For Quick Alerts
  ALLOW NOTIFICATIONS  
  For Daily Alerts

  "ಕಿಸ್ಸಿಂಗ್ ಸೀನ್ ನಂತ್ರ ಕ್ಯಾರವಾನ್‌ನಲ್ಲಿ ಅತ್ತಿದ್ದೆ": ಅಂಜಲಿ ಹೇಳಿದ ಆ ನಟನ್ಯಾರು?

  |

  ತೆಲುಗು ನಟಿ ಅಂಜಲಿ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಪುನೀತ್ ರಾಜ್‌ಕುಮಾರ್‌ ಜೊತೆ 'ರಣವಿಕ್ರಮ' ಸೇರಿ ಮೂರ್ನಾಲ್ಕು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅಂಜಲಿ ಕಿಸ್ಸಿಂಗ್ ಸೀನ್ ಮತ್ತು ಇಂಟಿಮೇಟ್ ಸಿನಿಮಾಗಳ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದಾರೆ. ಅದೇ ವೇಳೆ ಕೆಲವೊಮ್ಮೆ ಕಿಸ್ಸಿಂಗ್ ಸೀನ್ ನಂತರ ಬಹಳ ಅತ್ತಿತ್ತು ಇದೆ ಎಂದಿದ್ದಾರೆ.

  ಶಂಕರ್ ನಿರ್ದೇಶನದಲ್ಲಿ ರಾಮ್‌ಚರಣ್ ನಟನೆಯ ಹೊಸ ಚಿತ್ರದಲ್ಲಿ ನಟಿ ಅಂಜಲಿ ನಟಿಸುತ್ತಿದ್ದಾರೆ. ಮತ್ತೊಂದು ಕಡೆ 'ಫಾಲ್' ಎನ್ನುವ ವೆಬ್‌ ಸೀರಿಸ್‌ನಲ್ಲಿ ಮಿಂಚಿದ್ದಾರೆ. ಈ ವೆಬ್‌ ಸೀರಿಸ್ ಪ್ರಮೋಷನ್ ಭಾಗವಾಗಿ ಸಂದರ್ಶನಗಳಲ್ಲಿ ಭಾಗಿ ಆಗಿದ್ದಾರೆ. ಅಂಜಲಿ ನಾಯಕಿಯಾಗಿ ನಟಿಸಿರುವುದು ಮಾತ್ರವಲ್ಲ. ಐಟಂ ಸಾಂಗ್‌ಗಳಲ್ಲೂ ಮಿಂಚಿದ್ದಾರೆ. ಇತ್ತೀಚೆಗೆ ಕೆಲ ಇಂಟಿಮೇಟ್ ಸೀನ್‌ಗಳಲ್ಲೂ ಕಾಣಿಸಿಕೊಂಡಿದ್ದಾರೆ. ಸಂದರ್ಶನದ ವೇಳೆ ಸಿನಿಮಾಗಳಲ್ಲಿ ಹಾಟ್ ದೃಶ್ಯಗಳಲ್ಲಿ ನಟಿಸುವ ಬಗ್ಗೆ ಆಕೆ ಮಾತನಾಡಿದ್ದಾರೆ. ಪಾತ್ರಕ್ಕಾಗಿ ಕೆಲವೊಮ್ಮೆ ಅಂತಹ ಸನ್ನಿವೇಶಗಳಲ್ಲಿ ನಟಿಸಬೇಕಾಗುತ್ತದೆ ಎಂದಿದ್ದಾರೆ.

  "2023ರಲ್ಲಿ ಪ್ರಭಾಸ್‌ಗೆ ಸಂಕಷ್ಟ ಕಾದಿದೆ.. ಆತ ಜಾತಕ ನಂಬಲ್ಲ ಅದೇ ದೊಡ್ಡ ಸಮಸ್ಯೆ": ವೇಣುಸ್ವಾಮಿ

  ಅಂಜಲಿ ನಟನೆಯ ತಮಿಳಿನ 'ಫಾಲ್' ವೆಬ್ ಸೀರಿಸ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಸ್ಪೆನ್ಸ್ ಥ್ರಿಲ್ಲರ್ ಸೀರಿಸ್‌ಗೆ ಭರ್ಜರಿ ರೆಸ್ಪಾನ್ಸ್ ಕೂಡ ಸಿಗುತ್ತಿದೆ.

  ಇಂಟಿಮೇಟ್ ಸೀನ್ಸ್ ಮಾಡೋದು ಕಷ್ಟ

  ಇಂಟಿಮೇಟ್ ಸೀನ್ಸ್ ಮಾಡೋದು ಕಷ್ಟ

  "ನನ್ನ ಕರಿಯರ್‌ನಲ್ಲಿ ಎಂತಹ ಕಷ್ಟದ ಪಾತ್ರದಲ್ಲಿ ನಟಿಸುವುದಕ್ಕೂ ಸಿದ್ಧ. ಆದರೆ ಇಷ್ಟವಿಲ್ಲದ ವ್ಯಕ್ತಿಗಳ ಜೊತೆ ಇಂಟಿಮೇಟ್ ಸೀನ್‌ಗಳಲ್ಲಿ ನಟಿಸೋದು ಕಷ್ಟ. ಅಂತಹವರ ಜೊತೆ ಕಿಸ್ಸಿಂಗ್‌ ಸೀನ್‌ನಲ್ಲಿ ಕಾಣಿಸಿಕೊಳ್ಳುವುದು ಅಂದರೆ ನರಕ. ಕೆಲವೊಮ್ಮೆ ನನಗೆ ಅಂತಹ ಸನ್ನಿವೇಶಗಳು ಎದುರಾಗಿದೆ. ಏನೇ ಅಭಿನಯ ಆದರೂ ಒಂದು ಹಂತದವರೆಗೂ ಓಕೆ. ಅದು ಮಿತಿ ಮೀರಿದರೆ ತಡೆದುಕೊಳ್ಳುವುದು ನಿಜಕ್ಕೂ ಕಷ್ಟ" ಎಂದು ಹೇಳಿದ್ದಾರೆ.

  ಕ್ಯಾರವಾನ್‌ನಲ್ಲಿ ಅತ್ತಿದ್ದೆ

  ಕ್ಯಾರವಾನ್‌ನಲ್ಲಿ ಅತ್ತಿದ್ದೆ

  "ನಾವು ಒಂದು ಪಾತ್ರವಾಗಿ ನಟಿಸುತ್ತೇವೆ. ಆ ಪಾತ್ರ ನಗಬೇಕು, ಅಳಬೇಕು, ಅದೇ ರೀತಿ ರೊಮ್ಯಾಂಟಿಕ್ ಸೀನ್‌ನಲ್ಲಿ ಕಾಣಿಸಿಕೊಳ್ಳಬೇಕು ಅಂದರೆ ಕಾಣಿಸಿಕೊಳ್ಳಲೇಬೇಕು. ಈ ಕಥೆ ಹೇಳುವಾಗಲೂ ಇಂತಹ 2 ಸನ್ನಿವೇಶಗಳು ಇದೆ. ನೀವು ನಟಿಸಿದರೆ ಚೆನ್ನಾಗಿರುತ್ತದೆ ಎಂದರು. ನಾನು ಆ ಬಗ್ಗೆ ಎಲ್ಲಾ ಚರ್ಚಿಸಿ ನಂತರ ನಟಿಸಲು ಒಪ್ಪಿದೆ ಎಂದಿದ್ದಾರೆ. ಕೆಲವೊಮ್ಮೆ ಇಷ್ಟವಿಲ್ಲದವರ ಜೊತೆ ಇಂಟಿಮೇಟ್ ಸೀನ್‌ನಲ್ಲಿ ನಟಿಸಿದ ನಂತರ ಕ್ಯಾರವ್ಯಾನ್‌ಗೆ ಹೋಗಿ ಅತ್ತಿದ್ದು ಇದೆ. ಇಷ್ಟವಿಲ್ಲದಿದ್ದರೂ ಅದನ್ನು ಮಾಡಬೇಕು ಅಂದಾಗ ನೋವಾಗುತ್ತದೆ" ಎಂದಿದ್ದಾರೆ.

  ನಾವು ಬರೀ ಅಭಿನಯ ಮಾಡ್ತೇವೆ

  ನಾವು ಬರೀ ಅಭಿನಯ ಮಾಡ್ತೇವೆ

  "ಇನ್ನು ಇಂತಹ ಸನ್ನಿವೇಶಗಳ ಚಿತ್ರೀಕರಣದ ವೇಳೆ ಕೆಲವೇ ಜನ ಸೆಟ್‌ನಲ್ಲಿ ಇರುತ್ತಾರೆ ಎಂದು ಹೇಳುತ್ತಾರೆ. ಒಂದು ಸೀನ್ ಚಿತ್ರೀಕರಣ ಅಂದರೆ ನಿರ್ದೇಶಕ, ಕ್ಯಾಮರಾಮನ್, ಹೀರೊ ಹೀಗೆ ಕೊನೆ ಪಕ್ಷ 15 ಜನ ಆದರೂ ಇರಲೇಬೇಕಾಗುತ್ತದೆ. ಅವರ ಮುಂದೆ ನಟಿಸೋದು ಹೆಣ್ಣು ಮಕ್ಕಳಿಗೆ ನಿಜಕ್ಕೂ ಕಷ್ಟ ಆಗುತ್ತದೆ. ಅದು ನಿಜಕ್ಕೂ ಅಭಿನಯ ಆಗಿರುತ್ತದೆ. ಆ ದೃಶ್ಯದ ನಂತರ ಮತ್ತೊಂದು ದೃಶ್ಯದಲ್ಲಿ ಅದೇ ನಟನ ಜೊತೆ ಜಗಳ ಆಡುವ ಸನ್ನಿವೇಶವನ್ನು ಶೂಟ್ ಮಾಡುತ್ತೇವೆ. ಆದರೂ ಆ ಕ್ಷಣಕ್ಕೆ ಬಹಳ ನೋವಾಗುತ್ತದೆ" ಎಂದು ಅಂಜಲಿ ತಿಳಿಸಿದ್ದಾರೆ.

  ಅಂಜಲಿ ಕಿಸ್ಸಿಂಗ್ ಸೀನ್ಸ್

  ಅಂಜಲಿ ಕಿಸ್ಸಿಂಗ್ ಸೀನ್ಸ್

  ಇನ್ನು ಅಂಜಲಿ ಈ ರೀತಿ ಹೇಳುತ್ತಿದ್ದಂತೆ ಆಕೆ ಯಾವ ಯಾವ ಚಿತ್ರದಲ್ಲಿ ಕಿಸ್ಸಿಂಗ್ ಸೀನ್‌ನಲ್ಲಿ ನಟಿಸಿದ್ದರು? ಎಂದು ನೆಟ್ಟಿಗರು ಹುಡುಕಾಡುತ್ತಿದ್ದಾರೆ. 'ಸತಿ ಲೀಲಾವತಿ' ಚಿತ್ರದಲ್ಲಿ ಇಂತದ್ದೇ ಹಾಟ್ ಸನ್ನಿವೇಶದಲ್ಲಿ ನಟಿಸಿದ್ದರು. 'ಪಾವ' ಕದೈಗಳ್ ಚಿತ್ರದಲ್ಲಿ ಬಾಲಿವುಡ್ ನಟಿ ಕಲ್ಕಿ ಕೊಚ್ಲಿನ್ ಜೊತೆಗೂ ಲಿಪ್ ಲಾಕ್ ಮಾಡಿದ್ದರು. ತಮಿಳು ನಟ ಆರ್ಯ ಜೊತೆಗೂ ಚಿತ್ರವೊಂದರಲ್ಲಿ ಕಿಸ್ಸಿಂಗ್ ಸೀನ್‌ನಲ್ಲಿ ಕಾಣಿಸಿಕೊಂಡಿದ್ದರು.

  English summary
  I Cried After Acting in Kissing Scenes: Telugu Actress Anjali Sensational Comments Goes Viral. Actress Opens about difficulties In Doing intimate Scene at recent interview. know more.
  Friday, December 30, 2022, 17:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X