. now, this picture went to viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X